ದಾಂಪತ್ಯ ಜೀವನಕ್ಕೆ ಕಾಲಿಟ್ಟ ಗಾಯಕಿ ಪಲಕ್ ಮುಚ್ಚಲ್

Public TV
1 Min Read

ಗಾಯಕಿ ಪಲಕ್ ಮುಚ್ಚಲ್(Palak Muchchal) ಬಹುಕಾಲದ ಗೆಳೆಯನ ಜೊತೆ ಹಸೆಮಣೆ ಏರಿದ್ದಾರೆ. ಈ ಮೂಲಕ ತಮ್ಮ ಅಭಿಮಾನಿಗಳಿಗೆ ಗಾಯಕಿ ಪಲಕ್ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಸದ್ಯ ಈ ಜೋಡಿಯ ಮದುವೆ ಮತ್ತು ರಿಸೆಪ್ಷನ್‌ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್‌ ವೈರಲ್‌ ಆಗುತ್ತಿದೆ.

 

View this post on Instagram

 

A post shared by Palak Muchhal (@palakmuchhal3)

ಕನ್ನಡ, ತಮಿಳು, ತೆಲಗು, ಹಿಂದಿ ಸೇರಿದಂತೆ ಸಾಕಷ್ಟು ಭಾಷೆಯ ಹಾಡುಗಳು ಪಲಕ್ ಕಂಠದಲ್ಲಿ ಮೂಡಿ ಬಂದಿದೆ. ತಮ್ಮ ಸುಮಧುರ ಕಂಠದ ಮೂಲಕ ಮನೆ ಮಾತಾಗಿರುವ ಪಲಕ್ ಇದೀಗ ಮಿಥುನ್ ಶರ್ಮಾ(Mithun Sharma) ಜೊತೆ ಹಸೆಮಣೆ ಏರಿದ್ದಾರೆ. ಗುರುಹಿರಿಯರ ಸಮ್ಮುಖದಲ್ಲಿ (ನ.6)ರಂದು ಈ ಜೋಡಿ ದಾಂಪತ್ಯ ಕಾಲಿಟ್ಟಿದ್ದಾರೆ. ಇದನ್ನೂ ಓದಿ:ಸ್ಕ್ರಿಪ್ಟ್ ಚಿಂದಿಯಾಗಿದೆ, ಕಂಬ್ಯಾಕ್ ಚಿತ್ರದ ಬಗ್ಗೆ ರಮ್ಯಾ ರಿಯಾಕ್ಷನ್

 

View this post on Instagram

 

A post shared by Palak Muchhal (@palakmuchhal3)

ಪಲಕ್ ಮತ್ತು ಮಿಥುನ್ ಸಾಕಷ್ಟು ವರ್ಷಗಳಿಂದ ಒಬ್ಬರನೊಬ್ಬರು ಪ್ರೀತಿಸುತ್ತಿದ್ದರು. ಇದೀಗ ಕುಟುಂಬಸ್ಥರ ಒಪ್ಪಿಗೆ ಮೇರೆಗೆ ದಾಂಪತ್ಯ ಕಾಲಿಟ್ಟಿದ್ದಾರೆ. ಮಿಥುನ್ ಶರ್ಮಾ ಕೂಡ ಬಾಲಿವುಡ್‌ನಲ್ಲಿ ತಮ್ಮ ಸಂಗೀತ ನಿರ್ದೇಶನದ ಮೂಲಕ ಗುರುತಿಸಿಕೊಂಡಿದ್ದಾರೆ. ಇನ್ನೂ ಈ ಜೋಡಿಯ ಮದುವೆಗೆ ಅನೇಕ ಸೆಲೆಬ್ರಿಟಿಗಳು ಸಾಕ್ಷಿಯಾಗಿದ್ದಾರೆ.

ಇನ್ನೂ ಅನೇಕ ಕಡೆಗಳಲ್ಲಿ ಸಂಗೀತ ಕಾರ್ಯಕ್ರಮ ನೀಡಿರುವ ಪಲಕ್, ಬಂದ ಹಣದಲ್ಲಿ ಮಕ್ಕಳ ಶಸ್ತ್ರ ಚಿಕಿತ್ಸೆಗೆ ಸಹಾಯ ಮಾಡಿದ್ದಾರೆ. 2200ಕ್ಕೂ ಹೆಚ್ಚು ಮಕ್ಕಳಿಗೆ ಜೀವ ಉಳಿಸಿದ್ದಾರೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *