ಪ್ರೈವೇಟ್ ಫೋಟೋ ಲೀಕ್ – ಮೋದಿಗೆ ಬೆದರಿಕೆ ಹಾಕಿದ್ದ ಗಾಯಕಿ ಚಿತ್ರರಂಗ ಬಿಡಲು ನಿರ್ಧಾರ

Public TV
2 Min Read

ಇಸ್ಲಾಮಾಬಾದ್: ಪಾಕಿಸ್ತಾನ ಗಾಯಕಿ ರಬಿ ಫಿರ್ಜಾದಾ ಪ್ರೈವೇಟ್ ಫೋಟೋ ಲೀಕ್ ಆಗುತ್ತಿದ್ದಂತೆ ಚಿತ್ರರಂಗ ಬಿಡಲು ನಿರ್ಧರಿಸಿದ್ದೇನೆ ಎಂದು ಸೋಮವಾರ ಟ್ವೀಟ್ ಮಾಡಿದ್ದಾಳೆ.

ರಬಿ ಪಿರ್ಜಾದಾ ತಮ್ಮ ಟ್ವಿಟ್ಟರಿನಲ್ಲಿ, “ನಾನು ರಬಿ ಫಿರ್ಜಾದಾ ಶೋಗಳನ್ನು ತ್ಯಜಿಸುತ್ತಿದ್ದೇನೆ. ಅಲ್ಲಾ ನನ್ನ ಎಲ್ಲಾ ಪಾಪಗಳನ್ನು ಕ್ಷಮಿಸಲಿ ಮತ್ತು ನನ್ನ ಪರವಾಗಿ ಜನರನ್ನು ನಿಲ್ಲುವಂತೆ ಮಾಡಲಿ” ಎಂದು ಟ್ವೀಟ್ ಮಾಡಿದ್ದಾಳೆ.

ಕಳೆದ ವಾರ ಸಾಮಾಜಿಕ ಜಾಲತಾಣಗಳಲ್ಲಿ ರಬಿಯ ಪ್ರೈವೇಟ್ ಫೋಟೋಗಳು ಲೀಕ್ ಆಗಿತ್ತು. ಫೋಟೋ ಲೀಕ್ ಆಗಿ ವೈರಲ್ ಆಗುತ್ತಿದ್ದಂತೆ ಜನರು ಆಕೆಯನ್ನು ಟ್ರೋಲ್ ಮಾಡಲು ಶುರು ಮಾಡಿದ್ದರು. ವರದಿಗಳ ಪ್ರಕಾರ, ಈ ಬಗ್ಗೆ ರಬಿ ಫೆಡೆರಲ್ ಇನ್‌ವೆಸ್ಟಿಗೇಶನ್ ಏಜೆನ್ಸಿಗೆ ದೂರು ನೀಡಿದ್ದಾಳೆ ಎನ್ನಲಾಗಿದೆ.

ಸೆಪ್ಟೆಂಬರ್ ತಿಂಗಳಿನಲ್ಲಿ ರಬಿ ಲಹೋರ್‌ನಲ್ಲಿರುವ ತನ್ನ ಬ್ಯೂಟಿ ಪಾರ್ಲರ್ ನಲ್ಲಿ ಹೆಬ್ಬಾವು ಮತ್ತು ಮೊಸಳೆ ಜೊತೆ ವಿಡಿಯೋ ಮಾಡಿ ಮೋದಿಗೆ ನಿಂದಿಸಿದ್ದಳು. ಆ ವಿಡಿಯೋ ವೈರಲ್ ಆಗುತ್ತಿದ್ದಂತೆ ರಬಿ ಫಿರ್ಜಾದಾವಿರುದ್ಧ ದೂರು ದಾಖಲಾಗಿತ್ತು.

ಹೆಬ್ಬಾವು ಮತ್ತು ಮೊಸಳೆಯನ್ನು ಹಿಡಿದು ವಿಡಿಯೋ ಮಾಡಿದ್ದ ರಬಿ, ನಾನು ಕಾಶ್ಮೀರಿ ಮಹಿಳೆ, ಭಾರತಕ್ಕಾಗಿ ನಾವು ಹಾವುಗಳೊಂದಿಗೆ ಸಿದ್ಧವಾಗಿದ್ದೇವೆ. ಈ ಉಡುಗೊರೆಗಳು ನಿಜಕ್ಕೂ ಮೋದಿಯವರಿಗೆ. ನೀವು ಕಾಶ್ಮೀರಿಗಳಿಗೆ ತೊಂದರೆ ನೀಡುತ್ತಿದ್ದೀರಿ. ಆದ್ದರಿಂದ ನಾನು ನಿಮಗಾಗಿ ಈ ವಿಶೇಷ ಉಡುಗೊರೆಯನ್ನು ಸಿದ್ಧಪಡಿಸಿದ್ದೇನೆ. ನೀವು ನರಕದಲ್ಲಿ ಸಾಯಲು ಸಿದ್ಧರಾಗಿ. ನನ್ನ ಸ್ನೇಹಿತರು ನರಕದಲ್ಲಿ ನಿಮ್ಮ ಜೊತೆ ಹಬ್ಬವನ್ನು ಮಾಡುತ್ತಾರೆ ಎಂದು ಹೇಳಿ ನಾಲಿಗೆ ಹರಿಬಿಟ್ಟಿದ್ದಳು.

ಇದಾದ ತನ್ನ ಟ್ವಿಟ್ಟರ್ ಖಾತೆಯಲ್ಲಿ ಆತ್ಮಹತ್ಯೆ ಬಾಂಬರ್ ರೀತಿಯಲ್ಲಿ ಉಡುಪು ಧರಿಸಿರುವ ಫಿರ್ಜಾದಾ, `ಮೋದಿ ಹಿಟ್ಲರ್’ ಹಾಗೂ `ಕಾಶ್ಮೀರದ ಭೇಟಿ’ ಎಂಬ ಹ್ಯಾಶ್ ಟ್ಯಾಗ್ ಬಳಸಿ ಟ್ವೀಟ್ ಮಾಡಿದ್ದಳು.

ಈ ಫೋಟೋ ಹಂಚಿಕೊಳ್ಳುತ್ತಿದಂತೆ ಹಲವು ನೆಟ್ಟಿಗರು ಗಾಯಕಿಯನ್ನು ಟ್ರೋಲ್ ಮಾಡಿ ಟೀಕೆ ಮಾಡಲು ಆರಂಭಿಸಿದ್ದರು. ಅಲ್ಲದೇ ಪಾಕಿಸ್ತಾನದ ಹಲವು ಮಂದಿ ಗಾಯಕಿ ವಿರುದ್ಧವೇ ಕಿಡಿಕಾರಿದ್ದು, ಗಾಯಕಿಯ ಈ ನಡೆ ಪಾಕಿಸ್ತಾನದ ವಿರುದ್ಧ ವಿಶ್ವ ಸಮುದಾಯಕ್ಕೆ ಋಣಾತ್ಮಕ ಭಾವನೆ ಮೂಡಲು ಕಾರಣವಾಗುತ್ತದೆ ಎಂದು ದೂರಿದ್ದಾರೆ.

ಇತ್ತ ಭಾರತೀಯ ನೆಟ್ಟಿಗರು ಗಾಯಕಿಯ ಪೋಸ್ಟ್ ಗೆ ಪ್ರತಿಕ್ರಿಯೆ ನೀಡಿ ಖುಷಿ ವ್ಯಕ್ತಪಡಿಸಿದ್ದರು. ಅಲ್ಲದೇ ಪೋಸ್ಟನ್ನು ಮತ್ತಷ್ಟು ವೈರಲ್ ಮಾಡಿ ಗಾಯಕಿಯ ಕಾಲೆಳೆಯುತ್ತಿದ್ದರು. ವಾವ್..! ನೀವು ಈ ಉಡುಗೆಯಲ್ಲಿ ಅದ್ಭುತವಾಗಿ ಕಾಣುತ್ತಿದ್ದು, ಪಾಕಿಸ್ತಾನಿ ಸಾಂಪ್ರದಾಯಕ ಉಡುಪು ಧರಿಸಿದಕ್ಕೆ ಧನ್ಯವಾದ. ಪಾಕ್ ರಾಷ್ಟ್ರೀಯ ಉಡುಗೆಯಲ್ಲಿ ಬಹಳ ಸುಂದರವಾಗಿ ಕಾಣುತ್ತಿದ್ದೀರಿ ಎಂದು ಕಾಲೆಳೆದಿದ್ದರು.

Share This Article
Leave a Comment

Leave a Reply

Your email address will not be published. Required fields are marked *