ಇದು ನಿನ್ನ ಭಾರತವಲ್ಲ- ಅಭಿಮಾನಿ ಮೇಲೆ ಹಲ್ಲೆಗೆ ಮುಂದಾದ ಪಾಕ್ ವೇಗಿ

Public TV
2 Min Read

ನ್ಯೂಯಾರ್ಕ್:‌ ಅಭಿಮಾನಿಯೊಬ್ಬನ ಮೇಲೆ ಪಾಕ್ ವೇಗಿ ಹ್ಯಾರೀಸ್ ರೌಫ್ ಹಲ್ಲೆಗೆ ಯತ್ನಿಸಿದ ಘಟನೆ ಅಮೆರಿಕದ (America) ಫ್ಲೋರಿಡಾದಲ್ಲಿ ನಡೆದಿದೆ.

ಹೌದು. ಹ್ಯಾರೀಸ್ ರೌಫ್ (Haris Rauf) ಅವರು ಅಭಿಮಾನಿಯ ಮೇಲೆ ಹಲ್ಲೆಗೆ ಯತ್ನಿಸಿರುವ ವೀಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್‌ ವೈರಲ್‌ ಆಗುತ್ತಿದೆ. ಈ ಬೆನ್ನಲ್ಲೇ ಪಾಕ್‌ ವೇಗಿ ಪ್ರತಿಕ್ರಿಯೆ ಕೂಡ ನೀಡಿದ್ದಾರೆ.

ನಡೆದಿದ್ದೇನು..?: ಪಾರ್ಕ್ ನಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಸೆಲ್ಫಿ ಕುರಿತಂತೆ ಅಭಿಮಾನಿ ಹಾಗೂ ಹ್ಯಾರಿಸ್ ರೌಫ್ ನಡುವೆ ಮಾತಿನ ಚಕಮಕಿ ನಡೆದಿದೆ. ಅಭಿಮಾನಿ ಮಾತಿನಿಂದ ಸಿಟ್ಟಿಗೆದ್ದ ರೌಫ್‌ ಓಡಿ ಬಂದು ಆತನ ಮೇಲೆ ಹಲ್ಲೆ ಮಾಡಲು ಮುಂದಾಗುತ್ತಾನೆ. ಇತ್ತ ರೊಚ್ಚಿಗೆದ್ದ ರೌಫ್‌ನನ್ನು ತಡೆಯಲು ಪತ್ನಿ ಯತ್ನಿಸುತ್ತಾರೆ. ಆದರೆ ಪತ್ನಿಯ ಕೈಯಿಂದ ಬಿಡಿಸಿಕೊಂಡು ಬಂದು ರೌಫ್‌ ಅಭಿಮಾನಿ ಮೇಲೆ ಹಲ್ಲೆಗೆ ಯತ್ನಿಸುತ್ತಾನೆ. ಈ ವೇಳೆ ಅಲ್ಲೇ ಇದ್ದ ಕೆಲವರು ರೌಫ್ ನನ್ನು ತಡೆದಿದ್ದಾರೆ. ಆಗ ರೌಫ್ ಮತ್ತು ಅಭಿಮಾನಿ ನಡುವೆ ವಾಗ್ವಾದ ಜೋರಾಗಿದೆ.

ಮಾತಿಗೆ ಮಾತು ಬೆಳೆಯುತ್ತಿದ್ದಂತೆಯೇ ಹ್ಯಾರಿಸ್ ರೌಫ್ ‘ತೇರಾ ಇಂಡಿಯಾ ನಹೀ ಹೈ ಯೇ’ (ಇದು ನಿನ್ನ ಭಾರತ ಅಲ್ಲ) ಎಂದು ಕಿರುಚಾಡುತ್ತಾನೆ. ಅದಕ್ಕೆ ಅಭಿಮಾನಿ “ಪಾಕಿಸ್ತಾನ್ ಸೆ ಹೂನ್” (ನಾನು ಪಾಕಿಸ್ತಾನದವನು) ಎಂದು ಉತ್ತರಿಸುತ್ತಾನೆ. ಅಲ್ಲದೇ ರೌಫ್, ನೀವು ನನ್ನ ತಂದೆಯನ್ನು ಹೇಗೆ ನಿಂದಿಸಿದ್ದೀರಿ (ಗಾಲಿ ಬಾಪ್ ಕೋ ದೇ ರಹಾ ಹೈ) ಎಂದು ಪ್ರಶ್ನಿಸಿದ್ದಾರೆ. ಆಗ ಅವರು ಇಂಡಿಯನ್ ಹಾಯ್ ಹೈ ಯೇ ‘ (ನಿಜವಾಗಿಯೂ ನಾವು ಭಾರತೀಯರು) ಎಂದು ಹೇಳುವುದನ್ನು ವೀಡಿಯೋದಲ್ಲಿ ಕೇಳಬಹುದಾಗಿದೆ. ಇದನ್ನೂ ಓದಿ: Exclusive: ದರ್ಶನ್ ಕೇಸ್‍ನ ರಿಮ್ಯಾಂಡ್ ಕಾಪಿ ಲಭ್ಯ- ಆಘಾತ, ಮೆದುಳು ರಕ್ತಸ್ರಾವದಿಂದ ಸ್ವಾಮಿ ಸಾವು

ರೌಫ್‌ ಹೇಳಿದ್ದೇನು..?: ವೀಡಿಯೋ ವೈರಲ್‌ ಆಗುತ್ತಿದ್ದಂತೆಯೇ ರೌಫ್ ತಮ್ಮ ಎಕ್ಸ್‌ ಖಾತೆಯಲ್ಲಿ ಸುದೀರ್ಘವಾಗಿ ಬರೆದುಕೊಂಡಿದ್ದಾರೆ. ತನ್ನ ಕುಟುಂಬದ ವಿರುದ್ಧ ಮಾತನಾಡುವುದನ್ನು ನಾನು ಸಹಿಸಲ್ಲ. ಇದಕ್ಕೆ ಪ್ರತಿಕ್ರಿಯೆ ನೀಡುವುದಕ್ಕೂ ನಾನು ಹಿಂಜರಿಯಲ್ಲ ಎಂದಿದ್ದಾರೆ.

ಈ ವಿಚಾರವನ್ನು ನಾನು ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳದೇ ಇರಲು ನಿರ್ಧಿಸಿದ್ದೆ. ಆದರೆ ಇದೀಗ ಅದರ ವೀಡಿಯೋ ಹೊರಬಂದಿದೆ. ಹೀಗಾಗಿ ಪರಿಸ್ಥಿತಿಯನ್ನು ಪರಿಹರಿಸುವುದು ಅಗತ್ಯವೆಂದು ನಾನು ಭಾವಿಸುತ್ತೇನೆ. ಸಾರ್ವಜನಿಕ ವ್ಯಕ್ತಿಗಳಾಗಿ, ನಾವು ಸಾರ್ವಜನಿಕರಿಂದ ಎಲ್ಲಾ ರೀತಿಯ ಪ್ರತಿಕ್ರಿಯೆಗಳನ್ನು ಸ್ವೀಕರಿಸಲು ಮುಕ್ತರಾಗಿದ್ದೇವೆ. ಅವರು ನಮ್ಮನ್ನು ಬೆಂಬಲಿಸಲು ಅಥವಾ ಟೀಕಿಸಲು ಅರ್ಹರು. ಆದಾಗ್ಯೂ, ನನ್ನ ಪೋಷಕರು ಮತ್ತು ನನ್ನ ಕುಟುಂಬದ ವಿಷಯಕ್ಕೆ ಬಂದಾಗ, ಅದಕ್ಕೆ ತಕ್ಕಂತೆ ಪ್ರತಿಕ್ರಿಯಿಸಲು ನಾನು ಹಿಂಜರಿಯುವುದಿಲ್ಲ. ಜನರು ಮತ್ತು ಅವರ ಕುಟುಂಬಗಳಿಗೆ ಅವರ ವೃತ್ತಿಯನ್ನು ಲೆಕ್ಕಿಸದೆ ಗೌರವವನ್ನು ತೋರಿಸುವುದು ಮುಖ್ಯವಾಗಿದೆ ಎಂದು ರೌಫ್‌ ತಿಳಿಸಿದ್ದಾರೆ.

USA ಮತ್ತು ವೆಸ್ಟ್ ಇಂಡೀಸ್‌ನಲ್ಲಿ ನಡೆಯುತ್ತಿರುವ ICC ಪುರುಷರ T20 ವಿಶ್ವಕಪ್ 2024 ರಲ್ಲಿ ಅರ್ಹತೆ ಪಡೆಯಲು ವಿಫಲವಾದ ನಂತರ ಪಾಕಿಸ್ತಾನ ತಂಡವು ಸೂಪರ್ 8 ಗುಂಪಿನಿಂದ ಹೊರಗುಳಿದಿದೆ. ಅಭಿಮಾನಿಗಳು, ಮಾಜಿ ಕ್ರಿಕೆಟಿಗರು ಮತ್ತು ವಿಮರ್ಶಕರಿಂದ ಟೀಕೆಗೆ ಒಳಗಾಗಿರುವ ಪಾಕಿಸ್ತಾನಿ ಕ್ರಿಕೆಟಿಗರು ಯಾರೊಂದಿಗೂ ಸಂವಹನ ನಡೆಸುತ್ತಿಲ್ಲ.

Share This Article