200 ಕೋಟಿ ಮೌಲ್ಯದ ಡ್ರಗ್ಸ್‌ ಸಾಗಿಸುತ್ತಿದ್ದ ಪಾಕಿಸ್ತಾನಿ ಹಡಗು ಗುಜರಾತ್‌ನಲ್ಲಿ ವಶ

Public TV
1 Min Read

ಗಾಂಧೀನಗರ: ಭಾರತೀಯ ಕರಾವಳಿ ಕಾವಲು ಪಡೆ ಮತ್ತು ಗುಜರಾತ್‌ ಭಯೋತ್ಪಾದನಾ ನಿಗ್ರಹ ದಳ (ATS) ಜಂಟಿ ಕಾರ್ಯಾಚರಣೆ ನಡೆಸಿ 200 ಕೋಟಿ ಮೌಲ್ಯದ ಡ್ರಗ್ಸ್‌ (Drugs) ಸಾಗಿಸುತ್ತಿದ್ದ ಪಾಕಿಸ್ತಾನದ ಹಡಗನ್ನು (Pakistani boat) ಗುಜರಾತ್‌ನಲ್ಲಿ (Gujarat) ವಶಪಡಿಸಿಕೊಳ್ಳಲಾಗಿದೆ.

ಹಡಗು ಅಕ್ರಮವಾಗಿ ಭಾರತದ ಜಲ ಗಡಿ ಪ್ರವೇಶಿಸಿತ್ತು. ಹಡಗಿನಲ್ಲಿ 200 ಕೋಟಿ ಮೌಲ್ಯದ 40 ಕೆಜಿ ಮಾದಕ ವಸ್ತುಗಳು ಸಿಕ್ಕಿದ್ದು, ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಹಡಗು 6 ಮೈಲುಗಳಷ್ಟು ಭಾರತೀಯ ಸಮುದ್ರ ಗಡಿಯೊಳಗೆ ಬಂದಿತ್ತು. ಈ ವೇಳೆ ಪಾಕಿಸ್ತಾನದ ಕೆಲವು ಪ್ರಜೆಗಳ ಬಂಧಿಸಲಾಗಿದೆ. ಇದನ್ನೂ ಓದಿ: ಸ್ಕೂಲ್ ಬಸ್ಸಿನೊಳಗೆ ಉಸಿರುಗಟ್ಟಿ ಬಾಲಕಿ ಸಾವು ಪ್ರಕರಣ- ಶಾಲೆ ಮುಚ್ಚಲು ಆದೇಶ

ಕರಾವಳಿ ಕಾವಲು ಪಡೆ ಮತ್ತು ರಾಜ್ಯ ಎಟಿಎಸ್ ಈ ಹಿಂದೆ ಗುಜರಾತ್ ಕರಾವಳಿಯಲ್ಲಿ ಮಾದಕವಸ್ತು ಕಳ್ಳಸಾಗಣೆಯ ಇಂತಹ ಪ್ರಯತ್ನಗಳನ್ನು ವಿಫಲಗೊಳಿಸಿದೆ. ಅಕ್ಟೋಬರ್ 2021 ರಲ್ಲಿ ಗುಜರಾತ್‌ನ ಮುಂದ್ರಾ ಬಂದರಿನಿಂದ 2,988 ಕೆಜಿ ಹೆರಾಯಿನ್ ಅನ್ನು ವಶಪಡಿಸಿಕೊಳ್ಳಲಾಯಿತು. ಇದು 21,000 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿತ್ತು.

ಕಳೆದ ತಿಂಗಳು ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಗುಜರಾತ್‌ನ ಕಚ್ ಜಿಲ್ಲೆಯ ಭಾರತ-ಪಾಕ್ ಗಡಿಯ ಸಮೀಪವಿರುವ ತೊರೆಯಿಂದ ಎರಡು ಪಾಕಿಸ್ತಾನಿ ಮೀನುಗಾರಿಕೆ ಬೋಟ್‌ಗಳನ್ನು ವಶಪಡಿಸಿಕೊಂಡಿತ್ತು. ಇದನ್ನೂ ಓದಿ: ಗೋವಾದಲ್ಲಿ ಕಾಂಗ್ರೆಸ್‌ಗೆ ಬಿಗ್ ಶಾಕ್ – ಇಂದು 8 ʼಕೈʼ ಶಾಸಕರು ಬಿಜೆಪಿ ಸೇರ್ಪಡೆ

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *