ಕ್ವೆಟ್ಟಾದಿಂದ ಪಾಕ್‌ ಸೇನೆ ಪಲಾಯನ – ಸೇನಾ ಠಾಣೆಗಳನ್ನ ವಶಕ್ಕೆ ಪಡೆದ ಬಲೂಚ್‌ ಹೋರಾಟಗಾರರು

By
1 Min Read

ಇಸ್ಲಾಮಾಬಾದ್:‌ ಇತ್ತ ಭಾರತದ ದಾಳಿಗೆ (India’s Strike) ತತ್ತರಿಸಿರುವ ಪಾಕ್‌ ಅಕ್ಷರಶಃ ನಡುಗಿಹೋಗಿದೆ. ಇದೇ ಸಮಯ ಬಳಸಿಕೊಂಡಿರುವ ಬಲೂಚಿಸ್ತಾನ್ ಲಿಬರೇಶನ್ ಆರ್ಮಿ (BLA) ತನ್ನ ಪ್ರತ್ಯೇಕ ದೇಶದ ಹೋರಾಟವನ್ನು ತೀವ್ರಗೊಳಿಸಿದೆ.

balochistan liberation army

ಅಂತಾರಾಷ್ಟ್ರೀಯ ಗಡಿಯಲ್ಲಿ ಹೆಚ್ಚುತ್ತಿರುವ ಘರ್ಷಣೆಗಳಿಗೆ ಭಾರತ-ಪಾಕಿಸ್ತಾನಕ್ಕೆ ಸೂಕ್ತ ಉತ್ತರ ನೀಡುತ್ತಿರುವಾಗ, ಇಸ್ಲಾಮಾಬಾದ್ ಈಗ ಮತ್ತೊಂದು ಭಾಗದಿಂದ ಮುತ್ತಿಗೆಗೆ ಒಳಗಾಗಿದೆ. ಬಲೂಚಿಸ್ತಾನ್ ಲಿಬರೇಶನ್ ಆರ್ಮಿ (ಬಿಎಲ್‌ಎ) ಪ್ರಾಂತೀಯ ರಾಜಧಾನಿ ಕ್ವೆಟ್ಟಾ ಸೇರಿದಂತೆ ಬಲೂಚಿಸ್ತಾನದಾದ್ಯಂತ (Balochistan) ಹಲವಾರು ಕಾರ್ಯತಂತ್ರದ ಸೇನಾ ಠಾಣೆಗಳನ್ನ ವಶಪಡಿಸಿಕೊಂಡಿದೆ ಎಂದು ಹೇಳಿಕೊಂಡಿದೆ. ಇದು ಪಾಕಿಸ್ತಾನಿ ಸೇನೆಯನ್ನು ಹಿಮ್ಮೆಟ್ಟುವಂತೆ ಮಾಡಿದೆ ಮತ್ತು ದೇಶದ ಪಶ್ಚಿಮ ರಕ್ಷಣಾ ವ್ಯವಸ್ಥೆಯನ್ನು ಅಸ್ತವ್ಯಸ್ತಗೊಳಿಸಿದೆ.

Balochistan

ಇದಕ್ಕೂ ಮುನ್ನ ಬಲೂಚಿಸ್ತಾನದಲ್ಲಿ ಹಲವೆಡೆ ಪಾಕಿಸ್ತಾನದ ಧ್ವಜಗಳನ್ನು ಇಳಿಸಿ ಬಲೂಚಿಸ್ತಾನದ ಧ್ವಜವನ್ನು ಹೋರಾಟಗಾರರು ಹಾರಿಸಿದ್ದರು. ಜಗತ್ತು ಪಾಕಿಸ್ತಾನದಿಂದ ತಮ್ಮ ರಾಜತಾಂತ್ರಿಕ ಕಾರ್ಯಾಚರಣೆಗಳನ್ನು ಹಿಂದಕ್ಕೆ ಪಡೆದು ಹೊಸದಾಗಿ ಉದಯೋನ್ಮುಖ ರಾಷ್ಟ್ರವಾದ ಬಲೂಚಿಸ್ತಾನಕ್ಕೆ ಸ್ಥಳಾಂತರಿಸುವ ಸಮಯ ಬಂದಿದೆ ಎಂದು ಹೇಳುತ್ತಿದ್ದಾರೆ. ಪಾಕಿಸ್ತಾನಕ್ಕೆ ವಿದಾಯ, ಬಲೂಚಿಸ್ತಾನಕ್ಕೆ ಸ್ವಾಗತ ಎಂದು ಬಿಎಲ್‌ಹೆಚ್‌ ಹೇಳಿತ್ತು. ಇದನ್ನೂ ಓದಿ: ಪಾಕಿಸ್ತಾನಿಗಳಿಗೆ ಶಸ್ತ್ರಾಸ್ತ್ರಗಳನ್ನ ತ್ಯಜಿಸುವಂತೆ ಅಮೆರಿಕ ಹೇಳಲು ಸಾಧ್ಯವಿಲ್ಲ: ಜೆಡಿ ವ್ಯಾನ್ಸ್

1971 ರಿಂದಲೂ ಪ್ರತ್ಯೇಕ ಬಲೂಚಿಸ್ತಾನ ದೇಶಕ್ಕಾಗಿ ಪಾಕಿಸ್ತಾನದ ಜತೆ ಸಂಘರ್ಷ ಜಾರಿಯಲ್ಲಿದೆ. ಪಾಕ್‌-ಭಾರತ ನಡುವಿನ ಉದ್ವಿಗ್ನತೆಯನ್ನು ಬಲೂಚ್‌ ಲಿಬರೇಷನ್‌ ಆರ್ಮಿ ಸದುಪಯೋಗಪಡಿಸಿಕೊಳ್ಳುತ್ತಿದೆ. ಇದನ್ನೂ ಓದಿ: ಕರಾಚಿಯ 15 ಕಡೆ ಭಾರೀ ಸ್ಫೋಟ – INS ವಿಕ್ರಾಂತ್‌ ನೌಕೆಯಿಂದ ಅಟ್ಯಾಕ್‌

Share This Article