`ಪಾಕಿಸ್ತಾನ ಜಿಂದಾಬಾದ್’ ಘೋಷಣೆ – 3 ವರ್ಷಗಳಲ್ಲಿ 12 ಕೇಸ್ ದಾಖಲು: ಪರಮೇಶ್ವರ್

1 Min Read

ಬೆ‌ಳಗಾವಿ: ರಾಜ್ಯದಲ್ಲಿ ಕಳೆದ 3 ವರ್ಷಗಳಲ್ಲಿ ಪಾಕಿಸ್ತಾನ ಜಿಂದಾಬಾದ್ ಘೋಷಣೆ (Pakistan Zindabad slogan) ಕೂಗಿದ ಕುರಿತು 12 ಕೇಸ್ ದಾಖಲು ಮಾಡಲಾಗಿದೆ ಅಂತ ಗೃಹ ಸಚಿವ ಪರಮೇಶ್ವರ್ (G Parameshwar) ತಿಳಿಸಿದ್ದಾರೆ.

ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಸಿಟಿ ರವಿ (RC Ravi) ಪ್ರಶ್ನೆ ಉತ್ತರ ನೀಡಿದ ಸಚಿವರು, 2023 ರಿಂದ 2025 ಅವಧಿಯಲ್ಲಿ 12 ಕೇಸ್ ಪಾಕಿಸ್ತಾನ ಜಿಂದಾಬಾದ್ ಕೂಗಿದ ಸಂಬಂಧ ಸ್ವಯಂ ಪ್ರೇರಿತ ದೂರು ಮತ್ತು ದೂರಿನ ಆಧಾರದಲ್ಲಿ ಕೇಸ್ ದಾಖಲು ಮಾಡಲಾಗಿದೆ. 12 ಕೇಸ್ ನಲ್ಲಿ 5 ಕೇಸ್ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಲಾಗಿದೆ. 2 ಕೇಸ್ ಬಿ ರಿಪೋರ್ಟ್ ವರದಿ ಸಲ್ಲಿಸಲಾಗಿದೆ. 3 ಕೇಸ್ ತನಿಖೆ ನಡೆಯುತ್ತಿದೆ. 1 ಕೇಸ್ ಸಿ ರಿಪೋರ್ಟ್ ಹಾಕಲಾಗಿದೆ. 1 ಕೇಸ್ FSL ನಿಂದ ವರದಿ ಬಾಕಿ ಬರಬೇಕಿದೆ ಅಂತ ಸಚಿವರು ತಿಳಿಸಿದರು. ಇದನ್ನೂ ಓದಿ: ಅವರಪ್ಪನ ಹೆಸರು ಕೆಡಿಸಿದ್ದು ವಿಜಯೇಂದ್ರ – ಎಲ್ಲಾ ಬಿಚ್ಚಿಡಬೇಕಾ? – ಡಿಕೆಶಿ ಫುಲ್‌ ಗರಂ

ಇನ್ನು 2.5 ವರ್ಷಗಳಲ್ಲಿ ಸ್ವಯಂ ಪ್ರೇರಿತವಾಗಿ ಪೊಲೀಸ್ ಇಲಾಖೆ ದಾಖಲು ಮಾಡಲಾಗಿದೆ. 2023ರಲ್ಲಿ 20,435 ಕೇಸ್, 2024 ರಲ್ಲಿ 19,152 ಹಾಗೂ 2025ರಲ್ಲಿ 21,712 ಕೇಸ್ ದಾಖಲು ಸ್ವಯಂ ಪ್ರೇರಿತವಾಗಿ ದಾಖಲು ಮಾಡಲಾಗಿದೆ ಅಂತ ಸಚಿವರು ಮಾಹಿತಿ ಕೊಟ್ಟರು. ಇದನ್ನೂ ಓದಿ: ಮುಸ್ಲಿಮರು ಸೂರ್ಯ ನಮಸ್ಕಾರ ಮಾಡಿ, ನದಿಗಳನ್ನು ಪೂಜಿಸಿ: RSS ನಾಯಕ ಹೊಸಬಾಳೆ ಸಲಹೆ

Share This Article