ಮಾಡೆಲಿಂಗ್‍ನ್ನು ವೃತ್ತಿ ಮಾಡಿಕೊಂಡಿದ್ದಕ್ಕೆ ಸಹೋದರಿಯನ್ನೇ ಹತ್ಯೆಗೈದ ಸಹೋದರ

Public TV
1 Min Read

ಇಸ್ಲಾಮಾಬಾದ್: ನೃತ್ಯ ಹಾಗೂ ಮಾಡೆಲಿಂಗ್‍ನ್ನು ವೃತ್ತಿಜೀವನವಾಗಿ ಮುಂದುವರಿಸಿದ್ದ ಯುವತಿಯನ್ನು ಆಕೆಯ ಸಹೋದರನೇ ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ನಡೆದಿದೆ.

ರೆನಾಲಾ ಖುರ್ದ್ ಒಕಾರಾ ಮೂಲದ ಸಿದ್ರಾ (21) ಮೃತ ಯುವತಿ ಹಾಗೂ ಹಮ್ಜಾ ಬಂಧಿತ ಆರೋಪಿ. ಸಿದ್ರಾ ಸ್ಥಳೀಯ ಬಟ್ಟೆ ಬ್ರ್ಯಾಂಡ್‍ಗಾಗಿ ಮಾಡೆಲಿಂಗ್ ಮಾಡುತ್ತಿದ್ದಳು. ಅಷ್ಟೇ ಅಲ್ಲದೇ ಫೈಸಲಾಬಾದ್ ನಗರದ ಚಿತ್ರಮಂದಿರಗಳಲ್ಲಿ ನೃತ್ಯ ಮಾಡುತ್ತಿದ್ದಳು. ಆದರೆ ಇದಕ್ಕೆ ಅವಳ ಕುಟುಂಬದವರು ವಿರೋಧಿಸಿದ್ದರು. ಸಿದ್ರಾಳ ಕುಟುಂಬದವರು ಮಾಡೆಲಿಂಗ್ ಹಾಗೂ ನೃತ್ಯ ಸಂಪ್ರದಾಯದ ವಿರುದ್ಧವಾಗಿದೆ. ಇದರಿಂದಾಗಿ ವೃತ್ತಿ ತೊರೆಯುವಂತೆ ಪದೇ ಪದೇ ಒತ್ತಾಯಿಸುತ್ತಿದ್ದರು. ಆದರೂ ಅವಳು ಮನೆಯವರ ವಿರೋಧದ ನಡುವೆಯೂ ವೃತ್ತಿಯನ್ನು ಮುಂದುವರಿಸಿದ್ದಳು.

crime

ಕಳೆದ ವಾರ ಸಿದ್ರಾ ತನ್ನ ಕುಟುಂಬದವರೊಂದಿಗೆ ಈದ್ ಆಚರಿಸಲು ಮನೆಗೆ ಬಂದಿದ್ದರು. ಆ ಸಂದರ್ಭದಲ್ಲಿ ವೃತ್ತಿ ಬದಲಿಸಬೇಕು. ಇದು ಕುಟುಂಬದ ಮರ್ಯಾದೆಯ ಪ್ರಶ್ನೆ ಎಂದು ಸಿದ್ರಾಳಿಗೆ ಕುಟುಂಬದವರು ತಿಳಿಸಿದ್ದರು. ಇದರಿಂದಾಗಿ ಮನೆಯಲ್ಲಿ ದೊಡ್ಡ ಜಗಳವೇ ನಡೆದಿತ್ತು. ಅಷ್ಟೆ ಅಲ್ಲದೇ ಈ ಜಗಳ ತಾರಕಕ್ಕೆ ಏರಿದ್ದು, ಕುಟುಂಬದವರು ಅವಳನ್ನು ಥಳಿಸಿದ್ದರು. ಇದನ್ನೂ ಓದಿ:  ಬಿಜೆಪಿಯವರು ವಿಧಾನ ಸೌಧವನ್ನು ವ್ಯಾಪಾರ ಸೌಧ ಮಾಡ್ತಿದ್ದಾರೆ: ಪ್ರಿಯಾಂಕ್ ಖರ್ಗೆ

ಇದಾದ ಸ್ವಲ್ಪ ದಿನಗಳ ಬಳಿಕ ಸಿದ್ರಾಳ ಸಹೋದರ ಹಮ್ಜಾ ಮೊಬೈಲ್‍ನಲ್ಲಿ ನೃತ್ಯ ಪ್ರದೇಶವನ್ನು ಬೇರೆಯವರಿಗೆ ಕಳಿಸಿದ್ದನ್ನು ನೋಡಿ ಕೋಪಗೊಂಡಿದ್ದಾನೆ. ಆವೇಶದಲ್ಲಿ ಅವಳನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದಾನೆ. ಈ ಸಂಬಂಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹಮ್ಜಾನ್ನು ಬಂಧಿಸಿದ್ದಾರೆ.

KILLING CRIME

ಈ ಬಗ್ಗೆ ಪೊಲೀಸ್ ಅಧಿಕಾರಿ ಫ್ರಾಝ್ ಹಮೀದ್ ಮಾತನಾಡಿ, ಸಿಂದ್ರಾ ಅವಳು ಸಂಬಂಧಿಕರೊಬ್ಬರಿಗೆ ನೃತ್ಯ ಪ್ರದರ್ಶನವನ್ನು ಕಳಿಸಿದ್ದನ್ನು ನೋಡಿ ಹಮ್ಜಾ ಕೋಪಗೊಂಡಿದ್ದ. ಕೋಪದ ಭರದಲ್ಲಿ ತನ್ನ ಸಹೋದರಿಯ ಮೇಲೆ ಗುಂಡು ಹಾರಿಸಿದ್ದಾನೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಕ್ಯೂಬಾದ ಹೆಸರಾಂತ ಹೋಟೆಲ್‌ನಲ್ಲಿ ಭೀಕರ ಸ್ಫೋಟ – 22 ಮಂದಿ ಸಾವು

Share This Article
Leave a Comment

Leave a Reply

Your email address will not be published. Required fields are marked *