ಬದ್ಧ ವೈರಿ ಪಾಕ್‌ ವಿರುದ್ಧ 8 ವಿಕೆಟ್‌ಗಳ ಜಯ – ಇತಿಹಾಸ ನಿರ್ಮಿಸಿದ ಅಫ್ಘಾನಿಸ್ತಾನ

Public TV
2 Min Read

– ಅಂಕಪಟ್ಟಿಯಲ್ಲಿ 6ನೇ ಸ್ಥಾನಕ್ಕೆ ಜಿಗಿತ
– ಕೊನೆಯ ಸ್ಥಾನಕ್ಕೆ ಜಿಗಿದ ಇಂಗ್ಲೆಂಡ್‌

ಚೆನ್ನೈ: ಇಂಗ್ಲೆಂಡ್‌ಗೆ (England) ಶಾಕ್‌ ನೀಡಿದ್ದ ಅಫ್ಘಾನಿಸ್ತಾನ ಈಗ  ಬದ್ಧ ವೈರಿ ಪಾಕಿಸ್ತಾನಕ್ಕೂ (Pakistan) ಶಾಕ್‌ ನೀಡಿದೆ. ಇದೇ ಮೊದಲ ಬಾರಿಗೆ ವಿಶ್ವಕಪ್‌ ಕ್ರಿಕೆಟ್‌ನಲ್ಲಿ (World Cup Cricket) ಅಫ್ಘಾನಿಸ್ತಾನ (Afghanistan) ಪಾಕಿಸ್ತಾನದ ವಿರುದ್ಧ ಜಯಗಳಿಸಿ ಇತಿಹಾಸ ಸೃಷ್ಟಿಸಿದೆ.

ಪಾಕಿಸ್ತಾನ ಕಳಪೆ ಬೌಲಿಂಗ್‌ ಮತ್ತು ಕಳಪೆ ಫೀಲ್ಡಿಂಗ್‌ ಲಾಭ ಪಡೆದ ಅಫ್ಘಾನಿಸ್ತಾನ 8 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ. ಗೆಲ್ಲಲು 282 ರನ್‌ಗಳ ಗುರಿಯನ್ನು ಪಡೆದ ಅಫ್ಘಾನಿಸ್ತಾನ ಇನ್ನೂ 6 ಎಸೆತ ಇರುವಂತೆಯೇ 2 ವಿಕೆಟ್‌ ನಷ್ಟಕ್ಕೆ 286 ರನ್‌ ಹೊಡೆಯುವ ಮೂಲಕ ಜಯ ಸಾಧಿಸಿತು.

ಬ್ಯಾಟಿಂಗ್‌ ಆರಂಭಿಸಿದ ಅಫ್ಘಾನಿಸ್ತಾನ ರೆಹಮಾನುಲ್ಲಾ ಗುರ್ಬಾಜ್‌ ಮತ್ತು ಇಬ್ರಾಹಿಂ ಜಾರ್ದನ್‌ ಮೊದಲ ವಿಕೆಟಿಗೆ 128 ಎಸೆತಗಳಲ್ಲಿ 130 ರನ್‌ ಜೊತೆಯಾಟವಾಡುವ ಮೂಲಕ ಪಂದ್ಯವನ್ನು ಪಾಕ್‌ ಕೈಯಿಂದ ಕಸಿದರು.

ನಂತರ ಎರಡನೇ ವಿಕೆಟಿಗೆ ರೆಹ್ಮಾತ್‌ ಶಾ ಮತ್ತು ಜದ್ರಾನ್ 74 ಎಸೆತಗಳಲ್ಲಿ 60 ರನ್‌ ಜೊತೆಯಾಟ, ಮುರಿಯದ ಮೂರನೇ ವಿಕೆಟಿಗೆ ರೆಹ್ಮತ್‌ ಶಾ ಮತ್ತು ಹಶ್ಮತುಲ್ಲಾ ಶಾಹಿದಿ 93 ಎಸೆತಗಳಲ್ಲಿ 96 ರನ್‌ ಜೊತೆಯಾಟವಾಡಿ ತಂಡವನ್ನು ಗೆಲ್ಲಿಸಿಕೊಟ್ಟರು. ಇದನ್ನೂ ಓದಿ: ಅಫ್ಘಾನಿಸ್ತಾನಕ್ಕೆ ಪಾಕ್‌ ಮೇಲೆ ಸಿಟ್ಯಾಕೆ?

ರೆಹಮಾನುಲ್ಲ 65 ರನ್‌ (53 ಎಸೆತ, 9 ಬೌಂಡರಿ, 1 ಸಿಕ್ಸರ್)‌, ಜದ್ರಾನ್ 87 ರನ್‌ (113 ಎಸೆತ, 10 ಬೌಂಡರಿ) ರೆಹ್ಮತ್‌ ಶಾ ಔಟಾಗದೇ 77 ರನ್‌, ಶಾಹಿದಿ ಔಟಾಗದೇ 48 ರನ್‌ (45 ಎಸೆತ, 4 ಬೌಂಡರಿ) ಹೊಡೆದರು.

ಕಳಪೆ ಫೀಲ್ಡಿಂಗ್‌:
ಇಂದಿನ ಪಾಕ್‌ ಫೀಲ್ಡಿಂಗ್‌ ಕಳಪೆಯಾಗಿತ್ತು. ಬೌಂಡರಿ ಹೋಗುವುದನ್ನು ತಡೆಯಲು ಪಾಕ್‌ ಫೀಲ್ಡರ್‌ಗಳು ವಿಫಲರಾದರು. ಸರಿಯಾಗಿ ಫೀಲ್ಡ್‌ ಮಾಡಿದರೆ ಹಲವು ಬೌಂಡರಿಗಳನ್ನು ತಡೆಯಬಹುದಿತ್ತು. ಸರಿಯಾಗಿ ಫೀಲ್ಡಿಂಗ್‌ ಮಾಡದ್ದಕ್ಕೆ ಕೀಪರ್‌ ರಿಜ್ವಾನ್‌ ಮೊಹಮ್ಮದ್‌ ಅವರು ತಲೆಗೆ ಕೈಯನ್ನು ಚಚ್ಚಿ ಸಿಟ್ಟು ಹೊರಹಾಕಿದ್ದರು.

ಪಾಕಿಸ್ತಾನದ ಆರಂಭ ಉತ್ತಮವಾಗಿತ್ತು. ಅಬ್ದುಲ್ಲ ಶಫಿಕ್‌ 58 ರನ್‌( 75 ಎಸೆತ, 5 ಬೌಂಡರಿ, 2 ಸಿಕ್ಸರ್‌), ನಾಯಕ ಬಾಬರ್‌ ಅಜಂ 74 ರನ್‌ ( 92 ಎಸೆತ, 4 ಬೌಂಡರಿ 1 ಸಿಕ್ಸರ್‌) ಹೊಡೆದು ಔಟಾದರು.

ಶಾದಬ್‌ ಶಕೀಲ್‌ 40 ರನ್‌(38 ಎಸೆತ, 1 ಬೌಂಡರಿ, 1 ಸಿಕ್ಸರ್‌), ಇಫ್ತಿಕಾರ್‌ ಅಹ್ಮದ್‌ 40 ರನ್‌(27 ಎಸೆತ, 2 ಬೌಂಡರಿ, 4 ಸಿಕ್ಸರ್‌) ಚಚ್ಚಿದ ಪರಿಣಾಮ ಪಾಕಿಸ್ತಾನ 280 ರನ್‌ಗಳ ಗಡಿಯನ್ನು ದಾಟಿತು.

ನೂರ್‌ ಅಹ್ಮದ್‌ 3 ವಿಕೆಟ್‌ ಕಿತ್ತರೆ, ನವೀನ್‌ ಉಲ್‌ ಹಕ್‌ 2 ವಿಕೆಟ್‌, ಮೊಹಮ್ಮದ್‌ ನಬಿ ಮತ್ತು ಅಜ್ಮತ್ತುಲ್ಲ ತಲಾ ಒಂದು ವಿಕೆಟ್‌ ಪಡೆದರು.

 

Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್