ಪುಲ್ವಾಮ ದಾಳಿ: ಭಾರತದಲ್ಲಿ ಪಾಕಿಸ್ತಾನ ಸೂಪರ್ ಲೀಗ್ ಪ್ರಸಾರಕ್ಕೆ ನಿಷೇಧ

Public TV
1 Min Read

ನವದೆಹಲಿ: ಜಮ್ಮು ಕಾಶ್ಮೀರದ ಪುಲ್ವಾಮ ದಾಳಿಯ ಬಳಿಕ ಪಾಕಿಸ್ತಾನದ ಪರಮಾಪ್ತ ರಾಷ್ಟ್ರ ಸ್ಥಾನದಿಂದ ಕೆಳಗಿಳಿಸಿದ್ದ ಭಾರತ ನಿನ್ನೆಯಷ್ಟೇ ಆಮದು ಸುಂಕವನ್ನು 200 ರಷ್ಟು ಹೆಚ್ಚಿಸಿ ಶಾಕ್ ನೀಡಿತ್ತು. ಇಂದು ಮತ್ತೊಂದು ಹೊಡೆತ ನೀಡಿ ದೇಶದ್ಯಾಂತ ಪಾಕಿಸ್ತಾನದ ಸೂಪರ್ ಕ್ರಿಕೆಟ್ ಲೀಗ್ ಪ್ರಸಾರಕ್ಕೆ ತಡೆ ನೀಡಲಾಗಿದೆ ಎಂಬ ಮಾಹಿತಿ ಲಭಿಸಿದೆ.

ಪಾಕಿಸ್ತಾನದ 4ನೇ ಆವೃತ್ತಿಯ ಸೂಪರ್ ಕ್ರಿಕೆಟ್ ಲೀಗ್ ದುಬೈನಲ್ಲಿ ನಡೆಯುತ್ತಿದ್ದು, ಭಾರತದಲ್ಲಿ ನೇರ ಪ್ರಸಾರವನ್ನು ವೀಕ್ಷಿಸಬಹುದಾಗಿತ್ತು. ಆದರೆ ಈ ಪ್ರಸಾರಕ್ಕೆ ಭಾರತ ತಡೆ ನೀಡಿದೆ. ವಿಶ್ವದ ಕೆಲ ಸ್ಟಾರ್ ಕ್ರಿಕೆಟರ್ ಗಳು ಪಿಎಸ್‍ಎಲ್ ನಲ್ಲಿ ಭಾಗವಹಿಸುತ್ತಿದ್ದು, 6 ತಂಡಗಳು ಪ್ರಶಸ್ತಿಗಾಗಿ ಕಾದಾಟ ನಡೆಸುತ್ತಿವೆ. ಟೂರ್ನಿಯ ಅಂತಿಮ ಪಂದ್ಯಗಳು ಪಾಕಿಸ್ತಾನದಲ್ಲೇ ನಡೆಸುವ ಮೂಲಕ ಮತ್ತಷ್ಟು ಆದಾಯವನ್ನು ಗಳಿಸಲು ಪಾಕ್ ಕ್ರಿಕೆಟ್ ಬೋರ್ಡ್ ತೀರ್ಮಾನಿಸಿತ್ತು. ಆದರೆ ಭಾರತದ ಈ ನಿರ್ಧಾರ ಪಾಕ್‍ಗೆ ಆರ್ಥಿಕ ಭಾರೀ ಹೊಡೆತ ನೀಡುತ್ತದೆ ಎಂದರೇ ತಪ್ಪಾಗಲಾರದು.

ಪ್ರಸಾರವನ್ನು ಸ್ಥಗಿತಗೊಳಿಸಲು ಶನಿವಾರವೇ ನಿರ್ಧರಿಸಿದ್ದರು ಕೂಡ ಕೆಲ ತಾಂತ್ರಿಕ ಕಾರಣಗಳಿಂದ ಆದು ಸಾಧ್ಯವಾಗಿರಲಿಲ್ಲ ಎಂದು ಮಾಧ್ಯಮವೊಂದು ವರದಿ ಮಾಡಿದ್ದು, ಸದ್ಯ ಪ್ರಸಾರ ಸ್ಥಗಿತಗೊಂಡಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಪಿಎಸ್‍ಎಲ್ ಆರಂಭವಾದ ಬಳಿಕ ಭಾರತದಲ್ಲಿ ಪ್ರಸಾರವಾಗುತ್ತಿರಲಿಲ್ಲ ಆದರೆ ಕಳೆದ ಟೂರ್ನಿಗೂ ಮುನ್ನ ಡಿ ಸ್ಪೋರ್ಟ್ ಪ್ರಸಾರದ ಹಕ್ಕುಗಳನ್ನು ಖರೀದಿ ಮಾಡಿತ್ತು. ಆದರೆ ಭಯೋತ್ಪಾದನ ದಾಳಿಯ ಬಗ್ಗೆ ಐಕ್ಯತೆಯನ್ನು ತೋರಿಸಲು ಪ್ರಸಾರ ನಿರ್ಬಂಧಿಸಲು ನಿರ್ಧಾರ ಕೈಗೊಳ್ಳಲಾಗಿದೆ ಎಂದು ಡಿ ಸ್ಪೋರ್ಟ್ ತಿಳಿಸಿದೆ.

2009 ರಲ್ಲಿ ಶ್ರೀಲಂಕಾ ಕ್ರಿಕೆಟ್ ತಂಡದ ಮೇಲೆ ಭಯೋತ್ಪಾದಕರು ದಾಳಿ ನಡೆಸಿದ ಬಳಿಕ ಪಾಕಿಸ್ತಾನದಲ್ಲಿ ಕ್ರಿಕೆಟ್ ಟೂರ್ನಿಗಳ ಭವಿಷ್ಯ ಅಂತ್ಯಗೊಂಡಿತ್ತು. ಸದ್ಯ ಭಾರತದ ಈ ನಿರ್ಧಾರ ಮತ್ತೆ ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ಗೆ ಭಾರೀ ಹೊಡೆತವನ್ನು ನೀಡಲಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *