ಬಿಡುಗಡೆ ಮಾಡದೇ ಬಿಎಸ್‌ಎಫ್‌ ಯೋಧನನ್ನು ಪ್ರಚಾರಕ್ಕೆ ಬಳಸಲು ಮುಂದಾದ ಪಾಕ್‌

Public TV
1 Min Read

ಶ್ರೀನಗರ: ಆಕಸ್ಮಿಕವಾಗಿ ಅಂತರರಾಷ್ಟ್ರೀಯ ಗಡಿಯನ್ನು ದಾಟಿ ಬಂಧನಕ್ಕೆ ಒಳಗಾಗಿರುವ ಗಡಿ ಭದ್ರತಾ ಪಡೆ (BSF) ಯೋಧನನ್ನು ಹಸ್ತಾಂತರ ಮಾಡಲು ಪಾಕಿಸ್ತಾನ (Pakistan) ನಿರಾಕರಿಸಿದೆ.

ಗುರುವಾರ ಸಂಜೆ ಧ್ವಜ ಸಭೆಗೆ (Flag Meeting) ರೇಂಜರ್‌ಗಳು ಬರಲಿಲ್ಲ. ಮಾಧ್ಯಮಗಳಲ್ಲಿ ತಮ್ಮ ಪ್ರಚಾರಕ್ಕಾಗಿ ಪಾಕಿಸ್ತಾನ ಭಾರತೀಯ ಯೋಧನನ್ನು ಬಳಸಲು ಮುಂದಾಗಿದೆ.

ಪಂಜಾಬ್‌ನ ಫಿರೋಜ್‌ಪುರ ಬಳಿ ಆಕಸ್ಮಿಕವಾಗಿ ಅಂತರರಾಷ್ಟ್ರೀಯ ಗಡಿಯನ್ನು ದಾಟಿದ್ದ 182 ನೇ ಬೆಟಾಲಿಯನ್‌ ಕಾನ್‌ಸ್ಟೇಬಲ್‌ ಪಿಕೆ ಸಾಹು ಅವರನ್ನು ಪಾಕಿಸ್ತಾನ ರೇಂಜರ್‌ಳು ಬಂಧಿಸಿದ್ದರು. ಬಂದನಕ್ಕೆ ಒಳಗಾದ ಸಾಹು ಅವರನ್ನು ಬಿಡುಗಡೆ ಮಾಡಲು ಬಿಎಸ್‌ಎಫ್‌ ಪ್ರಯತ್ನ ನಡೆಸುತ್ತಿದೆ. ಇದನ್ನೂ ಓದಿ: ಗಡಿಯಲ್ಲಿ ಭಾರತ ಪಾಕ್‌ ಮಧ್ಯೆ ಗುಂಡಿನ ಚಕಮಕಿ

ಸಾಹು ಅವರನ್ನು ಗಡಿ ಹೊರಠಾಣೆಯಿಂದ ದೂರದಲ್ಲಿರುವ ಪಾಕಿಸ್ತಾನಿ ಪ್ರದೇಶಕ್ಕೆ ಕರೆದುಕೊಂಡು ಹೋಗಲಾಗಿದೆ. ಇದನ್ನೂ ಓದಿ: Pahalgam Terror Attack | ಪಾಕಿಸ್ತಾನ ಸಮರ್ಥಿಸಿಕೊಂಡಿದ್ದ ಅಸ್ಸಾಂ ಶಾಸಕ ಅರೆಸ್ಟ್‌

ಪಶ್ಚಿಮ ಬಂಗಾಳದ ನಿವಾಸಿ ಸಾಹು ಸಮವಸ್ತ್ರದಲ್ಲಿದ್ದರು ಮತ್ತು ಅವರ ಸೇವಾ ರೈಫಲ್ ಅನ್ನು ಹೊಂದಿದ್ದರು. ವಿಶ್ರಾಂತಿ ಪಡೆಯಲು ಮುಂದಾದಾಗ ಅವರು ರೈತರೊಂದಿಗೆ ಹೋಗುತ್ತಿದ್ದರು ಮತ್ತು ರೇಂಜರ್‌ಗಳು ಅವರನ್ನು ಬಂಧಿಸಿದರು.

ರಜೆಗಾಗಿ ಮನೆಗೆ ಬಂದಿದ್ದ ಇವರು ಮಾರ್ಚ್ 31 ರಂದು ಕರ್ತವ್ಯಕ್ಕೆ ಹಾಜರಾಗಿದ್ದರು. ಕಳೆದ 17 ವರ್ಷಗಳ ಕಾಲ ಬಿಎಸ್‌ಎಫ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

Share This Article