ಭಾರತೀಯ ವಿಮಾನಗಳಿಗೆ ವಾಯು ಮಾರ್ಗ ಬಂದ್ – ಆ.24ರವರೆಗೆ ವಿಸ್ತರಿಸಿದ ಪಾಕ್

Public TV
1 Min Read

ಇಸ್ಲಾಮಾಬಾದ್‌: ಭಾರತೀಯ (India) ವಿಮಾನಗಳಿಗೆ ಪಾಕಿಸ್ತಾನ (Pakistan) ತನ್ನ ವಾಯುಪ್ರದೇಶ ನಿಷೇಧವನ್ನು (Airspace Ban) ಮತ್ತೊಂದು ತಿಂಗಳು ವಿಸ್ತರಿಸಿದೆ.

ಭಾರತೀಯ ವಿಮಾನಯಾನ ಸಂಸ್ಥೆಗಳು ನಿರ್ವಹಿಸುವ ವಿಮಾನಗಳಿಗೆ ಪಾಕಿಸ್ತಾನ ತನ್ನ ವಾಯುಪ್ರದೇಶ ನಿಷೇಧವನ್ನು ಆ.24ರ ವರೆಗೆ ವಿಸ್ತರಿಸಿದೆ. ಆ ದಿನ ಬೆಳಿಗ್ಗೆ 5:19ರ ವರೆಗೆ ನಿಷೇಧ ಜಾರಿಯಲ್ಲಿರಲಿದೆ ಎಂದು ಪಾಕಿಸ್ತಾನ ವಿಮಾನ ನಿಲ್ದಾಣ ಪ್ರಾಧಿಕಾರ (ಪಿಎಎ) ತಿಳಿಸಿದೆ. ಇದನ್ನೂ ಓದಿ: ಯುರೋಪಿಯನ್ ದೇಶಗಳಿಂದ ಪಾಕ್‌ಗೆ ಶಾಕ್ – ಪಾಕಿಸ್ತಾನ ವಾಯು ಪ್ರದೇಶದಲ್ಲಿ ವಿಮಾನ ಹಾರಾಟಕ್ಕೆ ಹಿಂದೇಟು

ಭಾರತೀಯ ವಿಮಾನಯಾನ ಸಂಸ್ಥೆಗಳು ನಿರ್ವಹಿಸುವ ಯಾವುದೇ ವಿಮಾನಗಳು, ಭಾರತೀಯ ಒಡೆತನದ ಅಥವಾ ಗುತ್ತಿಗೆ ಪಡೆದ ಮಿಲಿಟರಿ ಮತ್ತು ನಾಗರಿಕ ವಿಮಾನಗಳು ಪಾಕಿಸ್ತಾನಿ ವಾಯುಪ್ರದೇಶವನ್ನು ಬಳಸಲು ಅನುಮತಿ ನೀಡುವುದಿಲ್ಲ ಎಂದು ಪಿಎಎ ಹೊರಡಿಸಿದ ಆದೇಶದಲ್ಲಿ ತಿಳಿಸಿದೆ.

ಏಪ್ರಿಲ್ 22 ನಡೆದ ಪಹಲ್ಗಾಮ್ ಭಯೋತ್ಪಾದಕ ದಾಳಿಯ (Pahalgam Attack) ನಂತರ ಭಾರತ ಸರ್ಕಾರವು ಪಾಕಿಸ್ತಾನದ ವಿರುದ್ಧ ಅನೇಕ ಕ್ರಮಗಳನ್ನುಕೈಗೊಂಡಿತ್ತು. ಅಲ್ಲದೇ ಎಲ್ಲಾ ಪಾಕಿಸ್ತಾನಿ ವಿಮಾನಗಳಿಗೆ ಭಾರತೀಯ ವಾಯು ಮಾರ್ಗ ಬಂದ್‌ ಮಾಡಿತ್ತು. ಇದಕ್ಕೆ ಪ್ರತಿಯಾಗಿ ಪಾಕಿಸ್ತಾನವು ಭಾರತೀಯ ವಿಮಾನಗಳಿಗೆ ತನ್ನ ವಾಯುಪ್ರದೇಶವನ್ನು ಮುಚ್ಚಿತ್ತು. ಇದನ್ನೂ ಓದಿ: ರೌಡಿಶೀಟರ್ ಕೊಲೆ ಕೇಸ್; ಬಂಧನ ಭೀತಿ – ಕಳೆದೆರಡು ದಿನಗಳಿಂದ ಮನೆಯಲ್ಲಿಲ್ಲ ಬೈರತಿ ಬಸವರಾಜ್

Share This Article