ನನ್ನ ಕುಟುಂಬಕ್ಕೆ ಭದ್ರತೆ ಕೊಡಿ ಎಂದು ಮೋದಿಗೆ ಮನವಿ ಸಲ್ಲಿಸಿದ ಪಾಕ್ ಕ್ರಿಕೆಟಿಗನ ಪತ್ನಿ

Public TV
2 Min Read

ಇಸ್ಲಾಮಬಾದ್: ಟಿ20 ವಿಶ್ವಕಪ್ ಸೆಮಿಫೈನಲ್‍ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋತ ಪಾಕಿಸ್ತಾನ ತಂಡದ ಅಟಗಾರರಿಗೆ ತಮ್ಮ ದೇಶದ ಕ್ರಿಕೆಟ್ ಅಭಿಮಾನಿಗಳು ದ್ವೇಷದ ಜ್ವಾಲೆ ಕಾರುತ್ತಿದ್ದಾರೆ. ಅದರಲ್ಲೂ ಸೆಮಿಫೈನಲ್ ಪಂದ್ಯದಲ್ಲಿ ಪ್ರಮುಖ ಕ್ಯಾಚ್ ಒಂದನ್ನು ಬಿಟ್ಟ ವೇಗಿ ಹಸನ್ ಅಲಿ ಪತ್ನಿ ಶಾಮಿಯಾ ಆರ್ಜೂ ಮತ್ತು ಮಗುವಿಗೆ ಜೀವ ಬೆದರಿಕೆ ಹಾಕಿದ್ದಾರೆ. ಈ ಬಗ್ಗೆ ಶಾಮಿಯಾ ಆರ್ಜೂ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಸಹಾಯ ಕೇಳಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಪಾಕಿಸ್ತಾನ ತಂಡ 176 ರನ್‍ಗಳ ದೊಡ್ಡ ಮೊತ್ತ ಕಲೆಹಾಕಿತು. 177 ರನ್‍ಗಳ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ ತಂಡಕ್ಕೆ ಕಡೆಯಲ್ಲಿ ಮ್ಯಾಥ್ಯೂ ವೇಡ್ ಹ್ಯಾಟ್ರಿಕ್ ಸಿಕ್ಸ್ ಮೂಲಕ ಜಯ ತಂದು ಕೊಟ್ಟಿದ್ದರು. ಈ ಮೊದಲು ವೇಡ್, ಹಸನ್ ಅಲಿಗೆ ಒಂದು ಕ್ಯಾಚ್ ಕೊಟ್ಟಿದ್ದರು. ಈ ಕ್ಯಾಚ್ ಹಿಡಿಯುವಲ್ಲಿ ಹಸನ್ ಅಲಿ ವಿಫಲವಾಗಿದ್ದರು. ಇದರಿಂದ ಪಾಕಿಸ್ತಾನ ಸೋಲುವಂತಾಯಿತು ಎಂದು ಸಾಮಾಜಿಕ ಜಾಲತಾಣದಲ್ಲಿ ಹಸನ್ ಅಲಿ ವಿರುದ್ಧ ಪಾಕ್ ಕ್ರಿಕೆಟ್ ಪ್ರೇಮಿಗಳು ರೊಚ್ಚಿಗೆದ್ದಿದ್ದು, ಈ ನಡುವೆ ಹಸನ್ ಅಲಿ, ಪತ್ನಿ ಶಾಮಿಯಾ ಆರ್ಜೂ ಮತ್ತು ಮಗುವಿಗೆ ಜೀವ ಬೆದರಿಕೆ ಹಾಕುತ್ತಿದ್ದಾರೆ ಎಂದು ಶಾಮಿಯಾ ಆರ್ಜೂ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಭಾರತದ ಯುವತಿಯನ್ನ ಮದ್ವೆಯಾದ ಪಾಕ್ ಕ್ರಿಕೆಟಿಗ


ಶಾಮಿಯಾ ಮೂಲತಃ ಭಾರತದ ಹರಿಯಾಣದವರು. ಈ ಹಿಂದೆ ಕುಟುಂಬ ಸಮೇತರಾಗಿ ಹರಿಯಾಣದಲ್ಲಿ ನೆಲೆಸಿದ್ದರು. ಬಳಿಕ ಶಾಮಿಯಾ ದುಬೈನ ಎಮಿರೇಟ್ಸ್ ಏರ್‍ಲೈನ್ಸ್ ಎಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಈ ವೇಳೆ ಪರಸ್ಪರ ಭೇಟಿಯಾದ ಹಸನ್ ಅಲಿ ಮತ್ತು ಶಾಮಿಯಾ ಸ್ನೇಹಿತರಾಗಿ ಬಳಿಕ 2019ರಲ್ಲಿ ವಿವಾಹವಾಗಿದ್ದರು. ಇದೀಗ ಶಾಮಿಯಾಗೆ ಜೀವ ಬೆದರಿಕೆ ಬರುತ್ತಿರುವದರಿಂದ ಶಾಮಿಯಾ ಸಾಮಾಜಿಕ ಜಾಲತಾಣದ ಮೂಲಕ ಭಾರತ ಸರ್ಕಾರದ ಸಹಾಯ ಕೇಳಿದ್ದಾರೆ. ಇದನ್ನೂ ಓದಿ: ಟೀಂ ಇಂಡಿಯಾ ಆಟಗಾರರನ್ನು ಅಣಕಿಸಿದ ಶಾಹೀನ್ ಶಾ ಆಫ್ರಿದಿಗೆ ಚಾಟಿ ಬೀಸಿದ ನೆಟ್ಟಿಗರು

https://twitter.com/Samiyarzoo/status/1459522262420242432

ನಾನು ಭಾರತದವಳು ಎನ್ನಲು ತುಂಬಾ ಹೆಮ್ಮೆ ಪಡುತ್ತೇನೆ. ನಾನು ಪಾಕಿಸ್ತಾನದವನನ್ನು ಮದುವೆ ಆಗಿದ್ದೇನೆ ಎಂದ ಮಾತ್ರಕ್ಕೆ ಭಾರತವನ್ನು ಇಷ್ಟಪಡದಿರಲು ಸಾಧ್ಯವಿಲ್ಲ. ಇದೀಗ ಇಲ್ಲಿನ ನೀಚ ಕ್ರೀಡಾ ಅಭಿಮಾನಿಗಳು ನನ್ನ ಸಣ್ಣ ಮಗುವನ್ನು ಬಿಡದೇ ಕುಟುಂಬಕ್ಕೆ ಬೆದರಿಕೆ ಹಾಕುತ್ತಿದ್ದಾರೆ. ಹಾಗಾಗಿ ನಾನು ಸುರಕ್ಷಿತವಾಗಿ ನನ್ನ ಮಗುವಿನೊಂದಿಗೆ ನನ್ನ ತವರೂರು ಹರಿಯಾಣಕ್ಕೆ ಬರಲು ಇಚ್ಚಿಸಿದ್ದೇನೆ ನನಗೆ ದಯವಿಟ್ಟು ಸಹಾಯ ಮಾಡಿ ಎಂದು ನರೇಂದ್ರ ಮೋದಿ ಮತ್ತು ವಿದೇಶಾಂಗ ಸಚಿವ ಡಾ.ಎಸ್.ಜೈಶಂಕರ್ ಅವರ ಬಳಿ ಟ್ವಿಟ್ಟರ್ ಮೂಲಕ ಶಾಮಿಯಾ ಮನವಿ ಮಾಡಿಕೊಂಡಿದ್ದಾರೆ. ದನ್ನೂ ಓದಿ: ವೇಡ್‌ ಹ್ಯಾಟ್ರಿಕ್‌ ಸಿಕ್ಸರ್‌ – ಆಸ್ಟ್ರೇಲಿಯಾ ಫೈನಲಿಗೆ, ಪಾಕ್‌ ಮನೆಗೆ

https://twitter.com/Samiyarzoo/status/1459519515595706375

Share This Article
Leave a Comment

Leave a Reply

Your email address will not be published. Required fields are marked *