ಆಸ್ಟ್ರೇಲಿಯಾದಲ್ಲಿ ಪಾಕಿಸ್ತಾನಕ್ಕೆ ಅವಮಾನ – ಟ್ರಕ್‌ಗೆ ಲಗೇಜ್‌ ಲೋಡ್‌ ಮಾಡಿದ ಆಟಗಾರರು

Public TV
1 Min Read

ಕ್ಯಾನ್ಬೆರಾ: ಆಸ್ಟ್ರೇಲಿಯಾ (Australia) ಪ್ರವಾಸಕ್ಕೆ ಆಗಮಿಸಿದ ಪಾಕ್‌ ಕ್ರಿಕೆಟ್‌ (Pakistan Cricket) ಆಟಗಾರರು ವಿಮಾನ ನಿಲ್ದಾಣದಲ್ಲಿ ಟ್ರಕ್‌ಗೆ ತಮ್ಮ ಲಗೇಜ್‌ ಲೋಡ್‌ ಮಾಡುತ್ತಿರುವ ವಿಡಿಯೋ ವೈರಲ್‌ ಆಗಿದೆ.

ಮೂರು ಟೆಸ್ಟ್‌ ಪಂದ್ಯವಾಡಲು ಪಾಕಿಸ್ತಾನ ತಂಡ ಆಸ್ಟ್ರೇಲಿಯಾಗೆ ಲ್ಯಾಂಡ್‌ ಆಗಿದೆ. ಡಿಸೆಂಬರ್‌ 14 ರಿಂದ ಮೊದಲ ಟೆಸ್ಟ್‌ ಪರ್ತ್‌ನಲ್ಲಿ ನಡೆಯಲಿದ್ದು ಅದಕ್ಕೂ ಮುನ್ನ ಕ್ಯಾನ್ಬೆರಾದಲ್ಲಿ ಅಭ್ಯಾಸ ಪಂದ್ಯ ಆಡಲಿದೆ.

ಪಾಕ್‌ ಆಟಗಾರರು ಲಗೇಜ್‌ ತುಂಬಿಸುತ್ತಿರುವ ವಿಡಿಯೋ ನೋಡಿ ಕ್ರಿಕೆಟ್‌ ಅಭಿಮಾನಿಗಳು ಆಸ್ಟ್ರೇಲಿಯಾ ಕ್ರಿಕೆಟ್‌ ಬೋರ್ಡ್‌ ಅನ್ನು ದೂಷಿಸುತ್ತಿದ್ದಾರೆ. ಕ್ರಿಕೆಟ್‌ ಆಯೋಜಿಸುತ್ತಿರುವ ನೀವು ಈ ರೀತಿ ಅವಮಾನ ಮಾಡಿದ್ದು ಸರಿಯೇ ಎಂದು ಪ್ರಶ್ನಿಸುತ್ತಿದ್ದಾರೆ. ಇದನ್ನೂ ಓದಿ: T20I ಕ್ರಿಕೆಟ್‌ನಲ್ಲಿ ಪಾಕ್‌ ದಾಖಲೆ ನುಚ್ಚುನೂರು – ಟೀಂ ಇಂಡಿಯಾ ಯುವಪಡೆಗೆ ಮೆಚ್ಚುಗೆ

ಒಂದು ದೇಶದ ಆಟಗಾರರು ಕ್ರಿಕೆಟ್‌ ಆಡಲು ಬಂದಾಗ ಆಯೋಜಿಸುವ ದೇಶದ ಕ್ರಿಕೆಟ್‌ ಮಂಡಳಿಯ ವತಿಯಿಂದ ಅವರನ್ನು ಸ್ವಾಗತಿಸುವುದು ಸಾಮಾನ್ಯ. ಲ್ಯಾಂಡ್‌ ಆದ ಬಳಿಕ ಆಟಗಾರರು ಬಸ್ಸಿನಲ್ಲಿ ತೆರಳಿದರೆ ಲಗೇಜ್‌ಗಳನ್ನು ಬೇರೆ ವಾಹನಕ್ಕೆ ತುಂಬಲಾಗುತ್ತದೆ.

ಭಾರತದಲ್ಲಿ ವಿಶ್ವಕಪ್‌ ಕ್ರಿಕೆಟ್‌ ಆಯೋಜಿಸಿದ ಸಂದರ್ಭದಲ್ಲಿ ಎಲ್ಲಾ ತಂಡಗಳಿಗೆ ಅತ್ಯುತ್ತಮ ಅತಿಥ್ಯ ನೀಡಲಾಗಿತ್ತು. ವಿಮಾನ ನಿಲ್ದಾಣದಲ್ಲಿ ಸ್ವಾಗತ ಮಾಡಿದ ಬಳಿಕ ಹೋಟೆಲಿಗೆ ಆಗಮಿಸಿದ ಸಂದರ್ಭದಲ್ಲಿ ಶಾಲು, ಹೂವಿನ ಮಳೆ ಸುರಿಸಿ ಆಟಗಾರರನ್ನು ಸ್ವಾಗತಿಸಲಾಗಿತ್ತು.

 

Share This Article