ಕರಾಟೆಯಲ್ಲಿ ಭಾರತೀಯನಿಗೆ ಸೋಲು – ಗೆದ್ದ ಬಳಿಕ ತ್ರಿವರ್ಣ ಧ್ವಜ ಹಿಡಿದು ಬಂದ ಪಾಕ್‌ ಅಥ್ಲೀಟ್

Public TV
2 Min Read

ಅಬುಧಾಬಿ: ದುಬೈನಲ್ಲಿ ನಡೆದ ಕರಾಟೆ ಸ್ಪರ್ಧೆಯಲ್ಲಿ (Karate Combat) ಭಾರತದ ರಾಣಾ ಸಿಂಗ್ ವಿರುದ್ಧ ಪಾಕಿಸ್ತಾನದ ಶಹಜೈಬ್ ರಿಂಧ್ 2-1 ಅಂತರದಲ್ಲಿ ಗೆಲುವು ಸಾಧಿಸಿದರು. ಇಬ್ಬರ ನಡುವೆ ತೀವ್ರ ಪೈಪೋಟಿ ನಡೆದಿತ್ತು. ಆದ್ರೆ ಕೊನೇ ಸುತ್ತಿನಲ್ಲಿ ಪಾಕ್‌ ಶಹಜೈಬ್ ರಿಂಧ್ (Shahzaib Rindh) ಬಲವಾದ ಪಂಚ್‌ನಿಂದ ಗೆಲುವು ಸಾಧಿಸಿದರು.

ಗೆಲುವು ಸಾಧಿಸಿದ ಬಳಿಕ ಭಾರತ ಮತ್ತು ಪಾಕಿಸ್ತಾನ (India And Pakistan) ಎರಡೂ ರಾಷ್ಟ್ರ ಧ್ವಜವನ್ನು (India Flag) ಹಿಡಿದು ಬಂದರು. ಇದು ಭಾರೀ ಕುತೂಹಲ ಮೂಡಿಸಿತ್ತು. ಬಳಿಕ ನಿರೂಪಕರು ಇದಕ್ಕೆ ಕಾರಣವೇನು ಎಂದು ಕೇಳಿದರು. ಇದನ್ನೂ ಓದಿ: ಬಿಜೆಪಿ ಸ್ವತಂತ್ರವಾಗಿಯೇ 350 ಸೀಟು ಗೆಲ್ಲುತ್ತೆ, ತಮಿಳುನಾಡಿನಲ್ಲಿ 5 ಸೀಟು ಖಚಿತ: ಆರ್ಥಿಕ ತಜ್ಞ ಭಲ್ಲಾ ಭವಿಷ್ಯ

ಇದಕ್ಕೆ ಉತ್ತರಿಸಿದ ಅಥ್ಲೀಟ್‌, ಈ ಫೈಟ್‌ ನಡೆದಿದ್ದು, ಶಾಂತಿಗಾಗಿ. ನಾವು ಶತ್ರುಗಳಲ್ಲ, ಒಟ್ಟಿಗೆ ಇದ್ದೇವೆ. ನಾವು (ಭಾರತ ಮತ್ತು ಪಾಕಿಸ್ತಾನ) ಒಟ್ಟಿಗೆ ಇದ್ದರೆ ಏನೂ ಬೇಕಾದರೂ ಮಾಡಬಹುದು. ಈ ಫೈಟ್‌ ನಡೆದಿದ್ದು, ಶತ್ರುತ್ವಕ್ಕಾಗಿ ಅಲ್ಲ, ಪಾಕಿಸ್ತಾನ ಮತ್ತು ಭಾರತದ ಸ್ನೇಹಕ್ಕಾಗಿ. ನಾವು ಭಾರತದೊಂದಿಗೆ ಶಾಂತಿ ಮತ್ತು ಸ್ನೇಹವನ್ನು ಬಯಸುತ್ತೇವೆ ಎಂದು ಹೇಳಿದ್ದಾರೆ.

ಸಲ್ಮಾನ್‌ ಖಾನ್‌ಗೆ ಧನ್ಯವಾದ:
ಇದೇ ವೇಳೆ ಕರಾಟೆ ಫೈಟ್‌ ನೋಡಲು ಬಂದಿದ್ದ ಬಾಲಿವುಡ್‌ ಖ್ಯಾತ ನಟ ಸಲ್ಮಾನ್‌ ಖಾನ್‌ ಅವರಿಗೆ ಧನ್ಯವಾದ ಹೇಳಿದರು. ನಾನು ಚಿಕ್ಕವನಿಂದಲೂ ನಿಮ್ಮ ಸಿನಿಮಾಗಳನ್ನು ನೋಡುತ್ತಿದ್ದೇನೆ, ನಿಮ್ಮ ಮುಂದೆ ಫೈಟ್‌ ಮಾಡಿದ್ದಕ್ಕಾಗಿ ಖುಷಿಯಾಗಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ವಯನಾಡ್‌ನಲ್ಲಿ ರಾಹುಲ್‌ಗೆ ಬಿಗ್‌ ಶಾಕ್‌ – ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಬಿಜೆಪಿ ಸೇರ್ಪಡೆ

Share This Article