ಶಿವಮೊಗ್ಗ ಗಲಭೆ ಹಿಂದೆ ಪಾಕಿಸ್ತಾನ, ರಾಜ್ಯ ಸರ್ಕಾರದ ಕೈವಾಡವಿದೆ: ಸಿದ್ದಲಿಂಗ ಸ್ವಾಮೀಜಿ ಆರೋಪ

Public TV
2 Min Read

ಕಲಬುರಗಿ: ಶಿವಮೊಗ್ಗ ರಾಗಿಗುಡ್ಡದಲ್ಲಿ ನಡೆದ ಘಟನೆ (Shivamogga Riots) ಹಿಂದೆ ಪಾಕಿಸ್ತಾನ, ನಿಷೇಧಿತ ಪಿಎಫ್ಐ ಹಾಗೂ ರಾಜ್ಯ ಸರ್ಕಾರದ ಕೈವಾಡವಿದೆ ಎಂದು ಶ್ರೀರಾಮ ಸೇನೆಯ (Sri Ram Sena) ರಾಜ್ಯಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ ಗಂಭೀರ ಆರೋಪ ಮಾಡಿದ್ದಾರೆ.

ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಜಿಹಾದಿ ಮನಸ್ಥಿತಿ ಹೊಂದಿರುವ ಮುಸ್ಲಿಮರು (Muslims),  ಹಿಂದೂಗಳ ಮನೆಗಳನ್ನ ಗುರಿಯಾಗಿಸಿ ಕಲ್ಲು ತೂರಾಟ ನಡೆಸಿದ್ದಾರೆ. 2047ಕ್ಕೆ ದೇಶಕ್ಕೆ ಸ್ವಾತಂತ್ರ್ಯ ಬಂದು 100 ವರ್ಷ ಪೂರೈಸುವ ಹೊತ್ತಿಗೆ, ಭಾರತದಲ್ಲಿ ಇಸ್ಲಾಮಿಕ್‌ ರಾಜ್ಯ ಮಾಡಬೇಕೆಂಬ ಉದ್ದೇಶ ಹೊಂದಿದ್ದಾರೆ. ಈ ಕೃತ್ಯಗಳಿಗೆ ರಾಜ್ಯ ಕಾಂಗ್ರೆಸ್‌ ಸರ್ಕಾರ (Congress Government) ಕುಮ್ಮಕ್ಕು ನೀಡುತ್ತಿದೆ ಎಂದು ಕಿಡಿ ಕಾರಿದ್ದಾರೆ.

ಗಣೇಶ ಹಬ್ಬಕ್ಕೆ (Ganesha Festival) ಗಣಪತಿ ಮೂರ್ತಿ ಪ್ರತಿಷ್ಠಾಪನೆ ಮಾಡಬೇಕಾದರೆ ಹಲವು ಅನುಮತಿಗಳನ್ನು ಪಡೆಯಬೇಕು. ಆದ್ರೆ ಅನ್ಯ ಕೋಮಿನವರಿಗೆ ಎಲ್ಲೆಂದರಲ್ಲಿ ಕಟೌಟ್‌, ಬ್ಯಾನರ್‌ ಹಾಕಲು ಅನುಮತಿ ಬೇಕಾಗಿಲ್ಲ. ಇದು ಯಾವ ನ್ಯಾಯ? ಕೇವಲ ವೋಟ್‌ಬ್ಯಾಂಕ್‌ ರಾಜಕೀಯ ಮಾಡುವುದರಲ್ಲಿ ರಾಜ್ಯ ಸರ್ಕಾರ ಮುಂದಾಗಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಹೊಸ ಮದ್ಯ ನೀತಿ ಪ್ರಕರಣದ ಕಿಂಗ್‌ಪಿನ್ ಸರದಿಯೂ ಬರಲಿದೆ; ದೆಹಲಿ ಸಿಎಂಗೆ ಪರೋಕ್ಷವಾಗಿ ಎಚ್ಚರಿಕೆ ಕೊಟ್ಟ ಅನುರಾಗ್ ಠಾಕೂರ್

ಶಿವಮೊಗ್ಗದಲ್ಲಿ ನಡೆದ ಘಟನೆ ರಾಜ್ಯದ ಗೃಹ ಸಚಿವರಿಗೆ ಸಣ್ಣ ಘಟನೆ ಎನಿಸಿದೆ. ಪೊಲೀಸರ ಮೇಲೆ ಕಲ್ಲು ತೂರಾಟ ಮಾಡುವ, ಪೊಲೀಸರ ಎದುರೇ ಆವಾಜ್‌ ಹಾಕುವ ಸನ್ನಿವೇಶಗಳು ನಡೆದರೂ ಗೃಹ ಸಚಿವರ ಉಡಾಫೆ ಹೇಳಿಕೆ ನೋಡಿದ್ರೆ ಅನುಮಾನ ಹುಟ್ಟೋದು ಸಹಜ. ಹಾಗಾಗಿ ನಾಲಿಗೆಗೆ ಬಣ್ಣ ಹಚ್ಚಿಕೊಂಡು ಉಡಾಫೆ ಹೇಳಿಕೆ ನೀಡುವುದನ್ನು ತಕ್ಷಣವೇ ನಿಲ್ಲಿಸಿ ಪುಂಡರಿಗೆ ತಕ್ಕ ಪಾಠ ಕಲಿಸಬೇಕು ಎಂದು ಆಗ್ರಹಿಸಿದ್ದಾರೆ. ಇದನ್ನೂ ಓದಿ: 10 ಜನ ಸೇರಿಕೊಂಡು ಒಬ್ಬನನ್ನು ಹೊಡೆದಿದ್ದಾರೆ ಸರ್‌: ಬಿಜೆಪಿ ನಾಯಕರ ಮುಂದೆ ಸ್ಥಳೀಯರ ಕಣ್ಣೀರು

ಸುದ್ದಿಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷ ಮಹೇಶ್ ಗೊಬ್ಬರ, ಶರಣು ಗುತ್ತೇದಾರ್, ಅಂಬಾರಾಯ್, ಬಸವರಾಜ, ಪರಮೇಶ್ವರ್, ಮಲ್ಲು ಹಾಜರಿದ್ದರು. ಇದನ್ನೂ ಓದಿ: ಚುನಾವಣೆ ಬಂದರೆ ಬಿಜೆಪಿಯವರಿಗೆ ಮಸೀದಿ, ಪಾಕಿಸ್ತಾನ ನೆನಪಾಗುತ್ತದೆ: ಶಿವರಾಜ್ ತಂಗಡಗಿ

Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್