ಸೀಮಾ ಹೈದರ್‌ಗೆ ಕಾನೂನು ಸಂಕಷ್ಟ; ನೋಯ್ಡಾ ಕೋರ್ಟ್‌ನಿಂದ ಸಮನ್ಸ್‌ ಜಾರಿ

Public TV
1 Min Read

ನವದೆಹಲಿ: ಪ್ರಿಯಕರನಿಗಾಗಿ ಭಾರತಕ್ಕೆ ಬಂದಿದ್ದ ಪಾಕಿಸ್ತಾನಿ ಮಹಿಳೆ ಸೀಮಾ ಹೈದರ್‌ಗೆ (Seema Haider) ಕಾನೂನು ಸಂಕಷ್ಟ ಎದುರಾಗಿದೆ. ನೋಯ್ಡಾದ ಕೌಟುಂಬಿಕ ನ್ಯಾಯಾಲಯವು ಪಾಕ್‌ ಮಹಿಳೆಗೆ ಸಮನ್ಸ್‌ ಜಾರಿ ಮಾಡಿದೆ.

ಸೀಮಾ ಹೈದರ್ ಕಳೆದ ವರ್ಷ ಮೇ ತಿಂಗಳಲ್ಲಿ ತನ್ನ ನಾಲ್ಕು ಅಪ್ರಾಪ್ತ ಮಕ್ಕಳೊಂದಿಗೆ ಭಾರತಕ್ಕೆ ಬಂದಿದ್ದರು. ಮೊಬೈಲ್‌ ಗೇಮ್‌ PUBG ಆಡುವಾಗ ಭಾರತದ ಸಚಿನ್‌ ಮೀನಾ ಪರಿಚಯವಾಗಿತ್ತು. ಪರಿಚಯ ಪ್ರೀತಿಗೆ ತಿರುಗಿ ತನ್ನ ಸಂಗಾತಿಗಾಗಿ ಪಾಕ್‌ನಿಂದ ಭಾರತಕ್ಕೆ ಸೀಮಾ ಬಂದು ನೆಲೆಸಿದ್ದಾರೆ. ಕಳೆದ ತಿಂಗಳು ಇಬ್ಬರೂ ತಮ್ಮ ಮೊದಲ ವಿವಾಹ ವಾರ್ಷಿಕೋತ್ಸವವನ್ನು ಸಹ ಆಚರಿಸಿಕೊಂಡಿದ್ದರು. ಇದನ್ನೂ ಓದಿ: ಜಮ್ಮು ಕಾಶ್ಮೀರದಲ್ಲಿ ದೋಣಿ ಮುಳುಗಡೆ – ಶಾಲಾ ಮಕ್ಕಳು ಸೇರಿದಂತೆ ಹಲವರು ನಾಪತ್ತೆ

ಆದರೆ ಕರಾಚಿಯಲ್ಲಿ ನೆಲೆಸಿರುವ ಸೀಮಾ ಪತಿ ಗುಲಾಮ್‌ ಹೈದರ್‌ ಕಾನೂನು ಸಮರಕ್ಕೆ ಮುಂದಾಗಿದ್ದಾರೆ. ಭಾರತೀಯ ವಕೀಲರ ಮೂಲಕ ನೋಯ್ಡಾದ ಕೌಟುಂಬಿಕ ನ್ಯಾಯಾಲಯದಲ್ಲಿ ಸಚಿನ್ ಮೀನಾ ಜೊತೆಗಿನ ಸೀಮಾ ವಿವಾಹದ ಸಿಂಧುತ್ವವನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದಾರೆ.

ಗುಲಾಮ್‌ ಹೈದರ್‌ ತಮ್ಮ ಅರ್ಜಿಯಲ್ಲಿ, ತನ್ನ ಮಕ್ಕಳ ಧಾರ್ಮಿಕ ಮತಾಂತರವನ್ನು ಪ್ರಶ್ನಿಸಿದ್ದಾರೆ. ಅವರ ವಕೀಲ ಮೊಮಿನ್ ಮಲಿಕ್, ಗುಲಾಮ್ ಹೈದರ್‌ನಿಂದ ಸೀಮಾ ವಿಚ್ಛೇದನ ಪಡೆದಿಲ್ಲ. ಸಚಿನ್ ಜೊತೆಗಿನ ಅವರ ಮದುವೆ ಮಾನ್ಯವಾಗಿಲ್ಲ ಎಂದು ಪ್ರತಿಪಾದಿಸಿದ್ದಾರೆ. ಇದನ್ನೂ ಓದಿ: ಸೇತುವೆಯಿಂದ ಬಸ್‌ ಕೆಳಗೆ ಬಿದ್ದು 5 ಮಂದಿ ಸಾವು

ಈ ಹಿನ್ನೆಲೆಯಲ್ಲಿ ಮೇ 27ರಂದು ನ್ಯಾಯಾಲಯಕ್ಕೆ ಹಾಜರಾಗುವಂತೆ ಹೈದರ್‌ಗೆ ಸೂಚಿಸಲಾಗಿದೆ. ಗುಲಾಮ್ ಹೈದರ್ ತನ್ನ ನಾಲ್ಕು ಮಕ್ಕಳ ಪಾಲನೆಗಾಗಿ ಸಹಾಯಕ್ಕಾಗಿ ಪಾಕಿಸ್ತಾನದ ಉನ್ನತ ವಕೀಲ ಮತ್ತು ಮಾನವ ಹಕ್ಕುಗಳ ಕಾರ್ಯಕರ್ತ ಅನ್ಸಾರ್ ಬರ್ನಿ ಅವರನ್ನು ಮೊದಲು ಸಂಪರ್ಕಿಸಿದ್ದರು.

ಸೀಮಾ ಹೈದರ್ ಅವರ ಮೊದಲ ಪತಿ ಸೌದಿ ಅರೇಬಿಯಾದಲ್ಲಿ ಕೆಲಸ ಮಾಡುತ್ತಿದ್ದಾಗ, ಸೀಮಾ ಯುಎಇ ಮತ್ತು ನೇಪಾಳದ ಮೂಲಕ ಭಾರತಕ್ಕೆ ಬಂದಿದ್ದರು.

Share This Article