ಅಮೆರಿಕಕ್ಕೆ ಅಪರೂಪದ ಖನಿಜಗಳ ಮೊದಲ ರಫ್ತು ಕಳುಹಿಸಿದ್ದೇವೆ : ಪಾಕ್

Public TV
1 Min Read

ಇಸ್ಲಾಮಾಬಾದ್: ಅಪರೂಪದ ಖನಿಜಗಳ ರಫ್ತಿಗೆ ಅಮೆರಿಕದೊಂದಿಗೆ (America) ಒಪ್ಪಂದ ಮಾಡಿಕೊಂಡಿರುವ ಪಾಕಿಸ್ತಾನ (Pakistan)  ಇದೀಗ ಮೊದಲ  ರಫ್ತು ಕಳುಹಿಸಿದೆ ಎಂದು ಪಾಕಿಸ್ತಾನ ಸರ್ಕಾರ ಮಾಹಿತಿ ನೀಡಿರುವುದಾಗಿ ಮೂಲಗಳು ತಿಳಿಸಿವೆ.

ಸೆಪ್ಟೆಂಬರ್‌ನಲ್ಲಿ ಪಾಕಿಸ್ತಾನದೊಂದಿಗೆ ಅಮೆರಿಕ ತಿಳುವಳಿಕೆ ಒಪ್ಪಂದಕ್ಕೆ ಸಹಿ ಹಾಕಿತ್ತು. ಒಪ್ಪಂದದ ಭಾಗವಾಗಿ ಮೊದಲ ಸುತ್ತಿನಲ್ಲಿ ಖನಿಜಗಳನ್ನು ಅಮೆರಿಕಕ್ಕೆ ಕಳುಹಿಸಿದೆ. ಪಾಕ್‌ನಲ್ಲಿ ಖನಿಜ ಸಂಸ್ಕರಣೆ ಮತ್ತು ಅಭಿವೃದ್ಧಿ ಸೌಲಭ್ಯ ಸ್ಥಾಪನೆಗೆ ಅಮೆರಿಕ ಸಂಸ್ಥೆ ಸುಮಾರು 50 ಲಕ್ಷ ಡಾಲರ್ ಹೂಡಿಕೆ ಮಾಡಲು ಯೋಜಿಸಿದೆ ಎನ್ನಲಾಗಿದೆ.ಇದನ್ನೂ ಓದಿ: ಕೊಪ್ಪಳ ಹುಲಿಗೆಮ್ಮ ಪಾದಯಾತ್ರಿಕರ ಮೇಲೆ ಹರಿದ ಬಸ್‌ – ಮೂವರು ಸಾವು, ನಾಲ್ವರಿಗೆ ಗಾಯ

ಈ ಒಪ್ಪಂದವು ದ್ವಿಪಕ್ಷೀಯ ಸಹಕಾರಕ್ಕೆ ಐತಿಹಾಸಿಕ ಮೈಲಿಗಲ್ಲು ಎಂದು ಪಾಕಿಸ್ತಾನ ಸರ್ಕಾರ ಬಣ್ಣಿಸಿದೆ. ಇತ್ತೀಚೆಗೆ ಅಮೆರಿಕ ಅಧ್ಯಕ್ಷ ಟ್ರಂಪ್ ಅವರನ್ನು ಭೇಟಿಯಾದ ಪಾಕ್ ಸೇನೆ ಮುಖ್ಯಸ್ಥ ಮುನೀರ್ ಈ ಖನಿಜಗಳನ್ನು ತೋರಿಸಿದ್ದರು.

 

Share This Article