‘ಪಾಕಿಸ್ತಾನಿ ಆಹಾರೋತ್ಸವ’ ಎಂದು ಬರೆದ ಫ್ಲೆಕ್ಸ್ ಕಿತ್ತೆಸೆದು ಬೆಂಕಿಯಲ್ಲಿ ಸುಟ್ಟ ಬಜರಂಗ ದಳ

Public TV
2 Min Read

ಸೂರತ್: ‘ಪಾಕಿಸ್ತಾನಿ ಆಹಾರೋತ್ಸವ’ ಎಂದು ಬರೆದ ಫ್ಲೆಕ್ಸ್ ಬ್ಯಾನರ್ ಅನ್ನು ಬಜರಂಗ ದಳದ ಕಾರ್ಯಕರ್ತರು ಕಿತ್ತೆಸೆದು ಬೆಂಕಿಯಲ್ಲಿ ಸುಟ್ಟ ಘಟನೆ ಗುಜರಾತ್ ನಲ್ಲಿ ನಡೆದಿದೆ.

ಗುಜರಾತ್‍ನ ರಿಂಗ್ ರೋಡ್ ನಲ್ಲಿ ರೆಸ್ಟೋರೆಂಟ್ ಇರುವ ಕಟ್ಟಡದ ಮೇಲೆ ‘ಪಾಕಿಸ್ತಾನಿ ಆಹಾರೋತ್ಸವ’ ಎಂದು ಘೋಷಿಸುವ ಬೃಹತ್ ಫ್ಲೆಕ್ಸ್ ಬ್ಯಾನರ್ ಅನ್ನು ಹಾಕಲಾಗಿತ್ತು. ಇದನ್ನು ನೋಡಿದ ಬಜರಂಗ ದಳದ ಕಾರ್ಯಕರ್ತರು ಸೋಮವಾರ ‘ಜೈ ಶ್ರೀ ರಾಮ್’ ಎಂದು ಘೋಷಣೆಯನ್ನು ಕೂಗಿ ಬ್ಯಾನರ್ ಅನ್ನು ಕಿತ್ತೊಗೆದು ಬೆಂಕಿ ಹಚ್ಚಿ ಸುಟ್ಟಿದ್ದಾರೆ. ಇದನ್ನೂ ಓದಿ: 16.8 ಕೆಜಿ ತೂಕದ ಗೆಡ್ಡೆಯನ್ನ ಹೊರತೆಗೆದ ವೈದ್ಯರು

ಈ ಆಹಾರೋತ್ಸವವನ್ನು ಡಿಸೆಂಬರ್ 12-22 ರ ನಡುವೆ ‘ಟೇಸ್ಟ್ ಆಫ್ ಇಂಡಿಯಾ’ ರೆಸ್ಟೋರೆಂಟ್‍ನಲ್ಲಿ ಆಯೋಜಿಸಲಾಗಿತ್ತು. ಬಜರಂಗ ದಳದ ಆಕ್ರೋಶಕ್ಕೆ ಗುರಿಯಾದ ನಂತರ ಇವರು ತಮ್ಮ ತಪ್ಪುಗಳನ್ನು ಒಪ್ಪಿಕೊಂಡಿದ್ದಾರೆ.

ಈ ಕುರಿತು ದಕ್ಷಿಣ ಗುಜರಾತ್ ಬಜರಂಗ ದಳದ ಅಧ್ಯಕ್ಷ ದೇವಿಪ್ರಸಾದ್ ದುಬೆ ಮಾತನಾಡಿದ್ದು, ಸದಸ್ಯ ಕಾರ್ಯಕರ್ತರು ಇಂತಹ ಕಾರ್ಯಕ್ರಮಕ್ಕೆ ವಿರೋಧ ವ್ಯಕ್ತಪಡಿಸಿದ ಕಾರಣ ಕಟ್ಟಡದಿಂದ ಫ್ಲೆಕ್ಸ್ ಬ್ಯಾನರ್ ತೆಗೆದು ಬೆಂಕಿ ಹಚ್ಚಿದ್ದಾರೆ. ಆ ರೆಸ್ಟೋರೆಂಟ್‍ನಲ್ಲಿ ಈ ರೀತಿಯ ಯಾವುದೇ ಕಾರ್ಯಕ್ರಮಗಳನ್ನು ಆಯೋಜಿಸುವಂತಿಲ್ಲ ಎಂದು ನಾವು ಖಚಿತಪಡಿಸಿದ್ದೇವೆ. ಅಂತಹ ಯಾವುದೇ ರೀತಿಯ ಕಾರ್ಯಕ್ರಮಗಳನ್ನು ನಾವು ಸಹಿಸುವುದಿಲ್ಲ ಎಂದು ನಾವು ರೆಸ್ಟೋರೆಂಟ್ ನವರಿಗೆ ತಿಳಿಸಿದ್ದು, ಅದಕ್ಕೆ ಅವರು ತಪ್ಪನ್ನು ಒಪ್ಪಿಕೊಂಡಿದೆ ಎಂದು ಹೇಳಿದರು.

ಈ ಕಾರ್ಯಕ್ರಮವನ್ನು ಆಯೋಜಿಸಿದ್ದ ಸಂದೀಪ್ ದಾವರ್ ಮಾತನಾಡಿದ್ದು, ಆಹಾರೋತ್ಸವದಲ್ಲಿ ಇನ್ನು ಮುಂದೆ ಪಾಕಿಸ್ತಾನಿ ಎಂಬ ಪದವನ್ನು ಬಳಸುವುದಿಲ್ಲ. ಅದು ಕೆಲವರ ಭಾವನೆಗಳಿಗೆ ಧಕ್ಕೆ ತರುತ್ತದೆ. ನಾವು ಆ ಪದವನ್ನು ಬಳಸಿದಾಗ, ಕೆಲವರು ಅದನ್ನು ಇಷ್ಟಪಡುವುದಿಲ್ಲ ಎಂದು ನಮಗೆ ತಿಳಿದುಬಂದಿದೆ. ಆದರೆ ಅದು ಹೀಗೆ ಆಗುತ್ತದೆ ಎಂದು ನಮಗೆ ಗೊತ್ತಿರಲಿಲ್ಲ. ಇದು ಪಾಕಿಸ್ತಾನದೊಂದಿಗೆ ಯಾವುದೇ ಸಂಬಂಧವಿಲ್ಲ. ಮುಘಲಾಯಿ ಪಾಕಪದ್ಧತಿಯ ಎರಡನೇ ಹೆಸರು ಪಾಕಿಸ್ತಾನಿ ಆಹಾರ ಎಂದು ತಿಳಿಸಿದರು. ಇದನ್ನೂ ಓದಿ: ಇಂಟರ್ ನ್ಯಾಷನಲ್ ಬುಕ್ ಆಫ್ ರೆಕಾರ್ಡ್ ಪುಟ ಸೇರಿದ 5 ವರ್ಷದ ಪೋರಿ

ಈ ಘಟನೆಯ ವಿರುದ್ಧ ಯಾವುದೇ ಪೊಲೀಸ್ ಪ್ರಕರಣ ದಾಖಲಾಗಿಲ್ಲ.

Share This Article
Leave a Comment

Leave a Reply

Your email address will not be published. Required fields are marked *