ಭಾರತ ಗೆಲ್ಲಲೆಂದು ಜನಗಣಮನ ಹಾಡಿದ ಪಾಕ್ ಫ್ಯಾನ್ಸ್

Public TV
2 Min Read

ನವದೆಹಲಿ: ಭಾರತ ಗೆಲ್ಲಲೆಂದು ಪಾಕಿಸ್ತಾನ ಅಭಿಮಾನಿಗಳು ಕುಣಿದು ಕುಪ್ಪಳಿಸುತ್ತಿದ್ದು, ಜನ ಗಣ ಮನ ಹಾಡಿ ಭಾರತಕ್ಕೆ ಹಾರೈಸಿದ್ದಾರೆ.

ಅರೇ ಇದನಪ್ಪಾ ಪಾಕಿಸ್ತಾನಿಗಳು ನಮಗೇಕೆ ಸಪೋರ್ಟ್ ಮಾಡುತ್ತಿದ್ದಾರೆ ಎಂದು ಆಶ್ಚರ್ಯ ಪಡಬೇಡಿ. ಇದರ ಹಿಂದಿನ ಗುಟ್ಟು ಬೇರೆಯೇ ಇದೆ. ಹೌದು ಭಾರತ ಗೆದ್ದರೆ ಸರ್ಫರಾಜ್ ಅಹ್ಮದ್ ನೇತೃತ್ವದ ಪಾಕಿಸ್ತಾನ ತಂಡ ಸರಾಗವಾಗಿ ಸೆಮಿಫೈನಲ್ ತಲುಪಲಿದೆ ಈ ಹಿನ್ನೆಲೆ ಪಾಕಿಗಳು ಭಾರತ ಗೆಲ್ಲಲೆಂದು ಬೊಬ್ಬೆ ಹೊಡೆಯುತ್ತಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನವನ್ನೇ ಪ್ರಾರಂಭಿಸಿದ್ದು, ಒಬ್ಬ ಜನ ಗಣ ಮನ ಅಧಿನಾಯಕ ಜಯ ಹೇ ಭಾರತ ಭಾಗ್ಯವಿದಾತ ಎಂದು ಹೇಳಿದರೆ, ಇನ್ನೂ ಹಲವರು ಭಾರತ ಗೆದ್ದರೆ ವಿರಾಟ್ ಕೊಹ್ಲಿ ಹಾಗೂ ವಿಂಗ್ ಕಮಾಂಡರ್ ಅಭಿನಂದನ್‍ಗೆ ಚಹಾ ಪಾರ್ಟಿ ಏರ್ಪಡಿಸುತ್ತೇವೆ ಎಂದು ಕಮೆಂಟ್ ಮೂಲಕ ಹೇಳಿದ್ದಾರೆ.

ಭಾರತ-ಇಂಗ್ಲೆಂಡ್ ಸೆಣಸಾಟದ ಕುರಿತು ಪಾಕಿಸ್ತಾನ ಅಭಿಮಾನಿಗಳು ಈಗಾಗಲೇ ಮೆನ್ ಇನ್ ಬ್ಲ್ಯೂಗೆ ಬೆಂಬಲ ವ್ಯಕ್ತಪಡಿಸಲು ಪ್ರಾರಂಭಿಸಿದ್ದು, ಪಾಕಿಸ್ತಾನ ತಂಡದ ಮಾಜಿ ನಾಯಕ ನಾಸರ್ ಹುಸೇನ್ ಭಾರತ-ಇಂಗ್ಲೆಂಡ್ ತಂಡಗಳಲ್ಲಿ ಯಾವುದನ್ನು ಬೆಂಬಲಿಸುತ್ತೀರಿ ಎಂದು ಟ್ವಿಟ್ಟರ್‍ನಲ್ಲಿ ಅಭಿಮಾನಿಗಳನ್ನು ಕೇಳಿದ್ದಾರೆ. ಇದಕ್ಕೆ ಪಾಕಿಗಳು ವಿಭಿನ್ನ ರೀತಿಯಲ್ಲಿ ಕಮೆಂಟ್ ಮಾಡಿದ್ದು, ಇಂಗ್ಲೆಂಡ್ ವಿರುದ್ಧ ಪಂದ್ಯವಿದ್ದರೆ ಭಾರತ ಮತ್ತು ಪಾಕಿಸ್ತಾನ ಒಂದೇ, ಏಕೆಂದರೆ ಬ್ರಿಟಿಷರ ಆಡಳಿತದ ವಿರುದ್ಧ ಒಟ್ಟಿಗೆ ಧ್ವನಿ ಎತ್ತಿದವರು ನಾವು ಎಂದು ಹೇಳಿದ್ದಾರೆ.

ಇದಕ್ಕೆ ಸಾಕಷ್ಟು ಅಭಿಮಾನಿಗಳು ಪ್ರತಿಕ್ರಿಯಿಸಿದ್ದು, ‘ಜನ ಗಣ ಮನ ಅಧಿನಾಯಕ ಜಯ ಹೇ ಭಾರತ ಭಾಗ್ಯವಿದಾತ ಪಂಜಾಬ ಸಿಂಧು ಗುಜರಾತ ಮರಾಠಾ ದ್ರಾವಿಡ ಉತ್ಕಲ ವಂಗ’ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ. ಇನ್ನೂ ಕೆಲವರು ಭಾರತ ಗೆದ್ದರೆ ವಿಂಗ್ ಕಮಾಂಡರ್ ಅಭಿನಂದನ್ ಹಾಗೂ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿಗೆ ಚಹಾ ಪಾರ್ಟಿ ಕೊಡಿಸುವುದಾಗಿ ಪ್ರತಿಕ್ರಿಯಿಸಿದ್ದಾರೆ.

ಭಾರತ ಎರಡು ಕಾರಣಗಳಿಗಾಗಿ ಗೆಲ್ಲಬೇಕು 1. ನಾವು ಅಕ್ಕಪಕ್ಕದವರು, 2 ನಾವು ಕ್ರಿಕೆಟ್ ವಿಷಯದಲ್ಲಿ ಭಾವೋದ್ರೇಕರು ಎಂದು ಒಬ್ಬ ಕಮೆಂಟ್ ಮಾಡಿದ್ದರೆ, ಮತ್ತೊಬ್ಬರು ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿ ನಿಯಮದ ವಿರುದ್ಧ ಹಾಗೂ ಬ್ರಿಟಿಷರನ್ನು ತೊಲಗಿಸಿ ಸ್ವಾತಂತ್ರ್ಯ ಪಡೆಯಲು 1857ರಲ್ಲಿ ಒಟ್ಟಿಗೆ ಹೋರಾಟ ಮಾಡಿದ್ದೇವು. ಹೀಗಾಗಿ ಇಂಗ್ಲೆಂಡ್ ಯಾವಾಗಲೂ ನಮಗೆ ವೈರಿ ಎಂದು ಬರೆದಿದ್ದಾರೆ.

ಶನಿವಾರ ನಡೆದ ವಿಶ್ವಕಪ್ ಪಂದ್ಯದಲ್ಲಿ ಪಾಕಿಸ್ಥಾನ ಅಫ್ಘಾನಿಸ್ಥಾನವನ್ನು ಸೋಲಿಸಿದ್ದು, ಈ ಮೂಲಕ ಪಾಯಿಂಟ್ಸ್ ಪಟ್ಟಿಯಲ್ಲಿ 9 ಅಂಕ ಪಡೆದು 4ನೇ ಸ್ಥಾನ ಪಡೆದು ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡಿದೆ. ಜುಲೈ 5 ರಂದು ಬಾಂಗ್ಲಾದೇಶದ ವಿರುದ್ಧ ಪಾಕಿಗಳು ಸೆಣಸಲಿದ್ದು, ಇದು ಅವರ ಕೊನೆಯ ಗುಂಪು ಆಟವಾಗಿದೆ.

Share This Article
Leave a Comment

Leave a Reply

Your email address will not be published. Required fields are marked *