`ಪ್ರೇಮ ಕಾಶ್ಮೀರ’ದಲ್ಲಿ ರಕ್ತದೋಕುಳಿ – ಭೀಕರ ದುರಂತದ ಬಗ್ಗೆ ಪ್ರತ್ಯಕ್ಷದರ್ಶಿಗಳು ಹೇಳಿದ್ದೇನು?

Public TV
1 Min Read

ಶ್ರೀನಗರ: ಜಮ್ಮು ಕಾಶ್ಮೀರದ (Jammu Kashmir) ಪಹಲ್ಗಾಮ್‌ನ (Pahalgam) ಬೈಸರನ್ ಹುಲ್ಲುಗಾವಲಿನಲ್ಲಿ ನಡೆದ ಭೀಕರ ದಾಳಿಯ ಬಗ್ಗೆ ಅಲ್ಲಿನ ಪ್ರತ್ಯಕ್ಷದರ್ಶಿಗಳು ದುರಂತ ಕಥೆಯನ್ನು ಬಿಚ್ಚಿಟ್ಟಿದ್ದಾರೆ.

ಏಪ್ರಿಲ್ 22ರ ಮಧ್ಯಾಹ್ನ 1:50ರ ಸುಮಾರಿಗೆ ನಡೆದ ಪೈಶಾಚಿಕ ಕೃತ್ಯದಲ್ಲಿ 26 ಪ್ರವಾಸಿಗರು ಬಲಿಯಾಗಿದ್ದಾರೆ. ಘಟನೆ ಬಗ್ಗೆ ಪ್ರತ್ಯಕ್ಷದರ್ಶಿಗಳು ಮತ್ತಷ್ಟು ಮಾಹಿತಿ ನೀಡಿದ್ದು, ಕರಾಳ ಘಟನೆ ಕಣ್ಮುಂದೆ ಕಟ್ಟಿದಂತಾಗಿದೆ.ಇದನ್ನೂ ಓದಿ: Pahalgam Terror Attack | ಪಾಕಿಸ್ತಾನ ಸಮರ್ಥಿಸಿಕೊಂಡಿದ್ದ ಅಸ್ಸಾಂ ಶಾಸಕ ಅರೆಸ್ಟ್‌

ಪ್ರತ್ಯಕ್ಷದರ್ಶಿಗಳು ಹೇಳೋದೇನು?
* ಪಹಲ್ಗಾಮ್‌ನ ಬೈಸರನ್ ಹುಲ್ಲುಗಾವಲಿನಲ್ಲಿ ಪ್ರವಾಸಿಗರು ತಮ್ಮ ಕುಟುಂಬದೊಂದಿಗೆ ಕಾಲ ಕಳೆಯುತ್ತಿರುವಾಗ ಹುಲ್ಲುಗಾವಲಿನ ಪೈನ್ ಮರಗಳ ಮಧ್ಯದಿಂದ 5 ಉಗ್ರರು ಬಂದರು.
* ಯಾವ ಕಡೆಯಲ್ಲಿ ಹೆಚ್ಚು ಪ್ರವಾಸಿಗರಿದ್ದರೋ ಆ ಕಡೆ 3 ತಂಡಗಳಾಗಿ ತೆರಳಿದರು.
* ಉಗ್ರರು ಬಂದೂಕಗಳ ಜೊತೆಗೆ ತಮ್ಮ ಕಡೆ ಬಾಡಿ ಕ್ಯಾಮೆರಾವನ್ನು ಇಟ್ಟುಕೊಂಡಿದ್ದರು.
* ತಮ್ಮ ಕುಟುಂಬದ ಜೊತೆಗಿದ್ದವರು ಬಂದೂಕುಧಾರಿಗಳನ್ನು ನೋಡಿ, ಇರ‍್ಯಾಕೆ ನಮ್ಮ ಹತ್ತಿರ ಬರುತ್ತಿದ್ದಾರೆ ಎಂದುಕೊಳ್ಳುತ್ತಿದ್ದರು.
* ಹತ್ತಿರ ಬಂದಿದ್ದೇ ಉಗ್ರರು ಧರ್ಮ ಯಾವುದು, ಇಸ್ಲಾಂ ಶ್ಲೋಕ ಹೇಳಿ ಎಂದು ಕೇಳಿದರು.
* ಆ ದಿನ ಉಗ್ರರು ಮೊದಲ ಗುಂಡು ಹಾರಿಸಿದ್ದು ಮ.1:50ರ ಸುಮಾರಿಗೆ, ಆದರೆ 10 ನಿಮಿಷಗಳಲ್ಲೇ 26 ಜನರನ್ನು ಕೊಂದು ಕಾಡಿನಲ್ಲಿ ಅದೃಶ್ಯರಾದರು.
* ಪ್ರವಾಸಿಗರನ್ನು ಗುರಿಯಾಗಿಸಿ ತಲೆಗೆ ಗುಂಡಿಟ್ಟು ಕೊಂದ ಅರ್ಧಗಂಟೆ ಬಳಿಕ ಪೊಲೀಸರಿಗೆ ಸಂದೇಶ ರವಾನೆಯಾಗಿದೆ.
* ದುರ್ಗಮ ಪ್ರದೇಶವಾಗಿರುವ ಕಾರಣ ಮ.3 ಗಂಟೆ ಬಳಿಕ ಅಲ್ಲಿದ್ದವರಿಗೆ ಸಹಾಯ ಸಿಕ್ಕಿದೆ, ಒಂದು ವೇಳೆ ಗಾಯಗೊಂಡವರಿಗೆ ಬೇಗ ಚಿಕಿತ್ಸೆ ಸಿಕ್ಕಿದ್ದರೆ, ಹಲವು ಜನ ಬದುಕುವ ಅವಕಾಶ ಇತ್ತು ಎಂದು ಘಟನೆ ಬಗ್ಗೆ ತಿಳಿಸಿದ್ದಾರೆ.ಇದನ್ನೂ ಓದಿ: Pahalgam Attack | ಕೇಂದ್ರ ಯಾವ್ದೇ ಕ್ರಮ ತೆಗೆದುಕೊಂಡ್ರೂ‌ ಪೂರ್ಣ ಬೆಂಬಲ ಇದೆ: ರಾಹುಲ್‌ ಗಾಂಧಿ

 

Share This Article