ಧರ್ಮ ಕೇಳಿ ಉಗ್ರರಿಂದ ದಾಳಿ – ಬೇಸತ್ತು ಇಸ್ಲಾಂ ತ್ಯಜಿಸಿದ ಶಿಕ್ಷಕ

Public TV
1 Min Read

ಕೋಲ್ಕತ್ತಾ: ಪಹಲ್ಗಾಮ್‌ನಲ್ಲಿ ಉಗ್ರರು (Pahalgam Terror Attack) ಧರ್ಮ ಕೇಳಿ ದಾಳಿ ನಡೆಸಿದ್ದರಿಂದ ಪಶ್ಚಿಮ ಬಂಗಾಳದ (West Bengal) ಬದುರಿಯಾದ ಶಾಲಾ ಶಿಕ್ಷಕರೊಬ್ಬರು ಇಸ್ಲಾಂ (Islam) ತ್ಯಜಿಸಲು ನಿರ್ಧರಿಸಿದ್ದಾರೆ.

ಈ ಬಗ್ಗೆ ವೀಡಿಯೋ ಹಂಚಿಕೊಂಡಿರುವ ಶಿಕ್ಷಕ ಸಬೀರ್ ಹುಸೇನ್, ಕಾಶ್ಮೀರ ಸೇರಿದಂತೆ ವಿವಿಧೆಡೆ ಧರ್ಮವನ್ನು ಹಿಂಸೆಗಾಗಿ ಆಯುಧವನ್ನಾಗಿ ಬಳಸಲಾಗುತ್ತಿದೆ. ಇದನ್ನು ಒಪ್ಪಲು ಸಾಧ್ಯವಿಲ್ಲ. ಆದ್ದರಿಂದ ನಾನು ಇಸ್ಲಾಂನ್ನು ತ್ಯೆಜಿಸುತ್ತೇನೆ. ಯಾವ ಧರ್ಮದ ವ್ಯಾಪ್ತಿಗೂ ಒಳಪಡದೆ, ಕೇವಲ ಮಾನವನಾಗಿ ಗುರುತಿಸಿಕೊಳ್ಳಲು ಬಯಸುತ್ತೇನೆ ಎಂದು ಅವರು ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಮತ್ತೊಬ್ಬ ಉಗ್ರನ ಮನೆ ಉಡೀಸ್‌ – ಇಲ್ಲಿಯವರೆಗೆ 8 ಉಗ್ರರ ನಿವಾಸ ಧ್ವಂಸ

ಏ.22 ರಂದು ಜಮ್ಮು ಮತ್ತು ಕಾಶ್ಮೀರದ (Jammu and Kashmir) ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ಭಯೋತ್ಪಾದಕರು ದಾಳಿ ನಡೆಸಿದ್ದರು. ಈ ದಾಳಿಯಲ್ಲಿ 26 ಮಂದಿ ಸಾವನ್ನಪ್ಪಿದ್ದರು. ಕರ್ನಾಟಕ ಮೂಲದ ಇಬ್ಬರು ಸಾವಿಗೀಡಾಗಿದ್ದರು. ಇದನ್ನೂ ಓದಿ: ಪಹಲ್ಗಾಮ್‌ ದಾಳಿ ಬೆಂಬಲಿಸಿ ಪೋಸ್ಟ್‌ – ಶಾಸಕ, ಶಿಕ್ಷಕ, ವಕೀಲ ಸೇರಿ 19 ಮಂದಿ ಅರೆಸ್ಟ್‌

Share This Article