ಭಾರತದಿಂದ ದಾಳಿ ಭೀತಿ – ಕ್ಷಿಪಣಿ ಪರೀಕ್ಷೆಗೆ ಮುಂದಾದ ಪಾಕ್‌

By
1 Min Read

ನವದೆಹಲಿ: ಪಹಲ್ಗಾಮ್‌ ದಾಳಿಗೆ (Pahalgam Terror Attack) ಪ್ರತಿಯಾಗಿ ಭಾರತ (India) ದಾಳಿ ನಡೆಸಬಹುದು ಎಂಬ ಭೀತಿಯಲ್ಲಿರುವ ಪಾಕಿಸ್ತಾನ (Pakistan) ಈಗ ತನ್ನ ಕ್ಷಿಪಣಿ (Missile) ಪರೀಕ್ಷೆಗೆ ಮುಂದಾಗಿದೆ.

ಏಪ್ರಿಲ್ 24, 25 ರಂದು ತನ್ನ ವಿಶೇಷ ಆರ್ಥಿಕ ವಲಯದೊಳಗಿನ ತನ್ನ ಕರಾಚಿ ಕರಾವಳಿಯಲ್ಲಿ (Karachi Coast) ಮೇಲ್ಮೈಯಿಂದ ಮೇಲ್ಮೈಗೆ ಕ್ಷಿಪಣಿ ಪರೀಕ್ಷೆಯನ್ನು ನಡೆಸಲು ಮುಂದಾಗಿದೆ ಎಂದು ರಕ್ಷಣಾ ಮೂಲಗಳನ್ನು ಆಧಾರಿಸಿ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಸಿಂಧೂ ಜಲ ಒಪ್ಪಂದವನ್ನು ಸ್ಥಗಿತಗೊಳಿಸುವ ಮತ್ತು ರಾಜತಾಂತ್ರಿಕ ಸಂಬಂಧಗಳನ್ನು ಕಡಿತಗೊಳಿಸಲು ಭಾರತ ಮುಂದಾಗುತ್ತಿದ್ದಂತೆ ಪಾಕಿಸ್ತಾನ ಸರ್ಕಾರ ಉನ್ನತ ಮಟ್ಟದ ಭದ್ರತಾ ಸಭೆಯನ್ನು ನಡೆಸಲಿದೆ ಎಂದು ಪಾಕಿಸ್ತಾನದ ಉಪ ಪ್ರಧಾನಿ ಇಶಾಕ್ ದಾರ್ ಘೋಷಿಸಿದ ಕೆಲವೇ ಗಂಟೆಗಳ ನಂತರ ಇದು ಸಂಭವಿಸಿದೆ. ಇದನ್ನೂ ಓದಿ: ಬಾಲಾಕೋಟ್‌ ಏರ್‌ಸ್ಟ್ರೈಕ್‌ನಂತೆ ದಾಳಿ ಭೀತಿ – ಗಡಿಗೆ ವಿಮಾನಗಳನ್ನು ಸಾಗಿಸುತ್ತಿದೆ ಪಾಕ್‌

ಈ ಮಹತ್ವದ ಸಭೆಯಲ್ಲಿ ಪ್ರಧಾನ ಮಂತ್ರಿ, ಮೂರು ಪಡೆಗಳ ಮುಖ್ಯಸ್ಥರು ಮತ್ತು ಪ್ರಮುಖ ಮಂತ್ರಿಗಳು ಸಭೆಯಲ್ಲಿ ಭಾಗವಹಿಸಲಿದ್ದಾರೆ

Share This Article