ಪದ್ಮಾವತಿ ಟ್ರೇಲರ್ ನೋಡಿ ಬಾಹುಬಲಿ ನಿರ್ದೇಶಕ ರಾಜಮೌಳಿ ಟ್ವೀಟ್ ಮಾಡಿದ್ರು

Public TV
1 Min Read

ಮುಂಬೈ: ಐತಿಹಾಸಿಕ ಕಥಾಹಂದರವುಳ್ಳ `ಪದ್ಮಾವತಿ’ ಸಿನಿಮಾ ಲೋಕದಲ್ಲಿ ಹೊಸ ಟ್ರೆಂಡ್ ಸೃಷ್ಟಿ ಮಾಡುತ್ತಿದೆ. ಸೋಮವಾರ ಪದ್ಮಾವತಿ ಸಿನಿಮಾದ ಟ್ರೇಲರ್ ಬಿಡುಗಡೆಗೊಂಡಿದ್ದು, ಇದುವರೆಗೂ ಸುಮಾರು 2 ಕೋಟಿಗಿಂತಲೂ ಅಧಿಕ ವ್ಯೂವ್ ಗಳನ್ನು ಪಡೆದುಕೊಂಡಿದೆ. ಏಪ್ರಿಲ್ ನಲ್ಲಿ ಬಿಡುಗಡೆಯಾಗಿ ಜಗತ್ತಿನಾದ್ಯಂತ ಅಪಾರ ಮೆಚ್ಚುಗೆ ಪಡೆದುಕೊಂಡಿದ್ದ ಬಾಹುಬಲಿ ಸಿನಿಮಾದ ನಿರ್ದೇಶಕ ರಾಜಮೌಳಿ ಸಹ ಪದ್ಮಾವತಿಯ ಟ್ರೇಲರ್ ಬಗ್ಗೆ ತಮ್ಮ ಮೆಚ್ಚುಗೆಯನ್ನು ಸೂಚಿಸಿದ್ದಾರೆ.

ಸಿನಿಮಾದ ಟ್ರೇಲರ್ ಅತಿ ಸುಂದರವಾಗಿದೆ. ಪ್ರತಿಯೊಂದು ಸೀನ್ ಗಳಲ್ಲಿ ತಂತ್ರಜ್ಞರ ಪರಿಪೂರ್ಣತೆ ಕಾಣುತ್ತದೆ. ಸಿನಿಮಾದಲ್ಲಿ ಕಾರ್ಯನಿರ್ವಹಿಸಿದ ಪ್ರತಿಯೊಬ್ಬ ಕುಶಲಕರ್ಮಿ (ಕ್ರಾಫ್ಟ್ ಮ್ಯಾನ್) ಚಾಕಚಕ್ಯತೆಯನ್ನು ಟ್ರೇಲರ್ ತೋರಿಸುತ್ತದೆ ಎಂದು ರಾಜಮೌಳಿ ಅವರು ಟ್ವೀಟ್ ಮಾಡಿದ್ದಾರೆ.

ಬಾಹುಬಲಿ ಸಿನಿಮಾ ಕೂಡ ಯಶಸ್ವಿಯಾಗಲು ತಂತ್ರಜ್ಞರು ಸಹ ಕಾರಣವಾಗಿದ್ದಾರು. ಪರದೆಯ ಮೇಲೆ ಬಿತ್ತರಗೊಳ್ಳುವ ದೃಶ್ಯಗಳು ನೋಡಗರನ್ನು ಸೆಳೆಯುವ ಹಾಗೆ ಮಾಡಲು ಕೇವಲ ತಂತ್ರಜ್ಞರಿಂದ ಮಾತ್ರ ಸಾಧ್ಯವಾಗುತ್ತದೆ. ಹೀಗಾಗಿಯೇ ಬಾಹುಬಲಿ ಸಿನಿಮಾದ ಪ್ರತಿಯೊಂದು ದೃಶ್ಯಗಳು ನೈಜತೆಯನ್ನು ತೋರಿಸಿದ್ದವು. ಹೀಗಾಗಿಯೇ ರಾಜಮೌಳಿ ಅವರು ತಂತ್ರಜ್ಞರ ಬಗ್ಗೆಯೇ ತಮ್ಮ ಮೆಚ್ಚುಗೆಯನ್ನು ಸೂಚಿಸಿದ್ದಾರೆ.

ಬಾಲಿವುಡ್ ಅನೇಕ ಸೆಲೆಬ್ರೆಟಿಗಳು ಪದ್ಮಾವತಿ ಟ್ರೇಲರ್ ನೋಡಿದ್ದು, ತಮ್ಮ ಮೆಚ್ಚುಗೆಯ ಮಾತುಗಳನ್ನು ಟ್ವಿಟರ್ ನಲ್ಲಿ ಬರೆದುಕೊಂಡಿದ್ದಾರೆ. ಸಿನಿಮಾದಲ್ಲಿ ಪದ್ಮಾವತಿಯಾಗಿ ದೀಪಿಕಾ ಪಡುಕೋಣೆ ಎಲ್ಲರನ್ನು ಸೆಳೆಯಲಿದ್ದಾರೆ. ಅಲ್ಲಾವುದ್ದೀನ್ ಖಿಲ್ಜಿ ಪಾತ್ರದಲ್ಲಿ ರಣ್‍ವೀರ್ ಸಿಂಗ್ ಮತ್ತು ರಾವಲ್ ರತನ್ ಸಿಂಗ್ ಪಾತ್ರದಲ್ಲಿ ಶಾಹಿದ್ ಕಪೂರ್ ನಟಿಸಿದ್ದಾರೆ. ಪದ್ಮಾವತಿ ಡಿಸೆಂಬರ್ 1ರಂದು ದೇಶಾದ್ಯಂತ ತೆರೆಕಾಣಲಿದೆ.

https://twitter.com/karanjohar/status/917294346940047360

img class=”alignnone size-full wp-image-175438″ src=”https://publictv.in/wp-content/uploads/2017/10/Padmavati-Trailer-32.png” alt=”” width=”1280″ height=”720″ />

 

 

Share This Article
Leave a Comment

Leave a Reply

Your email address will not be published. Required fields are marked *