ಪ್ರೇಮ ಲೋಕಕ್ಕೆ ವ್ಯಾಲೆಂಟೈನ್ಸ್ ಡೇ ಗಿಫ್ಟ್ ಕೊಟ್ಟ ಪಡ್ಡೆಹುಲಿ ಚಿತ್ರ ತಂಡ

Public TV
1 Min Read

ಬೆಂಗಳೂರು: ನಿರ್ಮಾಪಕ ಕೆ ಮಂಜು ಅವರ ಪುತ್ರ ಶ್ರೇಯಸ್ ಅಭಿನಯಿಸಿರುವ ಪಡ್ಡೆಹುಲಿ ಚಿತ್ರ ತಂಡ ಪ್ರೇಮ ಲೋಕಕ್ಕೆ ವ್ಯಾಲೆಂಟೆನ್ಸ್ ಡೇಗೆ ಹಾಡನ್ನು ಬಿಡುಗಡೆ ಮಾಡುವ ಮೂಲಕ ಭರ್ಜರಿ ಗಿಫ್ಟ್ ಕೊಟ್ಟಿದೆ.

‘ಒಂದು ಮಾತಲಿ ನೂರು ಹೇಳಲೇ’ ಎಂದಿರುವ ಶ್ರೇಯಸ್ ಹಾಗೂ ನಟಿ ನಿಶ್ವಿಕಾ ನಾಯ್ಡು ಜೋಡಿ ಮುದ್ದಾಗಿ ಹಾಡಿನಲ್ಲಿ ಕಾಣಿಸುತ್ತಿದ್ದು, ಪ್ರೇಮಿಗಳ ದಿನದ ಸಂಭ್ರಮಕ್ಕೆ ಯುವ ಜನತೆಗೆ ಅತ್ಯತ್ತಮ ಗಿಫ್ಟ್ ಎನ್ನಬಹುದು. ಕಾಲೇಜಿನಲ್ಲಿ ಹುಡುಗಿಯ ಹಿಂದೆ ಸುತ್ತುವ ಪ್ರೇಮಿಯ ದೃಶ್ಯಗಳಲ್ಲಿ ಶ್ರೇಯಸ್ ಇಷ್ಟವಾಗುತ್ತಾರೆ.

ಹಾಡಿಗೆ ನಾಗರ್ಜುನ ಶರ್ಮಾ ಅವರು ಸಾಹಿತ್ಯ ಬರೆದಿದ್ದು, ಸರಿಗಮಪ ಖ್ಯಾತಿಯ ಸಂಜೀತ್ ಹೆಗ್ಡೆ ಧ್ವನಿ ಕೇಳುಗರಿಗೆ ಇಷ್ಟವಾಗಿದ್ದು, ಮತ್ತೆ ಕೇಳಬೇಕೆನಿಸುತ್ತದೆ. ಹಾಡು ಪೂರ್ಣಗೊಂಡರು ಕೂಡ ಕೇಳುಗ ಅದೇ ಗುಂಗಿನಲ್ಲಿ ಇರುವಂತೆ ಮಾಡಲು ಸಂಜೀತ್ ಹೆಗ್ಡೆ ಯಶಸ್ವಿಯಾಗಿದ್ದಾರೆ. ಇನ್ನು ಹಾಡಿನ ಆರಂಭದಲ್ಲಿ ಸ್ಯಾಂಡಲ್‍ವುಡ್ ನ ಹಲವು ನಟಿಯರು ಚಿತ್ರಕ್ಕೆ ಶುಭಕೋರಿದ್ದು, ಹಾಡನ್ನು ಕೇಳಿ ಭರ್ಜರಿ ಯಶಸ್ಸು ಕಾಣುತ್ತದೇ ಎಂದಿದ್ದಾರೆ. ಈ ಮೊದಲು ಹೇಳಿದಂತೆ ಪ್ರೇಮ ಪರೀಕ್ಷೆಯನ್ನ ಯಶಸ್ವಿಯಾಗಿ ಬೇಕಾದ ಅಮೂಲ್ಯ ಟಿಪ್ಸ್ ಗಳನ್ನೂ ನಟಿಯರ ಮೂಲಕ ನೀಡಿದ್ದಾರೆ.

ತೇಜಸ್ವಿನಿ ಎಂಟರ್ ಪ್ರೈಸಸ್ ಬ್ಯಾನರಿನಡಿಯಲ್ಲಿ ಸಿನಿಮಾ ನಿರ್ಮಾಣವಾಗುತ್ತಿದ್ದು, ನಿರ್ಮಾಪಕ ಕೆ.ಮಂಜುರವರ ಪುತ್ರನನ್ನು ನಾಯಕ ನಟನಾಗಿ ಸ್ಯಾಂಡಲ್‍ವುಡ್ ಅಂಗಳಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಸಿನಿಮಾ ಸೆಟ್ಟೇರಿದಾಗಿನಿಂದಲೂ ತನ್ನದೇ ಆದ ವಿಭಿನ್ನ ಚಾಪನ್ನು ಸ್ಯಾಂಡಲ್‍ವುಡ್ ನಲ್ಲಿ ಮೂಡಿಸಿದು, ಈ ಹಿಂದೆ ಬಿಡುಗಡೆಯಾಗಿದ್ದ ಹುಲಿ ಹುಲಿ ಹಾಗೂ ಹಾಡು ಕೂಡ ಕೇಳುಗರ ಮನ ಗೆದ್ದಿತ್ತು.

ವಿಭಿನ್ನ ಲುಕ್, ಪೋಸ್ಟರ್, ಹಾಡುಗಳ ಮೂಲಕ ಸಿನಿ ಪ್ರೇಕ್ಷಕರಲ್ಲಿ ಭಾರೀ ಕುತೂಹಲ ಹುಟ್ಟು ಹಾಕಲು ಚಿತ್ರ ತಂಡ ಯಶಸ್ವಿಯಾಗಿದ್ದು, ನೋಡುವರು ಸಿನಿಮಾ ಡಿಫರೆಂಟ್ ಆಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಉಳಿದಂತೆ ಚಿತ್ರಕ್ಕೆ ಎಂ.ರಮೇಶ್ ರೆಡ್ಡಿ(ನಂಗ್ಲಿ) ಬಂಡವಾಳ ಹೂಡಿದ್ದು, ಗುರು ದೇಶಪಾಂಡೆ ಅವರದ್ದೇ ನಿರ್ದೇಶನವಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

Share This Article
Leave a Comment

Leave a Reply

Your email address will not be published. Required fields are marked *