BBK 11: ಕೈಹಿಡಿಯದ ಅದೃಷ್ಟ- ದೊಡ್ಮನೆಯಿಂದ ಮೋಕ್ಷಿತಾ ಔಟ್

Public TV
1 Min Read

ಕಿರುತೆರೆಯ ಅತೀ ದೊಡ್ಡ ರಿಯಾಲಿಟಿ ‘ಬಿಗ್ ಬಾಸ್’ (Bigg Boss Kannada 11) ವಿನ್ನರ್ ಯಾರು ಎಂದು ತಿಳಿಯಲು ಕೌಂಟ್‌ಡೌನ್ ಶುರುವಾಗಿದೆ. ಉಗ್ರಂ ಮಂಜು (Ugramm Manju) ಬಳಿಕ ಮೋಕ್ಷಿತಾ ಪೈ (Mokshitha Pai) ಮನೆಯಿಂದ ಹೊರನಡೆದಿದ್ದಾರೆ. ಬಿಗ್ ಬಾಸ್‌ನಿಂದ ಅವರು ಔಟ್ ಆಗಿದ್ದಾರೆ.

ಸೈಲೆಂಟ್ ಸಿಂಹಿಣಿ ಎಂದೇ ಫೇಮಸ್ ಆಗಿದ್ದ ಮೋಕ್ಷಿತಾ ಅವರು 7 ವಾರಕ್ಕೆ ಹೋಗುತ್ತಾರೆ ಎಂದು ಟೀಕೆಗೆ ಒಳಗಾಗಿದ್ದರು. ಆದರೆ 17 ವಾರಗಳು ಇತರೆ ಸ್ಪರ್ಧಿಗಳಿಗೆ ಸೆಡ್ಡು ಹೊಡೆದು ಫಿನಾಲೆಯಲ್ಲಿ ಫೈನಲಿಸ್ಟ್ ಆದರು. ಹನುಮಂತನ ಕೃಪೆಯಿಂದ ಮೋಕ್ಷಿತಾ ಫೈನಲಿಸ್ಟ್ ಆದರು. ಇದನ್ನೂ ಓದಿ:ನಟಿ ಶಶಿಕಲಾ ವಿರುದ್ಧ ಎಫ್‌ಐಆರ್ ದಾಖಲು

ಈಗ ಮೋಕ್ಷಿತಾ ಆಟಕ್ಕೆ ಬ್ರೇಕ್ ಬಿದ್ದಿದೆ. ಮೊದಮೊದಲು ಸೈಲೆಂಟ್ ಆಗಿದ್ದ ಸ್ಪರ್ಧಿ, ಫಿನಾಲೆ ಬರುತ್ತಿದ್ದಂತೆ ಟಫ್ ಕಾಂಪಿಟೇಟರ್ ಆದರು. ಹಾಡು, ಡ್ಯಾನ್ಸ್, ಟಾಸ್ಕ್‌ನಲ್ಲಿ ಸೈ ಎನಿಸಿಕೊಂಡಿದ್ದರು. ಇದೀಗ ಅವರ ಎಲಿಮಿನೇಷನ್ ಫ್ಯಾನ್ಸ್‌ಗೆ ಶಾಕ್ ಕೊಟ್ಟಿದೆ.

Share This Article