ಊಟಿಯಲ್ಲಿ ಮೋಕ್ಷಿತಾ ಪೈ- ಪ್ರಕೃತಿಯ ಮಡಿಲಲ್ಲಿ ‘ಪಾರು’

Public TV
1 Min Read

ಕಿರುತೆರೆಯ ಮುದ್ದು ಮೊಗದ ಚೆಲುವೆ ಮೋಕ್ಷಿತಾ ಪೈ (Mokshitha Pai) ಸದ್ಯ ರಿಲ್ಯಾಕ್ಸ್ ಮೂಡ್‌ಗೆ ಜಾರಿದ್ದಾರೆ. ಸ್ನೇಹಿತೆಯರ ಊಟಿಯಲ್ಲಿ ಮಸ್ತ್ ಆಗಿ ಸಮಯ ಕಳೆದಿದ್ದಾರೆ. ಪ್ರವಾಸದ ಸುಂದರ ಫೋಟೋಗಳನ್ನು ನಟಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:ಹಾರರ್ ಸಿನಿಮಾದಲ್ಲಿ ‘ಹಗ್ಗ’ ಹಿಡಿದು ಸೂಪರ್‌ ಹೀರೋ ಆದ ಅನು ಪ್ರಭಾಕರ್

ಕಳೆದ 5 ವರ್ಷಗಳಿಂದ ‘ಪಾರು’ (Paaru) ಸೀರಿಯಲ್ ಮೂಲಕ ರಂಜಿಸಿದ್ದ ಕುಡ್ಲದ ಬೆಡಗಿ ಮೋಕ್ಷಿತಾ ಪೈ ಸದಾ ಒಂದಲ್ಲಾ ಒಂದು ಹೊಸ ತಾಣಗಳಿಗೆ ಭೇಟಿ ಕೊಡುತ್ತಲೇ ಇರುತ್ತಾರೆ. ಇತ್ತೀಚೆಗೆ ದುಬೈ, ಮನಾಲಿಗೆ ಭೇಟಿ ನೀಡಿದ್ದರು. ಈಗ ಪ್ರಕೃತಿಯ ಮಡಲಲ್ಲಿ ನಟಿ ಸಮಯ ಕಳೆದಿದ್ದಾರೆ.

ಊಟಿ ಪ್ರವಾಸಿಗರು ನೋಡಲೇಬೇಕಾದ ಪ್ರವಾಸಿಗರ ಸ್ಥಳ. ತಮಿಳುನಾಡಿನ ನೀಲಗಿರಿ ಪರ್ವತದ ತಪ್ಪಲಿನಲ್ಲಿದೆ. ಈ ಮಳೆಗಾಲದ ಸಮಯದಲ್ಲಿ ಕೊರೆವ ಚಳಿಯಲ್ಲಿ ಪಾರು ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಕ್ಯೂಟ್ ಆಗಿ ಕ್ಯಾಮೆರಾಗೆ ಪೋಸ್ ನೀಡಿದ್ದಾರೆ.

ಅಂದಹಾಗೆ, ‘ಪಾರು’ ಸೀರಿಯಲ್ ಬಳಿಕ ಮೋಕ್ಷಿತಾ ಪೈ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟೀವ್ ಆಗಿದ್ದಾರೆ. ತಮ್ಮದೇ ಯೂಟ್ಯೂಬ್ ಚಾನೆಲ್ ಕೂಡ ಶುರು ಮಾಡುವ ಮೂಲಕ ಸದ್ದು ಮಾಡುತ್ತಿದ್ದಾರೆ. ಸದ್ಯ ಹೊಸ ಫೋಟೋಶೂಟ್‌ಗಳ ಮೂಲಕ ಪಡ್ಡೆಹುಡುಗರ ನಿದ್ದೆಕೆಡಿಸಿರುವ ಪಾರು, ಈ ಹೊಸ ಪಾತ್ರಗಳ ಹುಡುಕಾಟದಲ್ಲಿದ್ದಾರೆ. ಅವಕಾಶಗಳಿಗೆ ಕೊರತೆಯಿಲ್ಲ. ಆದರೆ ಚಾಲೆಂಜಿಂಗ್ ಎನಿಸುವಂತಹ ಕಥೆಯಲ್ಲಿ ಕಾಣಿಸಿಕೊಳ್ಳಲು ನಟಿ ಎದುರು ನೋಡ್ತಿದ್ದಾರೆ. ಅದು ಸೀರಿಯಲ್ ಅಥವಾ ಸಿನಿಮಾನಾ? ಎಂದು ಕಾದುನೋಡಬೇಕಿದೆ.

Share This Article