ಬಾಲಿ ಬ್ಯೂಟಿಗೆ ಬೆರಗಾದ ‘ಪಾರು’ ನಟಿ

Public TV
1 Min Read

ನ್ನಡ ಕಿರುತೆರೆ ಜನಪ್ರಿಯ ಸೀರಿಯಲ್ ‘ಪಾರು’ (Paaru) ನಟಿ ಮೋಕ್ಷಿತಾ ಪೈ (Mokshitha Pai) ಬಾಲಿಗೆ ಹಾರಿದ್ದಾರೆ. ಬಾಲಿ ಪ್ರಕೃತಿ ನೋಡಿ ಮೈಮರೆತಿದ್ದಾರೆ. ವೆಕೇಷನ್‌ನ ಸುಂದರ ಫೋಟೋಗಳನ್ನು ನಟಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:ದೆವ್ವದ ಪಾತ್ರ ಮಾಡಲು ಒಪ್ಪಿಕೊಂಡ್ರಾ ಪೂಜಾ ಹೆಗ್ಡೆ?

 

View this post on Instagram

 

A post shared by Mokshitha Pai (@mokshitha22)


ಮೋಕ್ಷಿತಾಗೆ ಟ್ರಾವೆಲಿಂಗ್ ಎಂದರೆ ತುಂಬಾ ಇಷ್ಟ. ಸದಾ ಹೊಸ ಜಾಗಗಳಿಗೆ ನಟಿ ಭೇಟಿ ಕೊಡುತ್ತಲೇ ಇರುತ್ತಾರೆ. ಇದೀಗ ಬಾಲಿ ಪ್ರಕೃತಿ ಸೌಂದರ್ಯಕ್ಕೆ ನಟಿ ಫಿದಾ ಆಗಿದ್ದಾರೆ. ಸಹೋದರಿ ಜೊತೆ ಇಂಡೋನೇಷ್ಯಾ ಬಾಲಿಗೆ (Bali) ನಟಿ ಭೇಟಿ ನೀಡಿದ್ದು, ವಿವಿಧ ಸ್ಥಳಕ್ಕೆ ತೆರಳಿ ಖುಷಿಪಟ್ಟಿದ್ದಾರೆ. ಫೋಟೋ ಕ್ಲಿಕ್ಕಿಸಿಕೊಂಡು ಸೋಶಿಯಲ್‌ ಮೀಡಿಯಾದಲ್ಲಿ ಶೇರ್‌ ಮಾಡಿ ಸಂಭ್ರಮಿಸಿದ್ದಾರೆ. ಇದನ್ನೂ ಓದಿ:ಫಸ್ಟ್ ನೈಟ್ CD ಕಳೆದುಕೊಂಡ ತೃಪ್ತಿ ದಿಮ್ರಿ- ಸಖತ್ ಆಗಿದೆ ಹೊಸ ಚಿತ್ರದ ಟ್ರೈಲರ್

ಅಂದಹಾಗೆ, ಇತ್ತೀಚೆಗೆ ದುಬೈ, ಮನಾಲಿ, ಊಟಿಗೂ ಭೇಟಿ ನೀಡಿದ್ದರು. ಊಟಿ ಪ್ರವಾಸಿಗರು ನೋಡಲೇಬೇಕಾದ ಪ್ರವಾಸಿಗರ ಸ್ಥಳ. ತಮಿಳುನಾಡಿನ ನೀಲಗಿರಿ ಪರ್ವತದ ತಪ್ಪಲಿನಲ್ಲಿದೆ. ಈ ಮಳೆಗಾಲದ ಸಮಯದಲ್ಲಿ ಕೊರೆವ ಚಳಿಯಲ್ಲಿ ಪಾರು ಫೋಟೋ ಕ್ಲಿಕ್ಕಿಸಿಕೊಂಡಿದ್ದರು. ಕ್ಯೂಟ್ ಆಗಿ ಕ್ಯಾಮೆರಾಗೆ ಪೋಸ್ ನೀಡಿದ್ದರು. ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡಿತ್ತು.

‘ಪಾರು’ ಸೀರಿಯಲ್ ಬಳಿಕ ಮೋಕ್ಷಿತಾ ಪೈ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟೀವ್ ಆಗಿದ್ದಾರೆ. ತಮ್ಮದೇ ಯೂಟ್ಯೂಬ್ ಚಾನೆಲ್ ಕೂಡ ಶುರು ಮಾಡುವ ಮೂಲಕ ಸದ್ದು ಮಾಡುತ್ತಿದ್ದಾರೆ. ಸದ್ಯ ಹೊಸ ಫೋಟೋಶೂಟ್‌ಗಳ ಮೂಲಕ ಪಡ್ಡೆಹುಡುಗರ ನಿದ್ದೆಕೆಡಿಸಿರುವ ಪಾರು, ಈ ಹೊಸ ಪಾತ್ರಗಳ ಹುಡುಕಾಟದಲ್ಲಿದ್ದಾರೆ. ಅವಕಾಶಗಳಿಗೆ ಕೊರತೆಯಿಲ್ಲ. ಆದರೆ ಚಾಲೆಂಜಿಂಗ್ ಎನಿಸುವಂತಹ ಕಥೆಯಲ್ಲಿ ಕಾಣಿಸಿಕೊಳ್ಳಲು ನಟಿ ಎದುರು ನೋಡ್ತಿದ್ದಾರೆ. ಅದು ಸೀರಿಯಲ್ ಅಥವಾ ಸಿನಿಮಾನಾ? ಎಂದು ಕಾದುನೋಡಬೇಕಿದೆ.

Share This Article