‘ಪಾರು’ ಖ್ಯಾತಿಯ ಮಾನ್ಸಿ ಜೋಶಿ ನಿಶ್ಚಿತಾರ್ಥ

Public TV
1 Min Read

ಕಿರುತೆರೆಯ ಜನಪ್ರಿಯ ‘ಪಾರು’ (Paaru) ಸೀರಿಯಲ್‌ನಲ್ಲಿ ಖಳನಾಯಕಿಯಾಗಿ ನಟಿಸಿದ್ದ ಮಾನ್ಸಿ ಜೋಶಿ (Mansi Joshi) ಫ್ಯಾನ್ಸ್‌ಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ರಾಘವ್ ಎಂಬುವವರ ಜೊತೆ ನಟಿ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದಾರೆ. ನಿಶ್ಚಿತಾರ್ಥ ಸುಂದರ ಫೋಟೋಗಳನ್ನು ನಟಿ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಇದನ್ನೂ ಓದಿ:ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟ ಹಿರಿಯ ನಟಿ ಶ್ರುತಿ ಕುಟುಂಬದ ಮನೆ ಮಗಳು

 

View this post on Instagram

 

A post shared by Mansi Joshi (@mansi._.joshi)


ಸದ್ಯ ತೆಲುಗು, ತಮಿಳು ಸೀರಿಯಲ್‌ಗಳಲ್ಲಿ ಬ್ಯುಸಿಯಿರುವ ನಟಿ ಮಾನ್ಸಿ (Mansi) ಅವರು ಸಾಫ್ಟ್‌ವೇರ್ ಇಂಜಿನಿಯರ್ ರಾಘವ್ ಜೊತೆ ಬೆಂಗಳೂರಿನ ಬನಶಂಕರಿಯಲ್ಲಿ ಅದ್ಧೂರಿಯಾಗಿ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದಾರೆ. ಕುಟುಂಬಸ್ಥರು, ಆಪ್ತರ ಸಮ್ಮುಖದಲ್ಲಿ ಈ ಸಮಾರಂಭ ಜರುಗಿದೆ.

ಇನ್ನೂ ಮುಂದಿನ ವರ್ಷ ಫೆಬ್ರವರಿಯಲ್ಲಿ ಮಾನ್ಸಿ ಮದುವೆ ನಡೆಯಲಿದೆ. ಅಂದಹಾಗೆ, ಇವರು ನಟಿ ಮೋಕ್ಷಿತಾ ಪೈ (Mokshitha Pai) ಅವರ ಆತ್ಮೀಯ ಗೆಳತಿ. ಮೋಕ್ಷಿತಾ ಬಿಗ್ ಬಾಸ್‌ಗೆ (Bigg Boss Kannada 11) ಹೋಗಿರೋದ್ರಿಂದ ಅವರನ್ನು ಮಿಸ್ ಮಾಡಿಕೊಂಡಿದ್ದಾರೆ. ಇನ್ನೂ ಈ ಹೊಸ ಜೋಡಿಗೆ ಅಭಿಮಾನಿಗಳು ಶುಭಹಾರೈಸಿದ್ದಾರೆ.

Share This Article