ಪ್ರಮುಖ ಸ್ಟಾರ್ಟ್ಅಪ್ ಕಂಪನಿಗಳಿಂದ 8 ಸಾವಿರ ಭಾರತೀಯ ಉದ್ಯೋಗಿಗಳು ವಜಾ

Public TV
1 Min Read

ನವದೆಹಲಿ: ಸ್ಟಾರ್ಟ್ಅಪ್ ಕಂಪನಿಗಳು ನೀಡುವ ಲಾಭದಾಯಕ ಕೊಡುಗೆಗಳಿಂದ ಹೆಚ್ಚಿನ ಉದ್ಯೋಗಾಕಾಂಕ್ಷಿಗಳು ಅದನ್ನು ಬೇಡ ಎನ್ನಲು ಸಾಧ್ಯವಿಲ್ಲ. ಆದರೆ ಇದೀಗ ಸ್ಟಾರ್ಟ್ಅಪ್‌ಗಳು ಭಾರತೀಯ ಉದ್ಯೋಗಿಗಳಿಗೆ 10 ಬಾರಿ ಯೋಚನೆ ಮಾಡಬೇಕಾದ ಜಾಗವಾಗಿದೆ.

ಭಾರತದ ಪ್ರಸಿದ್ಧ ಸ್ಟಾರ್ಟ್ಅಪ್‌ಗಳಾದ ಅನಕಾಡೆಮಿ, ಕಾರ್ಸ್ 24, ವೇದಾಂತು, ಮೀಶೋ, ಟ್ರೆಲ್, ಫೆರ್ಲೆಂಕೋ ಸೇರಿದಂತೆ ಹಲವು ಕಂಪನಿಗಳಿಂದ 5,000ಕ್ಕೂ ಹೆಚ್ಚು ಉದ್ಯೋಗಿಗಳು ಕೆಲಸವನ್ನು ತೊರೆದಿದ್ದಾರೆ. ಇಷ್ಟು ಮಾತ್ರವಲ್ಲದೇ ಕಂಪನಿಗಳೇ ಉದ್ಯೋಗಿಗಳನ್ನು ವಜಾಗೊಳಿಸುತ್ತಿರುವುದು ಆಘಾತಕಾರಿಯಾಗಿದೆ. ಇದನ್ನೂ ಓದಿ: ಇನ್ಫೋಸಿಸ್ ಸಿಇಒ ಸಂಬಳ ಭಾರೀ ಏರಿಕೆ – ಶೇ.88 ಹೆಚ್ಚಳ

ಸಾಮೂಹಿಕ ವಜಾಗಳ ಹಿಂದಿನ ಮುಖ್ಯ ಕಾರಣ ಏನು ಎಂಬುದನ್ನು ಕಂಪನಿಗಳು ಸ್ಪಷ್ಟಪಡಿಸಿಲ್ಲ. ಆದರೆ ಉದ್ಯೋಗಿಗಳನ್ನು ವಜಾಗೊಳಿಸುತ್ತಿರುವ ಎಲ್ಲಾ ಕಂಪನಿಗಳಲ್ಲಿ ಸಾಮಾನ್ಯವಾಗಿರುವ ಒಂದು ಕಾರಣವೆಂದರೆ, ಹೂಡಿಕೆಯ ಕೊರತೆ. ಇದರೊಂದಿಗೆ ಹೆಚ್ಚಿನ ಸ್ಟಾರ್ಟ್ಅಪ್ ಕಂಪನಿಗಳು ಶಿಕ್ಷಣಕ್ಕೆ ಸಂಬಂಧಪಟ್ಟವುಗಳಾಗಿದ್ದು, ಲಾಕ್‌ಡೌನ್ ಮುಗಿದು ಶಾಲೆಗಳು ತೆರೆಯುತ್ತಿರುವುದರಿಂದ ವಿದ್ಯಾರ್ಥಿಗಳು ಇವುಗಳಿಂದ ದೂರ ಉಳಿಯಲಾರಂಭಿಸಿದ್ದಾರೆ. ಇದನ್ನೂ ಓದಿ: ಕೊಹ್ಲಿ ಬ್ಯಾಟ್‍ನಿಂದ ಶತಕ ನಿರೀಕ್ಷೆ – ಅಭಿಮಾನಿಗಳ ಎದೆಬಡಿತ ಹೆಚ್ಚಿಸಿದ RR Vs RCB Qualifier 2

ನಿಖರವಾದ ಅಂಕಿ ಅಂಶಗಳ ಬಗ್ಗೆ ಮಾತನಾಡುವುದಾದರೆ ಓಲಾ 2022ರ ಮೊದಲ ತ್ರೈಮಾಸಿಕದಲ್ಲಿ ಸುಮಾರು 2,100 ಉದ್ಯೋಗಿಗಳನ್ನು ವಜಾಗೊಳಿಸಿದೆ. ಅನಕಾಡೆಮಿ 926, ವೇದಾಂತು 600, ಕಾರ್ಸ್ 24 600 ಕ್ಕೂ ಹೆಚ್ಚು ಉದ್ಯೋಗಿಗಳನ್ನು ವಜಾಗೊಳಿಸಿದೆ. ಹೊಸದಾಗಿ ಸ್ಥಾಪಿಸಲಾದ ಮೀಶೋ ತನ್ನ ಆದಾಯದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಇದು ಪ್ರಾರಂಭವಾದ ಕೆಲವು ವರ್ಷಗಳಲ್ಲಿ ಕೇವಲ 150 ಉದ್ಯೋಗಿಗಳನ್ನು ಮಾತ್ರ ಕೈಬಿಟ್ಟಿದೆ.

Share This Article
Leave a Comment

Leave a Reply

Your email address will not be published. Required fields are marked *