ಮೋದಿ ಸರ್ಕಾರಕ್ಕೆ ವಿಶ್ವದಲ್ಲೇ ಅತಿ ಹೆಚ್ಚು ವಿಶ್ವಾಸರ್ಹತೆ

Public TV
1 Min Read

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರ ವಿಶ್ವದಲ್ಲಿ ಅತಿ ಹೆಚ್ಚು ವಿಶ್ವಾಸರ್ಹತೆ ಹೊಂದಿದೆ ಎಂದು ಅಂತರಾಷ್ಟ್ರೀಯ ಆರ್ಥಿಕ ಸಹಕಾರ ಮತ್ತು ಅಭಿವೃದ್ಧಿ ಸಂಸ್ಥೆ(ಒಇಸಿಡಿ) ಹೇಳಿದೆ.

ವಿವಿಧ ರಾಷ್ಟ್ರಗಳ ಸರ್ಕಾರಗಳ ಮೇಲೆ ಜನರು ಹೊಂದಿರುವ ವಿಶ್ವಾಸಾರ್ಹತೆ ಸಂಬಂಧಿಸಿದಂತೆ ಪಟ್ಟಿ ಬಿಡುಗಡೆ ಮಾಡಿದ್ದು, ಭಾರತದಲ್ಲಿ ಶೇ.73ರಷ್ಟು ಜನರು ಪ್ರಧಾನಿ ಮೋದಿ ಅವರಿಗೆ ಬೆಂಬಲ ನೀಡಿದ್ದಾರೆ ಎಂದು ಒಇಸಿಡಿ ತನ್ನ ವರದಿಯಲ್ಲಿ ಉಲ್ಲೇಖಿಸಿದೆ.

ನರೇಂದ್ರ ಮೋದಿ ನೇತೃತ್ವ ಬಿಜೆಪಿ ಸರ್ಕಾರ 2014ರಲ್ಲಿ ಭರ್ಜರಿ ಬಹುಮತದೊಂದಿಗೆ ಅಧಿಕಾರವನ್ನು ಏರಿತ್ತು. ಆಡಳಿತದಲ್ಲಿ ಸರ್ಕಾರ ಘೋಷಿಸಿದ ಕೆಲವು ಆರ್ಥಿಕ ಹಾಗೂ ಸಾಮಾಜಿಕ ಯೋಜನೆಗಳನ್ನು ಜಾರಿಗೆ ತಂದ ಕಾರಣ ಭಾರತ ಸರ್ಕಾರಕ್ಕೆ ಈ ಸ್ಥಾನ ಸಿಕ್ಕಿದೆ ಎಂದು ಹೇಳಿದೆ.

ಭಾರತದ ನಂತರ ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡಿಯು ಅವರ ನೇತೃತ್ವದ ಸರ್ಕಾರ ಶೇ.62 ಎಷ್ಟು ಬೆಂಬಲ ಸಿಕ್ಕಿದ್ದರೆ, ಟರ್ಕಿ ಸರ್ಕಾರಕ್ಕೆ ಶೇ.58 ರಷ್ಟು ಬೆಂಬಲ ಸಿಕ್ಕಿದೆ. ಬ್ರಿಟನ್ ಪ್ರಧಾನಿ ತೆರೆಸಾ ಮೇ ನೇತೃತ್ವದ ಸರ್ಕಾರ ಒಇಸಿಡಿ ಬಿಡುಗಡೆ ಮಾಡಿದ ಪಟ್ಟಿಯಲ್ಲಿ 5ನೇ ಸ್ಥಾನವನ್ನು ಪಡೆದಿದೆ. ನಂತರದ ಸ್ಥಾನವನ್ನು ಜಪಾನ್ ಹಾಗೂ ಅಮೆರಿಕ ಪಡೆದುಕೊಂಡಿದೆ.

ಆರ್ಥಿಕ, ಸಾಮಾಜಿಕ ಮತ್ತು ಪರಿಸರದ ಬದಲಾವಣೆಯ ಅಂಶಗಳನ್ನು ಪರಿಗಣಿಸಿ ಅಧ್ಯಯನ ನಡೆಸಿ ಸರ್ಕಾರಗಳಿಗೆ ಒಇಸಿಡಿ ಶ್ರೇಯಾಂಕ ನೀಡಿದೆ.

 

Share This Article
Leave a Comment

Leave a Reply

Your email address will not be published. Required fields are marked *