ಲಿಬಿಯಾದಲ್ಲಿ ಭೀಕರ ಪ್ರವಾಹ – 5,300 ಜನರ ದುರ್ಮರಣ

Public TV
1 Min Read

ಟ್ರಿಪೋಲಿ: ಲಿಬಿಯಾದಲ್ಲಿ ಉಂಟಾಗಿರುವ ಭೀಕರ ಮಳೆಯಿಂದ (Rain) ಉಂಟಾದ ಪ್ರವಾಹದಿಂದ (Flood) 2 ಅಣೆಕಟ್ಟೆಗಳು ಒಡೆದು 5,300 ಜನ ಸಾವನ್ನಪ್ಪಿದ್ದಾರೆ. 10 ಸಾವಿರಕ್ಕೂ ಹೆಚ್ಚು ಜನ ನಾಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದರಿಂದ ಕರಾವಳಿಯ ನಗರವಾದ ಪೆರ್ನಾ ಅತ್ಯಂತ ಹೆಚ್ಚು ಹಾನಿಗೊಳಾಗಿದೆ. ಇಡೀ ನಗರವನ್ನು ವಿಪತ್ತು ಪ್ರದೇಶ ಎಂದು ಘೋಷಿಸಲಾಗಿದೆ. ಅವಶೇಷಗಳಿಂದ ಸುಮಾರು 1,000 ಕ್ಕೂ ಹೆಚ್ಚು ಶವಗಳನ್ನು ಹೊರತೆಗೆಯಲಾಗಿದೆ. ಮುಂದಿನ ದಿನಗಳಲ್ಲಿ ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ಜನರನ್ನು ರಕ್ಷಿಸುವ ಕಾರ್ಯದಲ್ಲಿ ತೊಡಗಿರುವ ಹಲವಾರು ರಕ್ಷಣಾ ಕಾರ್ಯಕರ್ತರು ಸಾವಿಗೀಡಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಲಿಬಿಯಾದಲ್ಲಿ ಭೀಕರ ಪ್ರವಾಹಕ್ಕೆ 2,000ಕ್ಕೂ ಹೆಚ್ಚು ಮಂದಿ ಬಲಿ – 5 ಸಾವಿರಕ್ಕೂ ಹೆಚ್ಚು ಜನ ನಾಪತ್ತೆ

ಪ್ರವಾಹದಿಂದ ಹಲವಾರು ಕಟ್ಟಡಗಳು ಹಾಗೂ ವಾಹನಗಳು ಹಾನಿಗೊಳಗಾಗಿವೆ. ಮೃತದೇಹಗಳು ಎಲ್ಲೆಂದರಲ್ಲಿ ಬಿದ್ದಿವೆ. ಅನೇಕರು ಮೃತಪಟ್ಟ ಕುಟುಂಬಸ್ಥರ ಶವಗಳ ಹುಡುಕಾಟದಲ್ಲಿ ತೊಡಗಿರುವುದು ಕಂಡು ಬಂದಿದೆ.

ಸಹಾಯಕ್ಕಾಗಿ ವಿಶ್ವಸಂಸ್ಥೆಯ ತುರ್ತು ಸೇವೆಯ ತಂಡಗಳನ್ನು ಸಜ್ಜುಗೊಳಿಸಲಾಗಿದೆ. ಅಲ್ಲದೇ ಬೇರೆ ಬೇರೆ ದೇಶಗಳಿಂದ ಅಗತ್ಯ ನೆರವುಗಳನ್ನು ನೀಡಲಾಗುತ್ತಿದೆ. ಇದನ್ನೂ ಓದಿ: ಕೇರಳದಲ್ಲಿ ನಿಫಾ ವೈರಸ್ – ಎಚ್ಚರಿಕೆ ಕ್ರಮಗಳನ್ನು ಅನುಸರಿಸುವಂತೆ ಅಧಿಕಾರಿಗಳಿಗೆ ಗುಂಡೂರಾವ್ ಸೂಚನೆ

Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್