ದೆಹಲಿಯಲ್ಲಿ ಅಗ್ನಿ ಅವಘಡ | 345 ವಾಹನಗಳು ಭಸ್ಮ – ಬೆಂಕಿ ನಂದಿಸಲು 2ಗಂಟೆ ಕಾಲ ಹರಸಾಹಸ ಪಟ್ಟ ಅಧಿಕಾರಿಗಳು

Public TV
1 Min Read

ನವದೆಹಲಿ: ಈಶಾನ್ಯ ದೆಹಲಿಯ (Delhi) ವಜೀರಾಬಾದ್ ಪ್ರದೇಶದ ಪೊಲೀಸ್ ಸಂಗ್ರಹಣಾ ಪ್ರದೇಶದಲ್ಲಿ ಅಗ್ನಿ ಅವಘಡ (Fire Accident) ಸಂಭವಿಸಿ 345 ವಾಹನಗಳು ಹಾನಿಗೊಳಗಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಭಾನುವಾರ (ಏ.6) ಬೆಳಿಗ್ಗೆ 4:30ರ ಸುಮಾರಿಗೆ ಅಗ್ನಿ ಅವಘಡ ಸಂಭವಿಸಿದೆ. ಕೂಡಲೇ ಅಗ್ನಿಶಾಮಕ ಠಾಣೆಗೆ ಮಾಹಿತಿ ನೀಡಲಾಗಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ತಕ್ಷಣ ಸ್ಥಳಕ್ಕೆ ಆಗಮಿಸಿ ಬೆಂಕಿಯನ್ನು ನಂದಿಸಿದ್ದಾರೆ. ಬೆಳಿಗ್ಗೆ 6:20 ರ ಹೊತ್ತಿಗೆ ಅಗ್ನಿಶಾಮಕ ದಳದ ಸಿಬ್ಬಂದಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ ಎಂದು ವರದಿಯಾಗಿದೆ.

ಸುಟ್ಟುಹೋದ 345 ವಾಹನಗಳಲ್ಲಿ 260 ದ್ವಿಚಕ್ರ ವಾಹನಗಳು ಮತ್ತು 85 ಕಾರುಗಳು ಸೇರಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಗ್ನಿ ಅವಘಡಕ್ಕೆ ಕಾರಣ ತಿಳಿದು ಬಂದಿಲ್ಲ. ಅವಘಡಕ್ಕೆ ಕಾರಣ ತಿಳಿಯಲು ಪೊಲೀಸರು ತನಿಖೆ ಆರಂಭಿಸಿದ್ದಾರೆ. ಅಲ್ಲದೇ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದೆ ಎಂದು ಮೂಲಗಳು ತಿಳಿಸಿವೆ.

Share This Article