ಲೈವ್ ವೇಳೆ ವರದಿಗಾರ್ತಿಗೆ ಕಿರುಕುಳ, ಕಪಾಳಮೋಕ್ಷ

Public TV
1 Min Read

ರೋಮ್: ಟಿವಿ ವರದಿಗಾರ್ತಿಯೊಬ್ಬರಿಗೆ ಲೈವ್ ವರದಿಯನ್ನು ನೀಡುವ ಸಂದರ್ಭದಲ್ಲಿ ವ್ಯಕ್ತಿಯೊಬ್ಬ ಆಕೆಯ ಮೇಲೆ ಹಲ್ಲೆ ನಡೆಸಿ ಕಿರುಕುಳ ಘಟನೆ ಇಟಲಿಯಲ್ಲಿ ನಡೆದಿದೆ.

ಎಂಪೋಲಿಯಾದ ಕಾರ್ಲೋ ಕ್ಯಾಸ್ಟೆಲ್ಲಾನಿ ಕ್ರೀಡಾಂಗಣದ ಹೊರಗಿನಿಂದ ಟೋಸ್ಕಾನಾ ಟಿವಿಯ ಪತ್ರಕರ್ತೆ ಬೆಕಾಗ್ಲಿಯಾ ನೇರ ವರದಿ ಮಾಡುತ್ತಿದ್ದ ಸಂದರ್ಭದಲ್ಲಿ ಹಲ್ಲೆಗೆ ಒಳಗಾಗಿದ್ದಾರೆ.

ಬೆಕಾಗ್ಲಿಯಾ ಫುಟ್‍ಬಾಲ್ ಆಟ ಮುಗಿದ ಬಳಿಕ ಕ್ರೀಡಾಂಗಣದ ಹೊರಭಾಗದಲ್ಲಿ ಅಭಿಮಾನಿಗಳೊಂದಿಗೆ ಮಾತನಾಡುತ್ತಿದ್ದ ಸಂದರ್ಭದಲ್ಲಿ ಹಿಂದುಗಡೆಯಿಂದ ಬಂದ ವ್ಯಕ್ತಿ ಕೈಗೆ ಉಗುಳಿ, ನೇರ ಪ್ರಸಾರದಲ್ಲೇ ಬೆಕಾಗ್ಲಿಯಾಳ ಕಪಾಳಕ್ಕೆ ಹೊಡೆದಿದ್ದಾನೆ. ಇದನ್ನೂ ಓದಿ: ಇನ್ನೂ ಕಾಯಲು ಸಿದ್ಧವಿಲ್ಲ: ಮಲ್ಯಗೆ ಶಿಕ್ಷೆ ವಿಧಿಸಲು ಸಿದ್ಧ ಎಂದು ಸುಪ್ರೀಂ

ಈ ಘಟನೆ ವರದಿಗಾರ್ತಿಗೆ ಅಸಹ್ಯವನ್ನು ಉಂಟುಮಾಡಿದ್ದು, ಕೋಪಗೊಂಡು ಹಲ್ಲೆ ಮಾಡಿದಾತನಿಗೆ ಬೈದಿದ್ದಾಳೆ. ಲೈವ್‍ನಲ್ಲಿದ್ದ ಟಿವಿ ನಿರೂಪಕರು ಆಕೆಯನ್ನು ಸಮಾಧಾನಪಡಿಸುವ ಪ್ರಯತ್ನ ಮಾಡಿದ್ದಾರೆ.

ಬೆಕಾಗ್ಲಿಯಾ ತನಗೆ ಕಪಾಳಮೋಕ್ಷ ಮಾಡಿದ ವ್ಯಕ್ತಿಯ ವಿರುದ್ಧ ಕೇಸ್ ದಾಖಲಿಸಿದ್ದು, ಆ ವ್ಯಕ್ತಿಯನ್ನು ಗುರುತಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ವರದಿಗಾರ್ತಿಯಾಗಿ ಕೆಲಸ ಮಾಡುತ್ತಿದ್ದ ಟೋಸ್ಕಾನಾ ಟೀವಿ ಇದಕ್ಕೆ ಸಂಬಂಧಿಸಿದ ಎಲ್ಲಾ ಕಾನೂನು ವೆಚ್ಚಗಳನ್ನು ಭರಿಸುವುದಾಗಿ ಒಪ್ಪಿಕೊಂಡಿದೆ.

ನನಗೆ ಏನಾಯಿತು ಎಂಬುವುದು ಮುಖ್ಯವಲ್ಲ. ನಾನು ನನ್ನ ಕೆಲಸದಲ್ಲಿದ್ದ ಕಾರಣ ಕ್ಯಾಮೆರಾ ಅದನ್ನು ಚಿತ್ರೀಕರಿಸಿದೆ. ಹೀಗಾಗಿ ಘಟನೆ ಬೆಳಕಿಗೆ ಬಂದಿದೆ. ಆದರೆ ಇತರ ಮಹಿಳೆಯರ ವಿಚಾರಕ್ಕೆ ಬಂದಾಗ ಅದನ್ನು ಚಿತ್ರೀಕರಿಸಲು ಯಾವುದೇ ಕ್ಯಾಮೆರಾಗಳು ಇರುವುದಿಲ್ಲ. ಇದರಿಂದ ನಡೆದ ಅನ್ಯಾಯ ಗೋಚರಿಸದೇ ಹೋಗುವ ಸಾಧ್ಯತೆ ಇರುತ್ತದೆ. ಈ ರೀತಿಯಾಗಿ ಯಾವ ಮಹಿಳೆಯರಿಗೂ ಆಗಬಾರದು ಎಂದು ಘಟನೆಯ ಕುರಿತು ಬೆಕಾಗ್ಲಿಯಾ ಹೇಳಿದ್ದಾಳೆ. ಇದನ್ನೂ ಓದಿ: ತೋಡಿನಲ್ಲಿ ಮರಿಗೆ ಜನ್ಮವಿತ್ತ ಕಾಡಾನೆ

Share This Article
Leave a Comment

Leave a Reply

Your email address will not be published. Required fields are marked *