ಕರ್ನಾಟಕದಲ್ಲಿರುವ 6,291 ಪ್ರಾಥಮಿಕ ಕೃಷಿ ಸಾಲ ಸಂಘಗಳಲ್ಲಿ 125 ಸಂಘಗಳು ದಿವಾಳಿ ಅಂಚಿನಲ್ಲಿವೆ: ಅಮಿತ್ ಶಾ

Public TV
1 Min Read

ನವದೆಹಲಿ: ಕರ್ನಾಟಕದಲ್ಲಿರುವ ಒಟ್ಟು 6,291 ಪ್ರಾಥಮಿಕ ಕೃಷಿ ಸಾಲ ಸಂಘಗಳಲ್ಲಿ (Agricultural Credit Association) 125 ಸಂಘಗಳು ದಿವಾಳಿ ಅಂಚಿನಲ್ಲಿವೆ ಎಂದು ಸಹಕಾರ ಸಚಿವ ಅಮಿತ್ ಶಾ (Amit Shah) ಮಂಗಳವಾರ ಲೋಕಸಭೆಗೆ (Lok Sabha) ತಿಳಿಸಿದರು.

ರಾಯಚೂರು ಸಂಸದ ಜಿ.ಕುಮಾರ ನಾಯಕ ಪ್ರಶ್ನೆಗೆ ಉತ್ತರಿಸಿದ ಅವರು, ಇದರಲ್ಲಿ ಚಿಕ್ಕಬಳ್ಳಾಪುರದ 28 ಸಹಕಾರ ಸಂಘಗಳು, ಹಾಸನದ 13 ಮತ್ತು ಬೆಳಗಾವಿಯ 12 ಸಂಘಗಳು ಸೇರಿವೆ ಎಂದರು. 64 ಸಂಘಗಳು ಪ್ರಸ್ತುತ ಕಾರ್ಯನಿರ್ವಹಿಸುತ್ತಿಲ್ಲ/ನಿಷ್ಕ್ರಿಯವಾಗಿವೆ ಎಂದರು. ಇದನ್ನೂ ಓದಿ: ಆಪರೇಷನ್‌ ಸಿಂಧೂರ ಬಳಿಕ ಮೊದಲ ಬಾರಿಗೆ ಪಾಕ್‌ನಿಂದ ಕದನ ವಿರಾಮ ಉಲ್ಲಂಘನೆ

ಕಳೆದ ಐದು ವರ್ಷಗಳಲ್ಲಿ ರಾಜ್ಯದಲ್ಲಿ 428 ಸಂಘಗಳು ನೋಂದಣಿಯಾಗಿವೆ. ಬೆಳಗಾವಿಯಲ್ಲಿ (187) ಅತಿ ಹೆಚ್ಚು ಸಂಘಗಳು ನೋಂದಣಿ ಆಗಿದೆ. ಕಳೆದ ಐದು ವರ್ಷಗಳಲ್ಲಿ ರಾಷ್ಟ್ರೀಯ ಸಹಕಾರಿ ಅಭಿವೃದ್ಧಿ ನಿಗಮವು ಕರ್ನಾಟಕದ ಸಂಘಗಳಿಗೆ 25.56 ಕೋಟಿ ರೂ. ವಿತರಿಸಿದೆ ಎಂದು ಹೇಳಿದರು. ಇದನ್ನೂ ಓದಿ: CRPF ಅಧಿಕಾರಿ ಮನೆಯಲ್ಲಿ ಚಿನ್ನಾಭರಣ ಕಳ್ಳತನ – ದೂರು ಕೊಟ್ರೂ ಕ್ರಮವಿಲ್ಲ ಅಂತ ಕಣ್ಣೀರು

Share This Article