ನಮ್ಮ ರಾಜ್ಯದ ಸಂಸ್ಕೃತಿ ನಮ್ಮ ಹೆಮ್ಮೆ- ಸುನೀಲ್ ಶೆಟ್ಟಿ

Public TV
2 Min Read

ಬೆಳಗಾವಿ: ತುಳುನಾಡು ಹಾಗೂ ಕರ್ನಾಟಕ ಜನತೆಗೆ ಪ್ರೀತಿ ಇರಲಿ. ನಮ್ಮ ರಾಜ್ಯದ ಸಂಸ್ಕೃತಿ ನಮ್ಮ ಹೆಮ್ಮೆ. ನಾನು ಹೆಮ್ಮೆಯ ಕನ್ನಡಿಗ ಎಂದು ಬಾಲಿವುಡ್ ನಟ, ಆ್ಯಕ್ಷನ್ ಹೀರೋ ಸುನೀಲ್ ಶೆಟ್ಟಿ ಹೇಳಿದ್ದಾರೆ.

ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಬೆಳಗಾವಿಗೆ ಬಂದಾಗ ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಅವರು, ನಾನು 25 ವರ್ಷದಿಂದ ಬಾಲಿವುಡ್‍ನಲ್ಲಿದ್ದೇನೆ. ಇಂದು ನನಗೆ ತುಂಬಾ ಖುಷಿಯಾಗುತ್ತಿದೆ. ಏಕೆಂದರೆ ನಾನು ಚಿಕ್ಕ ವಯಸ್ಸಿನಲ್ಲಿದ್ದಾಗ ಮಂಗಳೂರಿಗೆ ಬಂದಾಗ ನಾನು ಬೆಳಗಾವಿಗೆ ಹೋಗುತ್ತಿದ್ದೆ. ಇಲ್ಲಿ ನನ್ನ ಬಾಲ್ಯದ ನೆನಪು ಸಾಕಷ್ಟಿದೆ. ನಾನು ಸಂಜೆ ಹೊತ್ತು ಬೆಳಗಾವಿಗೆ ಬರುತ್ತಿದ್ದೆ. ಬೆಳಗಾವಿ ಏರ್ ಕಂಡಿಶನ್ ಸಿಟಿ ಎಂದು ಕರೆಯುತ್ತಿದ್ದೇವು. ರಾಮ್‍ದೇವ್ ಹೋಟೆಲ್‍ನಲ್ಲಿ ಯಾವಾಗಲೂ ವಾಸಿಸುತ್ತಿದ್ದೇವು. ಇಲ್ಲಿ ನನ್ನ ಬಾಲ್ಯದ ನೆನಪು ಸಾಕಷ್ಟಿದೆ ಎಂದರು.

‘ಬಲವಾನ್’ ಸಿನಿಮಾದಿಂದ ‘ಪೈಲ್ವಾನ್’ ಸಿನಿಮಾವರೆಗಿನ ನನ್ನ ಪಯಾಣ ಚೆನ್ನಾಗಿದೆ. 26-27 ವರ್ಷದಿಂದ ಜನರು ನನಗೆ ಸಾಕಷ್ಟು ಗೌರವ ಹಾಗೂ ಪ್ರೀತಿ ನೀಡಿದ್ದಾರೆ. ಜನರ ಈ ಪ್ರೀತಿ ಹಾಗೂ ಗೌರವ ಪಡೆಯುತ್ತಿರುವುದ್ದಕ್ಕೆ ನನ್ನನ್ನು ನಾನು ಅದೃಷ್ಟವಂತ ಎಂದು ಭಾವಿಸುತ್ತೇನೆ. ಪೈಲ್ವಾನ್ ಚಿತ್ರ ಬಗ್ಗೆ ಈಗ ಮಾತನಾಡುವುದು ಬೇಡ. ಪೈಲ್ವಾನ್ ಚಿತ್ರ ಬಿಡುಗಡೆಯಾದಾಗ ಮಾತನಾಡಿದ್ದರೆ ಚೆನ್ನಾಗಿರುತ್ತದೆ. ಕೃಷ್ಣ ಹಾಗೂ ಸುದೀಪ್ ಶೂಟಿಂಗ್‍ನಲ್ಲಿದ್ದಾರೆ. ಶೂಟಿಂಗ್ ಮುಗಿದ್ದಾಗ ಈ ಚಿತ್ರದ ಬಗ್ಗೆ ಮಾತನಾಡೋಣ ಎಂದು ತಿಳಿಸಿದರು.

ಸೆಲೆಬ್ರಿಟಿ ಕ್ರಿಕೆಟ್ ಲೀಗ್ ನಾವು ಕ್ರಿಕೆಟ್‍ಗಾಗಿ ಆಡುವುದಿಲ್ಲ. ನಾವು ಒಂದು ಒಳ್ಳೆಯ ಉದ್ದೇಶಕ್ಕಾಗಿ ಆಡುತ್ತೇವೆ. 100 ಮಕ್ಕಳಿಗೆ 100 ಸರ್ಜರಿಗಾಗಿ ಯಂಗ್ ಹಾರ್ಟ್‍ಗಾಗಿ ನಾವು ಕ್ರಿಕೆಟ್ ಆಡುತ್ತೇವೆ. ಚಾರಿಟಿಗಾಗಿ ಹಾಗೂ ಸ್ನೇಹವನ್ನು ಬೆಳೆಸಲು ನಾವು ಕ್ರಿಕೆಟ್ ಆಡುತ್ತೇವೆ. 8 ರಾಜ್ಯದ ಕಲಾವಿದರು ಒಟ್ಟಿಗೆ ಬಂದು ಒಂದು ಒಳ್ಳೆಯ ಉದ್ದೇಶಕ್ಕಾಗಿ ಕ್ರಿಕೆಟ್ ಆಡುತ್ತಾರೆ ಎಂದು ಹೇಳಿದರು.

ನಾನು ಒಬ್ಬ ಸ್ಪೋಟ್ಸ್ ಪರ್ಸನ್ ಆಗಿದ್ದು, ನಾನು ನನ್ನ ಆರೋಗ್ಯದ ಬಗ್ಗೆ ಹೆಚ್ಚು ಗಮನ ಕೊಡುತ್ತೇನೆ. ನನ್ನ ಆರೋಗ್ಯ, ಫಿಸಿಕ್ ನನಗೆ ಆ್ಯಕ್ಷನ್ ಹೀರೋ ಎಂಬ ಪಟ್ಟ ನೀಡಿದೆ. ಸಿಎಸ್‍ಆರ್ ನನ್ನ ಜೀವನದ ಒಂದು ಭಾಗ. ನಾವು ಜೀವನದಲ್ಲಿ ಏನಾದರೂ ಸಾಧಿಸಿದ್ದಾಗ ನಾವು ಅದನ್ನು ವಾಪಸ್ ನೀಡುವುದು ತುಂಬಾನೇ ಮುಖ್ಯ. ನಮ್ಮ ಮುಖ್ಯ ಗುರಿ ಮಕ್ಕಳಿಗೆ ಶಿಕ್ಷಣ ನೀಡುವುದು. ಈ ಗುರಿ ಎಂದಿಗೂ ಬದಲಾಗುವುದಿಲ್ಲ. ಹಾಗಾಗಿ ನಾನು ಒಂದೇ ಗುರಿಯಲ್ಲಿ ನಡೆಯುತ್ತೇನೆ. 10 ಜನ ಅದು ಮಾಡು ಇದು ಮಾಡು ಎಂದು ಹೇಳುತ್ತಾರೆ. ಆದರೆ ಎಲ್ಲಿ ಉತ್ತಮ ಫಲಿತಾಂಶ ಸಿಗುತ್ತೋ ಅಲ್ಲಿ ನಾನು ಗಮನ ನೀಡುತ್ತೇನೆ ಎಂದರು.

ನನಗೆ ಕನ್ನಡ ಸ್ವಲ್ಪ ಸ್ವಲ್ಪ ಬರುತ್ತೆ. ನಾನು ಹೆಚ್ಚು ತುಳು ಮಾತನಾಡುವುದು. ಹಾಗಾಗಿ ತುಳುನಾಡು ಹಾಗೂ ಕರ್ನಾಟಕ ಜನತೆಗೆ ಪ್ರೀತಿ ಇರಲಿ. ನಮ್ಮ ರಾಜ್ಯದ ಸಂಸ್ಕೃತಿ ನಮ್ಮ ಹೆಮ್ಮೆ. ನಾನು ಹೆಮ್ಮೆಯ ಕನ್ನಡಿಗ. ಈ ರಾಜ್ಯದಲ್ಲಿ ಮಹಿಳೆಯರಿಗೆ ಹೆಚ್ಚು ಗೌರವ ನೀಡುತ್ತಾರೆ. ಶಿಕ್ಷಣಕ್ಕೆ ಹೆಚ್ಚು ಆದ್ಯತೆ ನೀಡುತ್ತಾರೆ. ಹಾಗಾಗಿ ನನಗೆ ಈ ರಾಜ್ಯ ಇಷ್ಟವಾಗುತ್ತದೆ. ಬೆಳಗಾವಿಗೆ ಬರಲು ನನಗೆ ಇಷ್ಟವಾಗುತ್ತದೆ. ಬೆಳಗಾವಿ ಹೆಚ್ಚು ಅಭಿವೃದ್ಧಿ ಹೊಂದಿದೆ. ಕಳೆದ ವರ್ಷ ಕರ್ನಾಟಕ ಪ್ರೀಮಿಯರ್ ಲೀಗ್‍ಗೆ ಬಂದಿದ್ದೆ. ಬೆಳಗಾವಿಯಿಂದ ಹುಬ್ಬಳ್ಳಿಗೆ ಹೋಗಿದ್ದೆ ಎಂದು ಸುನೀಲ್ ಶೆಟ್ಟಿ ನೆನಪನ್ನು ಹಂಚಿಕೊಂಡರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *