ಜಗತ್ತಿನ ಅತೀ ಮೂಕ ಕಾನೂನು ನಮ್ಮದು: ಡೊನಾಲ್ಡ್ ಟ್ರಂಪ್

Public TV
1 Min Read

ವಾಷಿಂಗ್ಟನ್: ದೇಶದ ವಲಸೆ ನೀತಿ ವಿರುದ್ಧದ ಪ್ರತಿಭಟನೆಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬೇರೆ ಜಗತ್ತಿಗಿಂತ ನಮ್ಮ ಕಾನೂನು ಮೂಕ ಸ್ವರೂಪದ ಕಾನೂನು ಎಂದಿದ್ದಾರೆ.

ಈ ಸಂಬಂಧ ಟ್ವೀಟ್ ಮಾಡಿರುವ ಅವರು, ಅಕ್ರಮವಾಗಿ ನಮ್ಮ ರಾಷ್ಟ್ರದೊಳಗೆ ಪ್ರವೇಶಿಸುವ ಜನರನ್ನು ಮರಳಿ ಕಳುಹಿಸುವ ಸಲುವಾಗಿ ವರ್ಷಗಟ್ಟಲೆ ಕಾನೂನು ಕಾರ್ಯಾಚರಣೆ ನಡೆಸುತ್ತಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದಿದ್ದಾರೆ.

ನಾವು ತೆಗೆದು ಕೊಂಡಿರುವ ಹೊಸ ವಲಸೆ ನೀತಿ ಯೋಜನೆಯಿಂದ ತಕ್ಷಣವೇ ಹಿಮ್ಮೆಟ್ಟಿಸುವ ಕಾರ್ಯ ನಡೆಯುತ್ತಿದೆ. ಇಡೀ ಪ್ರಪಂಚದಲ್ಲಿ ನಮ್ಮ ಕಾನೂನುಗಳಂತೆ ಅತ್ಯಂತ ಮೂಕ ಕಾನೂನು ಎಲ್ಲೂ ಇಲ್ಲ ಎಂದು ಬರೆದುಕೊಂಡಿದ್ದಾರೆ.

ಟ್ರಂಪ್ ಅವರ ನೂತನ ವಲಸೆ ನೀತಿಯ ವಿರುದ್ಧ ದೇಶದ ಹಲವು ನಗರಗಳಲ್ಲಿ ಭಾರತೀಯರು ಸೇರಿದಂತೆ ಸಾವಿರಾರು ಮಂದಿ ಪ್ರತಿಭಟನೆ ನಡೆಸಿದ್ದಾರೆ. ಹೊಸ ವಲಸೆ ನೀತಿಯಿಂದ ಪೋಷಕರಿಂದ ಮಕ್ಕಳನ್ನು ಬೇರ್ಪಡಿಸುವ `ಶೂನ್ಯ ಸಹಿಷ್ಣತೆ’ ನಿರ್ಮಾಣವಾಗಿದೆ. ಇದರಿಂದಾಗಿ ಅಮೆರಿಕದ ಗಡಿಯಲ್ಲಿ ಸುಮಾರು 2000 ಮಕ್ಕಳು ಅವರ ಪೋಷಕರು ಮತ್ತು ಪಾಲಕರಿಂದ ಬೇರ್ಪಟ್ಟಿದ್ದಾರೆ.

ವಲಸೆ ನೀತಿಯನ್ನು ವಿರೋಧಿಸಿ ಶ್ವೇತ ಭವನದ ಸಮೀಪ ಸೇರಿದಂತೆ ಹಲವು ನಗರಗಳಲ್ಲಿ ನಾಗರಿಕರು ಮೆರವಣಿಗೆ ನಡೆಸಿದ್ದಾರೆ. ಮಾನವ ಹಕ್ಕುಗಳ ಹೋರಾಗಟಗಾರರು ಹಾಗೂ ಡೆಮಾಕ್ರಟಿಕ್ ಪಕ್ಷದ ಮುಖಂಡರ ನೇತೃತ್ವದಲ್ಲಿ ಶನಿವಾರ ಪ್ರತಿಭಟನೆಗಳು ಕೈಗೊಂಡಿದ್ದವು. ವಲಸೆ ನೀತಿಗಳು ಮಾನವೀಯತೆಗಳನ್ನು ಒಳಗೊಂಡಿರಲಿ, ಕಾನೂನು ಬಾಹಿವಾಗಿ ಗಡಿ ದಾಟುವ ಪೋಷಕರಿಂದ ಯಾವುದೇ ಮಕ್ಕಳನ್ನು ಬೇರ್ಪಡಿಸಬಾರದು ಎಂದು ಪ್ರತಿಭಟನಕಾರರು ಟ್ರಂಪ್ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *