ನಮ್ಮ ಕ್ರಿಕೆಟ್‌ ತಂಡ ಮತ್ತೊಮ್ಮೆ ವಿಜಯಶಾಲಿಯಾಗಿದೆ: ಭಾರತದ ಗೆಲುವಿಗೆ ಮೋದಿ ಅಭಿನಂದನೆ

Public TV
2 Min Read

– ಭಾರತ ತಂಡ ವಿರಾಟ್‌ ಕೊಹ್ಲಿಗೆ ಹುಟ್ಟುಹುಬ್ಬದ ಉಡುಗೊರೆ ನೀಡಿದೆ ಎಂದ ಪ್ರಧಾನಿ

ನವದೆಹಲಿ: ಕೋಲ್ಕತ್ತಾದ ಈಡನ್‌ ಗಾರ್ಡನ್ಸ್‌ ಮೈದಾನದಲ್ಲಿ ನಡೆದ ವಿಶ್ವಕಪ್‌ 2023 ಟೂರ್ನಿಯ (World Cup 2023) ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಭಾರತ (India vs South Africa) ಅಮೋಘ ಜಯ ದಾಖಲಿಸಿದೆ. ಭಾರತ ಕ್ರಿಕೆಟ್‌ ತಂಡದ ಗೆಲುವಿಗೆ ಪ್ರಧಾನಿ ಮೋದಿ (Narendra Modi) ಟ್ವೀಟ್‌ ಮಾಡಿ ಅಭಿನಂದನೆ ಸಲ್ಲಿಸಿದ್ದಾರೆ.

ಭಾರತದ ಗೆಲುವಿಗೆ ಸಂತಸ ವ್ಯಕ್ತಪಡಿಸಿರುವ ಮೋದಿ, ನಮ್ಮ ಕ್ರಿಕೆಟ್ ತಂಡ ಮತ್ತೊಮ್ಮೆ ವಿಜಯಶಾಲಿಯಾಗಿದೆ! ದಕ್ಷಿಣ ಆಫ್ರಿಕಾ ವಿರುದ್ಧ ಅಮೋಘ ಪ್ರದರ್ಶನ ನೀಡಿದ ತಂಡಕ್ಕೆ ಅಭಿನಂದನೆಗಳು. ಉತ್ತಮ ತಂಡದ ಕೆಲಸ. ಇಂದು ಸುಂದರವಾದ ಇನ್ನಿಂಗ್ಸ್ ಆಡಿದ ವಿರಾಟ್ ಕೊಹ್ಲಿಗೆ (Virat Kohli) ತಂಡವು ಹುಟ್ಟುಹಬ್ಬದ ಉಡುಗೊರೆಯನ್ನು ನೀಡಿದೆ ಎಂದು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ. ಇದನ್ನೂ ಓದಿ: 49th Century: ಕಿಂಗ್ ಕೊಹ್ಲಿ ಬರ್ತ್ ಡೇ ಶತಕ – ಶುಭಾಶಯಗಳ ಸುರಿಮಳೆ!

ತಮ್ಮ ಹುಟ್ಟುಹಬ್ಬದ ದಿನದಂದೇ ಕಿಂಗ್‌ ಕೊಹ್ಲಿ ಅಭಿಮಾನಿಗಳಿಗೆ ಶತಕದ ಸಿಹಿ ಕೊಟ್ಟರು. ಜೊತೆಗೆ ಏಕದಿನ ವಿಶ್ವಕಪ್‌ನಲ್ಲಿ ಕ್ರಿಕೆಟ್‌ ದೇವರು ಸಚಿನ್‌ ತೆಂಡೂಲ್ಕರ್‌ ಅವರ 49 ಶತಕಗಳ ದಾಖಲೆಯನ್ನು ಸರಿಗಟ್ಟಿದರು. ಇಂತಹ ಸ್ಮರಣೀಯ ಕ್ಷಣಗಳಿಗೆ ಇಂದಿನ ದಕ್ಷಿಣ ಆಫ್ರಿಕಾ-ಭಾರತ ನಡುವಿನ ಪಂದ್ಯ ಸಾಕ್ಷಿಯಾಯಿತು.

ವಿರಾಟ್‌ ಕೊಹ್ಲಿ (Virat Kohli), ಶ್ರೇಯಸ್‌ ಅಯ್ಯರ್‌ ಶತಕದ ಜೊತೆಯಾಟ ಹಾಗೂ ರವೀಂದ್ರ ಜಡೇಜಾ (Ravindra Jadeja) ಸ್ಪಿನ್‌ ಜಾದು ನೆರವಿನಿಂದ ಟೀಂ ಇಂಡಿಯಾ ಬಲಿಷ್ಠ ದಕ್ಷಿಣ ಆಫ್ರಿಕಾ ತಂಡದ ವಿರುದ್ಧ 243 ರನ್‌ಗಳ ಭರ್ಜರಿ ಜಯ ಸಾಧಿಸಿತು. ಈ ಗೆಲುವಿನೊಂದಿಗೆ +2.456 ರನ್‌ರೇಟ್‌ನೊಂದಿಗೆ ಅಗ್ರಸ್ಥಾನ ಉಳಿಸಿಕೊಂಡಿದೆ. ಇದನ್ನೂ ಓದಿ: ಜಡೇಜಾ ಸ್ಪಿನ್‌ ಜಾದುಗೆ ಮಕಾಡೆ ಮಲಗಿದ ಹರಿಣರು – ಭಾರತಕ್ಕೆ 243 ರನ್‌ಗಳ ಭರ್ಜರಿ ಜಯ

ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಭಾರತ ತಂಡ 50 ಓವರ್‌ಗಳಿಗೆ 5 ವಿಕೆಟ್‌ ನಷ್ಟಕ್ಕೆ 326 ರನ್‌ಗಳಿಸಿತು. 327 ರನ್‌ ಗುರಿ ಬೆನ್ನತ್ತಿದ ದಕ್ಷಿಣ ಆಫ್ರಿಕಾ 83 ರನ್‌ಗಳಿಗೆ ಆಲೌಟ್‌ ಆಗಿ ಮಕಾಡೆ ಮಲಗಿತು.

Share This Article