ಸದ್ಗುರು ಹುಡುಕಿಕೊಂಡು ಭಾರತಕ್ಕೆ ಬಂದ ಆಸ್ಕರ್ ಪ್ರಶಸ್ತಿ ವಿಜೇತ ನಟ ವಿಲ್ ಸ್ಮಿತ್

Public TV
1 Min Read

ಸ್ಕರ್ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ನಿರೂಪಕರಿಗೆ ಕಪಾಳಮೋಕ್ಷ ಮಾಡುವ ಮೂಲಕ ದೊಡ್ಡ ಸುದ್ದಿ ಮಾಡಿದ್ದ ಹಾಲಿವುಡ್ ನಟ ವಿಲ್ ಸ್ಮಿತ್ ಮೊನ್ನೆಯಷ್ಟೇ ಭಾರತಕ್ಕೆ ಆಗಮಿಸಿದ್ದಾರೆ. ವಿಲ್ ಸ್ಮಿತ್ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಳ್ಳುತ್ತಿದ್ದಂತೆಯೇ ಅದು ಭಾರೀ ಅಚ್ಚರಿಗೂ ಕಾರಣವಾಗಿತ್ತು. ಕಪಾಳಮೋಕ್ಷ ಪ್ರಕರಣದ ನಂತರ ಬಹಿರಂಗವಾಗಿ ಸ್ಮಿತ್ ಕಾಣಿಸಿಕೊಂಡಿದ್ದು, ಅದರೂ ಭಾರತದಲ್ಲಿ ಕಾಣಿಸಿಕೊಂಡಿದ್ದು ಕುತೂಹಲ ಮೂಡಿಸಿತ್ತು. ಇದನ್ನೂ ಓದಿ : ಮಂದಣ್ಣಗಾಗಿ ಮುಂಬೈನಲ್ಲಿ ಮುಗಿಬಿದ್ದ ಫ್ಯಾನ್ಸ್ : ಬಾಲಿವುಡ್ ನಲ್ಲೂ ರಶ್ಮಿಕಾ ಹವಾ

ಮೊನ್ನೆಯಷ್ಟೇ ಮುಂಬೈ ವಿಮಾನ ನಿಲ್ದಾಣಕ್ಕೆ ಬಂದಿಳಿಯುವ ಮೂಲಕ ಭಾರತಕ್ಕೆ ಬಂದಿದ್ದಾರೆ. ಸ್ಮಿತ್ ಇಲ್ಲಿಗೆ ಬರಲು ಕಾರಣವೇನು ಎನ್ನುವ ಹುಡುಕಾಟ ಕೂಡ ನಡೆದಿತ್ತು. ಈ ಹಿಂದೆ ಸ್ಮಿತ್ ಭಾರತ‍ಕ್ಕೆ ಬಂದದ್ದು ರಿಯಾಲಿಟಿ ಶೋವೊಂದರ ಶೂಟಿಂಗ್ ಗಾಗಿ ಆಗಿದ್ದರೂ, ಈ ಬಾರಿ ಅವರು ಯಾವ ಚಿತ್ರೀಕರಣದಲ್ಲಿ ಪಾಲ್ಗೊಳ್ಳಲಿದ್ದಾರೆ ಎನ್ನುವ ಕುತೂಹಲ ಮೂಡಿತ್ತು. ಆದರೆ, ಭಾರತಕ್ಕೆ ಅವರು ಈ ಬಾರಿ ಬಂದಿದ್ದು ಚಿತ್ರೀಕರಣಕ್ಕೆ ಅಲ್ಲವಂತೆ. ಇದನ್ನೂ ಓದಿ : ಬಾಲಿವುಡ್ ಎಂದರೆ ಭಾರತೀಯ ಸಿನಿಮಾರಂಗವಲ್ಲ: ಮೆಗಾಸ್ಟಾರ್ ಚಿರಂಜೀವಿಗೂ ಆಗಿತ್ತು ಅವಮಾನ

ವಿಲ್ ಸ್ಮೀತ್ ಅಧ್ಯಾತ್ಮಿಕ ಜೀವಿ. ಅವರು ಭಾರತದ ಅಧ್ಯಾತ್ಮಿಕ ಪರಂಪರೆಯನ್ನು ಫಾಲೋ ಮಾಡುತ್ತಾರಂತೆ. ಹಾಗಾಗಿ ಸದ್ಗುರುವನ್ನು ಹುಡುಕಿಕೊಂಡು ಸ್ಮಿತ್ ಭಾರತಕ್ಕೆ ಬಂದಿದ್ದಾರೆ ಎನ್ನಲಾಗುತ್ತಿದೆ. ಆಸ್ಕರ್ ಸಮಾರಂಭದಲ್ಲಿ ಆದ ಘಟನೆಯಿಂದ ಅವರ ಮನಸ್ಸಿಗೆ ತುಂಬಾ ಬೇಸರವಾಗಿದ್ದು, ಅದನ್ನು ಕಳೆಯುವುದಕ್ಕಾಗಿ ಅವರು ಭಾರತಕ್ಕೆ ಬಂದಿದ್ದಾರೆ ಎನ್ನಲಾಗುತ್ತಿದೆ. ಇದನ್ನೂ ಓದಿ : ಕೆಜಿಎಫ್ 2 : ಗೋವಾದಲ್ಲಿ ಸಕ್ಸಸ್ ಪಾರ್ಟಿ

ಸದ್ಗುರು ಹುಡುಕಿಕೊಂಡು ಭಾರತಕ್ಕೆ ಬಂದ ಮೇಲೆ ಅವರು ಯಾವ ಆಶ್ರಮದಲ್ಲಿದ್ದಾರೆ. ಏನು ಮಾಡುತ್ತಿದ್ದಾರೆ ಎನ್ನುವ ಯಾವ ಮಾಹಿತಿಯೂ ಇಲ್ಲ. ಸದ್ಗುರು ಕೂಡ ಈ ಕುರಿತು ತಾವುದೇ ಮಾಹಿತಿ ಹಂಚಿಕೊಂಡಿಲ್ಲ. ಆದರೆ, ಹಲವು ದಿನಗಳ ಕಾಲ ಸ್ಮಿತ್ ಭಾರತದಲ್ಲೇ ತಂಗಲಿದ್ದಾರೆ ಎನ್ನುವ ಮಾಹಿತಿ ಇದೆ.

Share This Article
Leave a Comment

Leave a Reply

Your email address will not be published. Required fields are marked *