ರುಚಿಕಾ ವಿರುದ್ಧ ಕಾನೂನು ಸಮರಕ್ಕೆ ಮುಂದಾದ ಓರ್ರಿ

Public TV
2 Min Read

ದಾ ಬಾಲಿವುಡ್ ನಟಿಯರ ಜೊತೆ ಬೋಲ್ಡ್ ಪೋಸ್ ಕೊಡುವ ಓರ್ರಿ (Orry) ಅಲಿಯಾಸ್ ಒರ್ಹಾನ್ ಅವತ್ರಾಮಣಿ (Orhan Awatramani) ಮೇಲೆ ಸೋಷಿಯಲ್ ಮೀಡಿಯಾ ಕಂಟೆಂಟ್ ಕ್ರಿಯೇಟರ್ ರುಚಿಕಾ (Ruchika Lohiya) ಫುಲ್ ರಾಂಗ್ ಆಗಿದ್ದಾರೆ. ರುಚಿಕಾ ಲೋಹಿಯಾ ನಡೆಗೆ ಕಾನೂನು ಸಮರ ಸಾರುವುದಾಗಿ ಓರ್ರಿ ವಾರ್ನಿಂಗ್ ಕೊಟ್ಟಿದ್ದಾರೆ.‌ ಇದನ್ನೂ ಓದಿ:ಬಾಲಿವುಡ್ ಬಿಗ್ ಆಫರ್ ಬಾಚಿಕೊಂಡ ಮೃಣಾಲ್ ಠಾಕೂರ್

 

View this post on Instagram

 

A post shared by Ruchika Lohiya (@__chikka)

ಓರ್ರಿ ಮತ್ತು ರುಚಿಕಾ ಇಬ್ಬರ ಕಲಹಕ್ಕೆ ಕಾರಣವಾಗಿರೋದು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿರುವ ವಿಡಿಯೋ. ಮುಂಬೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಓರ್ರಿ ಮತ್ತು ರುಚಿಕಾ ಅನಿರಿಕ್ಷಿತವಾಗಿ ಭೇಟಿಯಾಗಿದ್ದಾರೆ. ಈ ವೇಳೆ, ಕೈ ಕುಲುಕಲು ನಿರಾಕರಿಸಿದ್ದಾರೆ. ಅವರ ಜೊತೆಗೆ ಫೋಟೋ ತೆಗೆದುಕೊಳ್ಳಲು ಸಹ ಬಿಡಲಿಲ್ಲ ಎಂದು ರುಚಿಕಾ ಆರೋಪಿಸಿದ್ದಾರೆ. ಈ ವಿಡಿಯೋ ಇದೀಗ 5 ಮಿಲಿಯನ್ ವಿವ್ಸ್ ಪಡೆದಿದೆ. ಈ ವಿಚಾರವಾಗಿ ಓರ್ರಿ ಸಿಟ್ಟಾಗಿದ್ದಾರೆ. ಮಾನನಷ್ಟ ಮೊಕ್ಕದಮೆ ಹೂಡುವುದಾಗಿ ರುಚಿಕಾಗೆ ಬೆದರಿಕೆ ಹಾಕಿದ್ದಾರೆ.

ರುಚಿಕಾ ಹೇಳಿದಿಷ್ಟು, ಓರ್ರಿ ಮ್ಯಾನೇಜರ್ ಓರ್ರಿ ಜೊತೆ ಫೋಟೋ ತೆಗೆದುಕೊಳ್ಳದಂತೆ ಸೂಚಿಸಿದ್ದರು. ಓರ್ರಿಗೆ ಬೈ ಹೇಳುವಾಗ ಹ್ಯಾಡ್ ಶೇಕ್ ಮಾಡುವ ಬದಲು ಮುಷ್ಠಿ ಹಿಡಿದು ಗುದ್ದಿದ್ದರು ಎಂದು ವಿಡಿಯೋದಲ್ಲಿ ತಿಳಿಸಿದ್ದಾರೆ. ಇದಕ್ಕೆ ಓರ್ರಿ ಕೂಡ ಕಾಮೆಂಟ್ ಮೂಲಕ ಎಚ್ಚರಿಕೆ ನೀಡಿದ್ದಾರೆ.

ಬೇಬ್, ನನಗೆ ನೀನು ಯಾರಂತ ಗೊತ್ತಿಲ್ಲ. ನೀನು ನನ್ನ ಮನೆತನಕ್ಕೆ ಸಂಬಂಧಪಟ್ಟವಳು ಅಲ್ಲ. ನಿನ್ನ ಕೈಯಲ್ಲಿ ಯಾವ ರೋಗಾಣುಗಳಿರುತ್ತವೆ ನನಗೆ ತಿಳಿದಿಲ್ಲ. ನಾನು ಸ್ನೇಹಿತರನ್ನು ಭೇಟಿಯಾಗಲು ಯಾವಾಗಲೂ ಖುಷಿಪಡುತ್ತೇನೆ. ಸಮಯ ಕಮ್ಮಿಯಿದ್ದಾಗ ಸಾರ್ವಜನಿಕ ಸಮಾರಂಭದಲ್ಲಿ ಬರುವುದು. ನನ್ನ ಮ್ಯಾನೇಜರ್‌ಗೆ ಅಗೌರವ ತೋರಿಸುವುದು ಸರಿಯಿಲ್ಲ. ನಯವಾಗಿ ನೀವು ನನ್ನ ಅಭಿನಂದಿಸಿದ್ದೀರಿ. ಅಪರಿಚಿತರು ಕೂಡ ನಿಮ್ಮನ್ನು ಮುಟ್ಟುತ್ತಾರೆ ಎಂದು ನಿರೀಕ್ಷಿಸಬೇಡಿ. ಸ್ನೇಹದಿಂದಲೇ ಮುಷ್ಠಿಯಿಂದ ಅಭಿನಂದಿಸಿದೆ ಅದು ಸಾಕಾಗುವುದಿಲ್ಲವೇ ಎಂದು ಓರ್ರಿ ಪ್ರಶ್ನಿಸಿದ್ದಾರೆ. ನೀವು ನಿಜವಾಗಿಯೂ ಮುಜುಗರಕ್ಕೊಳಗಾಗಿದ್ದರೆ, ಈ ರೀತಿಯ ವಿಡಿಯೋ ಶೇರ್ ಮಾಡುವ ಅಗತ್ಯವೇನು? ಎಂದು ಓರ್ರಿ ಕೇಳಿದ್ದಾರೆ. ಕುತಂತ್ರಿ ನಿನಗೆ ನಾಚಿಕೆ ಇಲ್ಲವೇ ಎಂದು ರುಚಿಕಾ ವಿರುದ್ಧ ಓರ್ರಿ ಗರಂ ಆಗಿದ್ದಾರೆ.

ರುಚಿಕಾ ಸಿಂಪತಿ ಗಿಟ್ಟಿಸಿಕೊಳ್ಳಲು ಕಥೆ ಕಟ್ಟುತ್ತಿದ್ದಾರೆ ಎಂದು ಓರ್ರಿ ಆರೋಪಿಸಿದ್ದಾರೆ. ಅದಷ್ಟೇ ಅಲ್ಲ, ಕಂಟೆಂಟ್ ಕ್ರಿಯೇಟರ್ ರುಚಿಕಾ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಓರ್ರಿ ಹೇಳಿದ್ದಾರೆ.

Share This Article