ಆರ್ಕಿಡ್ಸ್‌ ಅಂತಾರಾಷ್ಟ್ರೀಯ ಶಾಲೆಯಲ್ಲಿ ಮಕ್ಕಳ ದಿನಾಚರಣೆಯ ಪ್ರಯುಕ್ತ ಮೋಜಿನ ಮೇಳ

Public TV
1 Min Read

ಬೆಂಗಳೂರು: ನವೆಂಬರ್‌ 14ರ ಮಕ್ಕಳ ದಿನಾಚರಣೆಯ(Children’s Day) ಪ್ರಯುಕ್ತ ಆರ್ಕಿಡ್ಸ್‌ ಅಂತಾರಾಷ್ಟ್ರೀಯ ಶಾಲೆಯಲ್ಲಿ(Orchids The International School) ಮೋಜಿನ ಮೇಳವು ನಡೆಯಿತು. ಭಾರತದ ಹತ್ತು ನಗರಗಳಲ್ಲಿ, ಒಟ್ಟು 32 ಆರ್ಕಿಡ್ಸ್‌ ಶಾಖೆಗಳಲ್ಲಿ ಯಶಸ್ವಿಯಾಗಿ ನಡೆದ ಮೋಜಿನ ಮೇಳವು, ಪೋಷಕರಿಗೆ ಬಾಲ್ಯದ ದಿನಗಳನ್ನು ಮೆಲುಕು ಹಾಕಲು ವೇದಿಕೆ ಕಲ್ಪಿಸಿತು.

80 ಹಾಗೂ 90 ರ ದಶಕದ ಆಟಗಳನ್ನು ಆಡುವುದರ ಮೂಲಕ ಪೋಷಕರು(Parents) ತಮ್ಮ ಬಾಲ್ಯದ ದಿನಗಳನ್ನು ನೆನೆಸಿಕೊಂಡರು. ಮ್ಯಾಜಿಕ್‌ ಶೋ, ಸಂಗೀತ ಕುರ್ಚಿ, ರಿಂಗ್‌ ಟಾಸ್ಕ್‌ ಸೇರಿದಂತೆ ಪೋಷಕರು ಹಾಗೂ ಮಕ್ಕಳನ್ನು ಮನರಂಜಿಸುವ ಹಲವು ಆಟಗಳು, ಚಟುವಟಿಕೆಗಳು ನಡೆದವು. ಇದನ್ನೂ ಓದಿ: KSRTC ನೌಕರರಿಗೆ ಗುಡ್‌ನ್ಯೂಸ್ – 1 ಕೋಟಿ ಮೌಲ್ಯದ ವಿಮೆ ಸೌಲಭ್ಯ ಜಾರಿ

ಸಾರ್ವಜನಿಕರಿಗೆ ಉಚಿತ ಪ್ರವೇಶ ಕಲ್ಪಿಸಲಾಗಿತ್ತು. ಬೆಂಗಳೂರಲ್ಲಿರುವ ಆರ್ಕಿಡ್ಸ್‌ನ ಯಲಹಂಕ, ನಾಗರಬಾವಿ, ಜಾಲಹಳ್ಳಿ, ಸರ್ಜಾಪುರ, ಸಹಕಾರನಗರ, ಜೆಪಿನಗರ, ಬನ್ನೇರುಘಟ್ಟ ಶಾಖೆಗಳಲ್ಲಿ ಮೋಜಿನ ಮೇಳ ಯಶಸ್ವಿಯಾಗಿ ನಡೆಯಿತು. ಕಾರ್ಯಕ್ರಮ ನಡೆದ 32 ಶಾಖೆಗಳಲ್ಲಿ ಸುಮಾರು 25,000ಕ್ಕೂ ಹೆಚ್ಚು ಮಕ್ಕಳು ಹಾಗೂ ಪೋಷಕರು ಭಾಗವಹಿಸಿದರು.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *