ಬಿಟೌನ್ (Bollywood) ಬ್ಯೂಟಿ ಆಲಿಯಾ ಭಟ್ (Actress Alia Bhatt) ಇದೀಗ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿರುವ ಬೋಲ್ಡ್ ಫೋಟೋಗಳು ಭಾರೀ ಕುತೂಹಲಕ್ಕೆ ಕಾರಣವಾಗಿದೆ. ವೆಕೇಷನ್‍ಗೆ ಹೋಗಿರುವ ಆಲಿಯಾ ಬೀಚ್ ಸೈಡ್ ತಂಪು ತಂಗಾಳಿಯಲ್ಲಿ ಹಾಯಾಗಿ ಸಮಯ ಕಳೆಯುತ್ತಿರುವುದು ಕಂಡುಬಂದಿದೆ. ಹಾಗಂತ ಸೂಪರ್ ಅಂತ ಕಾಮೆಂಟ್ ಮಾಡ್ತೀನಿ ಅಂದ್ರೆ ಅದಕ್ಕೆ ಅವಕಾಶ ಕೊಟ್ಟಿಲ್ಲ ಆಲಿಯಾ. ಕಾಮೆಂಟ್ಸ್ ಸೆಕ್ಷನ್‍ನ್ನು ಆಫ್ ಮಾಡಿದ್ದಾರೆ ಆಲಿಯಾ. ಅವರು ಹೀಗ್ ಮಾಡಿರೋದು ಮೊದಲೇನಲ್ಲ. ಕೆಲವೊಂದು ವೈಯಕ್ತಿಕ ಫೋಟೋ ಹಾಕಿದಾಗ ಆಲಿಯಾ ಕಾಮೆಂಟ್ ಸೆಕ್ಷನ್ ಆಫ್ ಮಾಡುವ ಪದ್ಧತಿ ರೂಢಿಸಿಕೊಂಡಿದ್ದಾರೆ. ಬ್ಯಾಡ್ ಕಾಮೆಂಟ್ಸ್‍ಗಳ್ಯಾಕೆ ಅದರಿಂದ ಮನಸ್ಸಿಗೆ ನೋವು ಮಾಡಿಕೊಳ್ಳುವ ತಲೆನೋವ್ಯಾಕೆ ಅನ್ನೋದು ಆಲಿಯಾ ಪಾಲಿಸಿ ಇರಬಹುದು. ಹೀಗಾಗಿ ಈಗ ಪೋಸ್ಟ್ ಮಾಡಿರುವ ಆರೇಂಜ್ ಬಿಕಿನಿ ಧರಿಸಿರುವ ಬೋಲ್ಡ್ ಫೋಟೋಗಳಿಗೂ ಕಾಮೆಂಟ್ಸ್ ಆಫ್ ಮಾಡಿದ್ದಾರೆ.
ಮೇಕಪ್ ಇಲ್ಲದೇ ಸುಂದರವಾಗಿ ಕಾಣಿಸುವ ನಟಿಯರಲ್ಲಿ ಆಲಿಯಾ ಕೂಡ ಒಬ್ಬರು. ಅನೇಕ ಬಾರಿ ಮೇಕಪ್ ಇಲ್ಲದೇ ಕಾಣಿಸಿಕೊಳ್ಳೋದುಂಟು. ಇದೀಗ ತಮ್ಮ ನೈಸರ್ಗಿಕ ಅಂದಕ್ಕೆ ಚೆಂದದ ಕ್ಯಾಪ್ಷನ್ ಕೊಟ್ಟಿರುವ ಆಲಿಯಾ ಸಮುದ್ರದ ಉಪ್ಪು ಹಾಗೂ ಸಮುದ್ರದ ತಂಗಾಳಿ ತಮ್ಮ ಕೇಶವಿನ್ಯಾಸ ಮಾಡಿದೆ ಎಂದು ಕ್ರೆಡಿಟ್ ಕೊಟ್ಟಿದ್ದಾರೆ. ಆಲಿಯಾಳ ಈ ನೈಸರ್ಗಿಕ ಅಂದಕ್ಕೆ ಕಾಮೆಂಟ್ಸ್ ಮಾಡೋದಂತೂ ಅಸಾಧ್ಯ, ನೋಡಬಹುದಷ್ಟೇ. ಇದನ್ನೂ ಓದಿ: ಡಾಲಿ ಹುಟ್ಟುಹಬ್ಬಕ್ಕೆ ಜಿಂಗೋ ಲುಕ್ ಪೋಸ್ಟರ್ ರಿಲೀಸ್
ಸಾಮಾನ್ಯವಾಗಿ ಆಲಿಯಾ ಮಗಳು ಹಾಗೂ ಪತಿ ಜೊತೆ ವೆಕೇಷನ್ ಹೋಗೋದು ಸಾಮಾನ್ಯ. ಆದರೆ ಈ ಬಾರಿ ತಾಯಿ ತಂಗಿ ಹಾಗೂ ತಂಗಿಯ ಬಾಯ್‍ಫ್ರೆಂಡ್ ಜೊತೆಯಲ್ಲಿ ಆಲಿಯಾ ಪ್ರವಾಸಕ್ಕೆ ತೆರಳಿದ್ದಾರೆ. ಈ ಹಿಂದೆ ಫೋಟೋ ಪೋಸ್ಟ್ ಮಾಡಿದ್ದರು. ಇದೀಗ ಆಲಿಯಾಳ ಸಿಂಗಲ್ ಸೆಲ್ಫಿ ಕ್ಲಿಕ್‍ಗಳು ವೈರಲ್ ಆಗಿವೆ. ಇದನ್ನೂ ಓದಿ: ದರ್ಶನ್ ಬಳ್ಳಾರಿ ಜರ್ನಿ – ಆ.30ರಂದು ಅರ್ಜಿ ವಿಚಾರಣೆ