ಬೆಂಗಳೂರು: ಪ್ರಧಾನಿ ಮೋದಿ ಹತ್ಯೆಗೆ ಷಡ್ಯಂತ್ರ ರೂಪಿಸಿದ ಆರೋಪದ ಮೇಲೆ ಆರು ರಾಜ್ಯಗಳಲ್ಲಿ ದಾಳಿ ನಡೆಸಿದ ಪುಣೆ ಪೊಲೀಸರು, ಮಾವೋವಾದಿ ಪರ ಧೋರಣೆ ಹೊಂದಿರುವ ಮಾನವಹಕ್ಕುಗಳ ಹೋರಾಟಗಾರರು, ದಲಿತ, ದಮನಿತರ ವಿಚಾರವಾದಿಗಳು, ಪತ್ರಕರ್ತರು, ಪ್ರೊಫೆಸರ್ ಗಳು, ಕವಿಗಳನ್ನ ಬಂಧಿಸಿರೋದು ದೇಶದಲ್ಲಿ ಬಿರುಗಾಳಿ ಎಬ್ಬಿಸುತ್ತಿದೆ.
ಹೈದರಾಬಾದ್‍ನಲ್ಲಿ ಕವಿ, ವಿಚಾರವಾದಿ ವರವರರಾವ್, ಪತ್ರಕರ್ತ ಕ್ರಾಂತಿ ತೇಕುಲ, ಹರಿಯಾಣದಲ್ಲಿ ವಕೀಲೆ ಸುಧಾ ಭಾರದ್ವಜ್, ದೆಹಲಿಯಲ್ಲಿ ಗೌತಮ್ ವನ್ಲಾಖ, ಮುಂಬೈನಲ್ಲಿ ವೆರ್ನನ್ ಗೊನ್ಸಾಲ್‍ವೆಸ್ ಮತ್ತು ಥಾಣೆಯಲ್ಲಿ ಅರುಣ್ ಫೆರಿರಾರನ್ನ ಪುಣೆ ಪೊಲೀಸರು ಬಂಧಿಸಿ ಕರೆದೊಯ್ದಿದ್ದಾರೆ. ಇದಕ್ಕೆ ದೇಶವ್ಯಾಪಿ ವಿರೋಧ ವ್ಯಕ್ತವಾಗ್ತಿದೆ. ಹತ್ತಾರು ಸಂಘಟನೆಗಳು ಇಂದು ತೆಲಂಗಾಣ ಸೇರಿ ಹಲವೆಡೆ ಬಂದ್‍ಗೆ ಕರೆ ನೀಡಲಾಗಿದೆ. ಖ್ಯಾತನಾಮರು ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಇದೆ ಎಂಬ ಗಂಭೀರ ಆರೋಪ ಮಾಡಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ದೇಶದಲ್ಲಿ ಆರ್ ಎಸ್ ಎಸ್ ಹೊರತುಪಡಿಸಿ ಬೇರಾವುದೇ ಸಂಘಗಳನ್ನ ಇರಲು ಬಿಡುತ್ತಿಲ್ಲ. ಹೊಸ ಇಂಡಿಯಾಗೆ ಸ್ವಾಗತ ಎಂದು ಮೋದಿ ಸರ್ಕಾರವನ್ನು ಟೀಕಿಸಿದ್ದಾರೆ. ಇತಿಹಾಸಕಾರ ರಾಮಚಂದ್ರ ಗುಹಾ, ಗಾಂಧೀಜಿ ಇದ್ದಿದ್ದರೇ ಅವರನ್ನೂ ಕೂಡ ಬಂಧಿಸುತ್ತಿದ್ದರು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೋರಾಟಗಾರರ ಮೇಲಿನ ದಾಳಿಯನ್ನು ‘ಕ್ರೂರ, ಸರ್ವಾಧಿಕಾರಿ, ದಬ್ಬಾಳಿಕೆಯ, ಅನಿಯಂತ್ರಿತ ಹಾಗೂ ಅಕ್ರಮ ಕ್ರಮ’ ಎಂದು ಕಿಡಿ ಕಾರಿದ್ದಾರೆ. ಮೋದಿ ಸರ್ಕಾರ ಅವರನ್ನೂ ಬಂಧಿಸುತ್ತಿತ್ತು ಎಂದು ಗುಹಾ ಕಟು ಶಬ್ಧಗಳಲ್ಲಿ ಟೀಕಿಸಿದ್ದಾರೆ. ಪ್ರೊ.ಹರಗೋಪಾಲ್ ಅವರಂತೂ, ತುರ್ತುಪರಿಸ್ಥಿತಿಯಲ್ಲೂ ಈ ರೀತಿಯ ಬಂಧನ ಆಗಿರಲಿಲ್ಲ ಎಂದು ಮೋದಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
There is only place for one NGO in India and it's called the RSS. Shut down all other NGOs. Jail all activists and shoot those that complain.
Welcome to the new India. #BhimaKoregaon
— Rahul Gandhi (@RahulGandhi) August 28, 2018
ಯಾರು ಏನು ಹೇಳಿದ್ರು?
1. ರಾಹುಲ್ ಗಾಂಧಿ : ದೇಶದಲ್ಲಿ ಆರ್‍ಎಸ್‍ಎಸ್ ಬಿಟ್ಟು, ಬೇರೆ ಸಂಘಸಂಸ್ಥೆಗಳಿಗೆ ಉಳಿಗಾಲವಿಲ್ಲ.. ಇದು ಹೊಸ ಭಾರತ
2. ಲೇಖಕಿ ಅರುಂಧತಿ ರೈ : ದೇಶದಲ್ಲಿ ತುರ್ತು ಪರಿಸ್ಥಿತಿಗಿಂತ ಘೋರ ಪರಿಸ್ಥತಿ ಎದುರಾಗಿದೆ.
3. ಇತಿಹಾಸಕಾರ ರಾಮಚಂದ್ರ ಗುಹಾ: ಮೋದಿ ಆಡಳಿತದಲ್ಲಿ ಮಹಾತ್ಮ ಗಾಂಧೀಜಿಯವರನ್ನು ಬಂಧಿಸಲಾಗ್ತಿತ್ತು. ಇದು ಕ್ರೂರ, ಸರ್ವಾಧಿಕಾರಿ, ದಬ್ಬಾಳಿಕೆಯ, ಅನಿಯಂತ್ರಿತ ಹಾಗೂ ಅಕ್ರಮ ಕ್ರಮ
4. ಪ್ರೊ.ಹರಗೋಪಾಲ್: ತುರ್ತುಪರಿಸ್ಥಿತಿಯಲ್ಲೂ ಈ ರೀತಿಯ ಬಂಧನ ಆಗಿರಲಿಲ್ಲ ದೇಶದಲ್ಲಿ ದಲಿತರು, ದಮನಿತರ ಪರ ಯಾರು ಧ್ವನಿ ಎತ್ತಿದ್ರೆ ಇಂಥಾ ಸ್ಥಿತಿ ಬರುತ್ತದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv