ಬೆಂಗಳೂರು: ವಿಪಕ್ಷ ನಾಯಕ ಆರ್. ಅಶೋಕ್ (R Ashoka) ಅವರ ಪೊಲೀಸ್ ಎಸ್ಕಾರ್ಟ್ ವಾಹನ ಚಾಲಕ (Escort Driver) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಶರಣಪ್ಪ ರಾಮಗೋಳ್ ಆತ್ಮಹತ್ಯೆಗೆ ಶರಣಾದ ಪೊಲೀಸ್ ಪೇದೆ. ಇಲ್ಲಿನ ಬಾಪೂಜಿನಗರದ ಮನೆಯೊಂದರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಾಹಿತಿ ತಿಳಿದ ಬಳಿಕ ಬ್ಯಾಟರಾಯನಪುರ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಘಟನೆಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಇದನ್ನೂ ಓದಿ: ಜೈಲಲ್ಲಿ ರೌಡಿಶೀಟರ್ ಬರ್ತ್‌ಡೇ; 7 ಅಧಿಕಾರಿಗಳು ಸಸ್ಪೆಂಡ್
ಮೃತ ಶರಣಪ್ಪ ಯಾರು?
ಕಲಬರುಗಿ ಮೂಲದ ಪೇದೆ ಶರಣಪ್ಪ ರಾಮಗೋಳ್ ಬ್ಯಾಟರಾಯನಪುರದ ಕವಿಕಾ ಲೇಔಟ್ ನಲ್ಲಿ ಪತ್ನಿ, ಮಕ್ಕಳು ಹಾಗೂ ಸಹೋದರನ ಜೊತೆ ವಾಸವಿದ್ದರು. ಸಿಎಆರ್‌ನಲ್ಲಿ ಮುಖ್ಯಪೇದೆ ಆಗಿದ್ದ ಶರಣಪ್ಪ, ಕಳೆದ 5 ವರ್ಷದಿಂದ ಆರ್.ಅಶೋಕ್ ಅವರ ಎಸ್ಕಾರ್ಟ್ ವಾಹನದ ಚಾಲಕರಾಗಿದ್ದರು. ಮೃತರಿಗೆ ಕ್ರಮವಾಗಿ 2, 4 ವರ್ಷದ 2 ಮಕ್ಕಳಿದ್ದಾರೆ.
ಇಂದು ಪತ್ನಿ ಕೆಲಸಕ್ಕೆ ಹೋಗಿದ್ದು, ಮಕ್ಕಳನ್ನು ಕಲಬುರಗಿಗೆ ಕಳಿಸಿದ್ರು. ಸಂಜೆ ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣಿಗೆ ಶರಣಾಗಿದ್ದಾರೆ ಶರಣಪ್ಪ. ಮೃತದೇಹವನ್ನ ವಿಕ್ಟೋರಿಯಾ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ನಾಳೆ ಬೆಳಗ್ಗೆ ಪೋಸ್ಟ್ ಮಾರ್ಟಂ ನಡೆಯಲಿದೆ. ಅತ್ತ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ. ಇದನ್ನೂ ಓದಿ: ಬಿಗ್ ಬಾಸ್ ತಂಡಕ್ಕೆ ಮತ್ತೆ ಶಾಕ್ – ಕೆಲವೇ ಹೊತ್ತಲ್ಲಿ ಈಗಲ್‌ಟನ್ ರೆಸಾರ್ಟ್‌ನಿಂದ 17 ಸ್ಪರ್ಧಿಗಳು ಶಿಫ್ಟ್ ಬೇರೆಡೆಗೆ ಶಿಫ್ಟ್