ದಾಳಿ ವೇಳೆ ಕುತಂತ್ರ ಮಾಡಿದ್ರೂ ಭಾರತದ ಉತ್ತರಕ್ಕೆ ಪಾಕ್‌ ತತ್ತರ!

By
2 Min Read

ನವದೆಹಲಿ: ಉಗ್ರರನ್ನು ಛೂ ಬಿಟ್ಟು ಕೆಣುಕುತ್ತಿರುವ ಪಾಕಿಸ್ತಾನ (Pakistan) ಭಾರತದ (India) ಮೇಲೆ ದಾಳಿ ಮಾಡುವಾಗಲೂ ಕುತಂತ್ರ ಮಾಡುತ್ತಿದೆ. ಪಾಕ್‌ ಕುತಂತ್ರ ಮಾಡಿದರೂ ಭಾರತೀಯ ಸೇನೆ ಸರಿಯಾಗಿ ತಿರುಗೇಟು ನೀಡಿ ಸಂಭವಿಸಬಹುದಾದ ಭಾರೀ ದುರಂತವನ್ನು ತಪ್ಪಿಸುತ್ತಿದೆ.

ಹೌದು. ಭಾರತ ಏರ್‌ಸ್ಟ್ರೈಕ್‌ ಮಾಡಿದ ನಂತರ ಪಾಕ್‌ ಡ್ರೋನ್‌ (Drone) ದಾಳಿ ಆರಂಭಿಸಿತ್ತು. ಈ ಡ್ರೋನ್‌ ದಾಳಿಯನ್ನು ಭಾರತ ಯಶಸ್ವಿಯಾಗಿ ಹಿಮ್ಮೆಟ್ಟಿಸಿತ್ತು.

ತನ್ನ ಡ್ರೋನ್‌ ದಾಳಿ ವಿಫಲಗೊಳ್ಳುತ್ತಿದ್ದಂತೆ ಪಾಕಿಸ್ತಾನ ತನ್ನ ನರಿ ಬುದ್ಧಿಯನ್ನು ಪ್ರದರ್ಶಿಸಲು ಆರಂಭಿಸಿದೆ. ರಾತ್ರಿ ಆಗುತ್ತಿದ್ದಂತೆ ಹಮಾಸ್‌ ರೀತಿ ಭಾರೀ ಸಂಖ್ಯೆಯಲ್ಲಿ ಡ್ರೋನ್‌ ಹಾರಿಸಲು ಆರಂಭಿಸಿದೆ. ಈ ಡ್ರೋನ್‌ ಹಾರಿಸುತ್ತಿದ್ದಂತೆ ಬೆಳಗ್ಗೆಯಿಂದ ಬಂದ್‌ ಆಗಿದ್ದ ವಾಯುಸೇವೆಯನ್ನು ಆರಂಭಿಸುತ್ತಿದೆ. ನಾಗರಿಕ ವಿಮಾನಗಳು ಹಾರಾಟ ಆರಂಭಿಸುತ್ತಿದ್ದಂತೆ ಬೆನ್ನಲ್ಲೇ ಕ್ಷಿಪಣಿ (Missile) ದಾಳಿ ನಡೆಸುತ್ತಿದೆ. ಇದನ್ನೂ ಓದಿ: ಭಯೋತ್ಪಾದನೆಯ ವಿರುದ್ಧ ಯುದ್ಧ ಸಾರಿದ ಭಾರತ

ನಾಗರಿಕ ವಿಮಾನಗಳು (Plane) ಸಂಚಾರ ಮಾಡುತ್ತಿದ್ದಾಗ ತನ್ನ ಮೇಲೆ ಭಾರತ ದಾಳಿ ನಡೆಸುವುದಿಲ್ಲ. ಒಂದು ವೇಳೆ ದಾಳಿ ನಡೆಸಿದರೆ ವಿಮಾನದ ಮೇಲೆ ಕ್ಷಿಪಣಿ ಬಿದ್ದು ವಿಮಾನ ನೆಲಕ್ಕೆ ಉರುಳಿದರೆ ಭಾರತವನ್ನು ದೂಷಿಸಬಹುದು ಎಂಬ ಮನಸ್ಥಿತಿಯಲ್ಲಿದೆ.

ಕಳೆದ ಎರಡು ದಿನಗಳಿಂದ ಪಂಜಾಬ್‌ ಗಡಿ ಹತ್ತಿರದಲ್ಲಿರುವ ಲಾಹೋರ್‌ ವಿಮಾನ ನಿಲ್ದಾಣದಲ್ಲಿ ರಾತ್ರಿ ಆಗುತ್ತಿದ್ದಂತೆ ವಿಮಾನ ಸಂಚಾರ ಆರಂಭವಾಗುತ್ತಿದೆ. ಈ ನಿರ್ಧಾರದ ಹಿಂದೆ ಪಾಕಿನ ಎರಡು ಕುತಂತ್ರಿ ಬುದ್ದಿ ಅಡಗಿದೆ. ಒಂದನೇಯದ್ದು ಭಾರತ ಬಹಳ ಯೋಚನೆ ಮಾಡಿ ಪ್ರತಿ ದಾಳಿ ಮಾಡಬೇಕು. ಇನ್ನೊಂದು ತಾನು ಸಿಡಿಸಿದ ಕ್ಷಿಪಣಿಯನ್ನು ಅಷ್ಟು ಸುಲಭವಾಗಿ ಭಾರತದ ರೇಡಾರ್‌ಗಳು ಗುರುತಿಸಲಾರದು ಎಂಬ ಲೆಕ್ಕಾಚಾರವನ್ನು ಪಾಕ್‌ ಹಾಕಿಕೊಂಡಿದೆ. ಇದನ್ನೂ ಓದಿ: ಕಾಶ್ಮೀರ ಗಡಿಯಲ್ಲಿನ ಪಾಕ್ ಉಗ್ರರ ನೆಲೆ ಉಡೀಸ್ – ವೀಡಿಯೋ ಬಿಡುಗಡೆ ಮಾಡಿದ ಸೇನೆ

 

ಶುಕ್ರವಾರ ಸಂಜೆ ಭಾರತ ಪಾಕಿನ ಈ ಕುತಂತ್ರವನ್ನು ಕರ್ನಲ್ ಸೋಫಿಯಾ ಖುರೇಷಿ ಅವರು ಮಾಧ್ಯಮಗಳ ಮುಂದೆ ಬಿಚ್ಚಿಟ್ಟಿದ್ದರು.  ಆದರೆ ಶುಕ್ರವಾರ ರಾತ್ರಿ ಪಾಕಿಸ್ತಾನ ನಾಗರಿಕ ವಿಮಾನಗಳು ಹಾರುವ ಸಮಯದಲ್ಲೇ ದಾಳಿ ನಡೆಸಲು ಆರಂಭಿಸಿತ್ತು. ಭಾರೀ ಪ್ರಮಾಣದಲ್ಲಿ ಡ್ರೋನ್‌, ಕ್ಷಿಪಣಿಯನ್ನು ತಾನು ಹಾರಿಸುವಾಗ ತನ್ನ ವಾಯುಸೀಮೆಯನ್ನು ವಿಮಾನ ಹಾರಿಸಬಾರದು ಎಂಬ ನಿಯಮವನ್ನೇ ಗಾಳಿಗೆ ಭಾರತದ ನಗರಗಳನ್ನು ಗುರಿಯಾಗಿಸಿ ದಾಳಿ ನಡೆಸುತ್ತಿದೆ. ಹೀಗಿದ್ದರೂ ಭಾರತ ಎಲ್ಲವನ್ನೂ ಯೋಚಿಸಿ ಕೇವಲ ಪಾಕಿಸ್ತಾನದ ಮಿಲಿಟರಿ ನೆಲೆಯನ್ನು ಮಾತ್ರ ಗುರಿಯಾಗಿಸಿ ಯಶಸ್ವಿಯಾಗಿ ದಾಳಿ ನಡೆಸುತ್ತಿದೆ.

ಕಳೆದ ಮೂರು ದಿನಗಳಿಂದ ಗುಜರಾತ್‌, ರಾಜಸ್ಥಾನ, ಪಂಜಾಬ್‌, ಹರ್ಯಾಣ, ಜಮ್ಮು ಕಾಶ್ಮೀರದಲ್ಲಿ ಭಾರತ ತನ್ನ ವಿಮಾನ ಸೇವೆಯನ್ನು ಸಂಪೂರ್ಣವಾಗಿ ಬಂದ್‌ ಮಾಡಿ ಭಾರತ ಪಾಕ್‌ ದಾಳಿಗೆ ದಿಟ್ಟ ಪ್ರತಿ ದಾಳಿ ನಡೆಸುತ್ತಿದೆ.

Share This Article