ಪಿಕ್ಚರ್ ಅಭಿ ಬಾಕಿ ಹೈ: ಉಗ್ರರಿಗೆ ಎಚ್ಚರಿಕೆ ಕೊಟ್ಟ ಮಾಜಿ ಸಿಡಿಎಸ್‌ ನರವಾಣೆ

Public TV
2 Min Read

ನವದೆಹಲಿ: ಉಗ್ರರ ವಿರುದ್ಧ ಆಪರೇಷನ್‌ ಸಿಂಧೂರ (Operation Sindoor) ಮಾತ್ರ ಅಲ್ಲ, ಪಿಕ್ಚರ್ ಅಭಿ ಬಾಕಿ ಹೈ ಎಂದು ಮಾಜಿ ಸೇನಾ ಮುಖ್ಯಸ್ಥ ಮನೋಜ್ ನರವಾಣೆ (Manoj Naravane) ಪಾಕ್‌ (Pakistan) ಉಗ್ರರಿಗೆ ಎಚ್ಚರಿಕೆ ಕೊಟ್ಟಿದ್ದಾರೆ. ಈ ಬಗ್ಗೆ  ಎಕ್ಸ್‌ನಲ್ಲಿ ಅವರು ಪೋಸ್ಟ್‌ ಮಾಡಿದ್ದು, ಮತ್ತೆ ದಾಳಿ ನಡೆಯುವ ಬಗ್ಗೆ ಮುನ್ಸೂಚನೆ ನೀಡಿದ್ದಾರೆ.

ಪಹಲ್ಗಾಮ್ ಭಯೋತ್ಪಾದಕ ದಾಳಿಯ ಅಪರಾಧಿಗಳನ್ನು ಶಿಕ್ಷಿಸಿ, ಸಂತ್ರಸ್ತರಿಗೆ ನ್ಯಾಯ ಒದಗಿಸಬೇಕು ಎಂಬುದನ್ನು ಭಾರತ ಬಯಸುತ್ತಿದೆ. ಅಲ್ಲಿಯವರೆಗೂ ಇಂತಹ ಕಾರ್ಯಾಚರಣೆಗಳು ನಡೆಯಬೇಕು ಎಂಬ ಆಗ್ರಹಗಳು ಕೇಳಿಬರುತ್ತಿವೆ. ಇದನ್ನೂ ಓದಿ: I TOLD MODI – ಆಪರೇಷನ್‌ ಸಿಂಧೂರ ಬೆನ್ನಲ್ಲೇ ಕಾರ್ಟೂನ್‌ ವೈರಲ್‌ !

ಮನೋಜ್ ನರವಾಣೆಯವರು ಭಾರತೀಯ ಸೇನೆಯ 28ನೇ ಸೇನಾ ಮುಖ್ಯಸ್ಥರಾಗಿದ್ದರು. ಸಿಡಿಎಸ್‌ ಬಿಪಿನ್ ರಾವತ್ ಹೆಲಿಕಾಪ್ಟರ್‌ ಅಪಘಾತದಲ್ಲಿ ಸಾವಿಗೀಡಾದ ಬಳಿಕ ಅವರು ಅಧಿಕಾರ ವಹಿಸಿಕೊಂಡಿದ್ದರು.

ನರವಾಣೆ ಅವರನ್ನು ಸೇನಾ ವಲಯದಲ್ಲಿ ‘ಚೀನಾ ತಜ್ಞ ‘ ಎಂಬ ಹೆಸರಿದೆ. ಜಮ್ಮು ಮತ್ತು ಕಾಶ್ಮೀರ ಹಾಗೂ ಈಶಾನ್ಯ ರಾಜ್ಯಗಳಲ್ಲಿ ನುಸುಳುಕೋರರ ವಿರುದ್ಧದ ಕಾರ್ಯಾಚರಣೆಗಳ ತಂತ್ರ ಹೆಣೆದ ಅನುಭವಿಯಾಗಿದ್ದರು. ಅವರು ಸೇನೆಯ ಉಪ ಮುಖ್ಯಸ್ಥರಾಗುವ ಮೊದಲು ಕೊಲ್ಕತ್ತಾದಲ್ಲಿ ಪ್ರಧಾನ ಕಚೇರಿಯಿರುವ ಭೂಸೇನೆಯ ಪೂರ್ವ ಕಮಾಂಡ್‌ನ ಕಮಾಂಡರ್ ಆಗಿದ್ದರು.

ಸೇವಾ ಅವಧಿಯಲ್ಲಿ ಹತ್ತು ಹಲವು ಉನ್ನತ ಹುದ್ದೆಗಳನ್ನು ನರವಾಣೆ ನಿರ್ವಹಿಸಿದ್ದಾರೆ. ಇವರ ಸೇವೆಗೆ ಹಲವು ಗೌರವಗಳೂ ಸಂದಿವೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಅತ್ಯುತ್ತಮ ಬೆಟಾಲಿಯನ್ ನಿರ್ವಹಣೆಗಾಗಿ ‘ಸೇನಾ ಪದಕ’, ನಾಗಾಲ್ಯಾಂಡ್‌ನಲ್ಲಿ ಅಸ್ಸಾಂ ರೈಫಲ್‌ನ ಇನ್‌ಸ್ಪೆಕ್ಟರ್ ಜನರಲ್ ಸೇವೆಗೆ ‘ವಿಶಿಷ್ಟ ಸೇವಾ ಪದಕ’, ಪ್ರತಿಷ್ಠಿತ ದಾಳಿ ಪಡೆ (ಸ್ಟೈಕ್ ಕಾರ್ಪ್ಸ್) ಮುನ್ನಡೆಸಿದ್ದಕ್ಕಾಗಿ ‘ಅತಿ ವಿಶಿಷ್ಟ ಸೇವಾ ಪದಕ’ ಅವರಿಗೆ ಒಲಿದಿವೆ. ಶಾಂತಿಪಾಲನಾ ಪಡೆಯೊಂದಿಗೆ ಶ್ರೀಲಂಕಾದಲ್ಲಿ ಕಾರ್ಯನಿರ್ವಹಿಸಿದ್ದ ನರವಾಣೆ ಕೆಲ ಕಾಲ ಮ್ಯಾನ್ಮಾರ್‌ನಲ್ಲಿಯೂ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದರು. ಜೂನ್ 1980ರಲ್ಲಿ ಸಿಖ್ ರೆಜಿಮೆಂಟ್‌ನಲ್ಲಿ ಕೆಲಸ ಆರಂಭಿಸಿದ್ದರು. ಇದನ್ನೂ ಓದಿ: ಕುಂಕುಮ ಇಟ್ಟು ಸುದ್ದಿಗೋಷ್ಠಿಗೆ ಬಂದು ಸೈನಿಕರಿಗೆ ಸಲಾಂ ಎಂದ ಸಿಎಂ

Share This Article