EXCLUSIVE: ಮತ್ತೆ ಆಪರೇಷನ್ ಕಮಲ ಸದ್ದು- ಬಳ್ಳಾರಿಯಲ್ಲಿ ರೆಡ್ಡಿ ಎಂಟ್ರಿ ಕೊಡ್ತಿದ್ದಂತೆ ‘ಆಪರೇಷನ್’..!

Public TV
2 Min Read

– ಬಳ್ಳಾರಿ ಕಾಂಗ್ರೆಸ್ ಮುಖಂಡರಿಂದ ಗಂಭೀರ ಆರೋಪ

ಬೆಂಗಳೂರು: ಗಾಲಿ ಜನಾರ್ದನ ರೆಡ್ಡಿ ಬಳ್ಳಾರಿಗೆ ಬಂದ ಬಳಿಕ ಬಳ್ಳಾರಿ ರಾಜಕೀಯದಲ್ಲಿ ಸಂಚಲನ ಉಂಟಾಗಿದೆ. ಹನ್ನೊಂದು ವರ್ಷಗಳ ಬಳಿಕ ಬಳ್ಳಾರಿಗೆ ಕಾಲಿಟ್ಟಿರುವ ರೆಡ್ಡಿ ಸುಮ್ಮನೆ ಕುಳಿತಿಲ್ಲ. ಹೌದು ಗಾಲಿ ಜನಾರ್ದನ ರೆಡ್ಡಿ ಮತ್ತೆ ಆಪರೇಷನ್ ಕಮಲಕ್ಕೆ ಕೈ ಹಾಕಿದ್ದಾರೆ ಎನ್ನುವ ಗಂಭೀರ ಆರೋಪ ಕೇಳಿಬಂದಿದೆ. ಪಾಲಿಕೆ ಚುನಾವಣೆಯಲ್ಲಿ ಸೋತು ಸುಣ್ಣವಾಗಿರುವ ಬಿಜೆಪಿ ಪಾಲಿಕೆಯನ್ನು ತನ್ನ ತೆಕ್ಕೆಗೆ ಹಾಕಿಕೊಳ್ಳಲು ಆಪರೇಷನ್ ಕಮಲಕ್ಕೆ ಮುಂದಾಗಿದೆ ಎನ್ನುವ ಗಂಭೀರ ಆರೋಪವನ್ನು ಕಾಂಗ್ರೆಸ್ ಮುಖಂಡರು ಮಾಡಿದ್ದಾರೆ.

ಬಳ್ಳಾರಿಗೆ ಬಂದ ಬಳಿಕ ಮತ್ತೆ ಆಪರೇಷನ್ ಕಮಲ ಸದ್ದು ಮಾಡುತ್ತಿದೆ. ಹೀಗಂತ ಗಣಿ ನಾಡು ಬಳ್ಳಾರಿ ಕಾಂಗ್ರೆಸ್ ಮುಖಂಡರು ಗಂಭೀರ ಆರೋಪ ಮಾಡುತ್ತಿದ್ದಾರೆ. ಮಹಾನಗರ ಪಾಲಿಕೆಯ ಚುನಾವಣೆ ನಡೆದು 9 ತಿಂಗಳು ಕಳೆದಿದೆ. ಹಿಂಬಾಗಿಲಿನಿಂದ ಬಿಜೆಪಿ ಅಧಿಕಾರ ಹಿಡಿಯಲು ಮುಂದಾಗಿದ್ದು, ಪಾಲಿಕೆ ಚುನಾವಣೆಯಲ್ಲಿ ಹೀನಾಯವಾಗಿ ಸೋಲುಕಂಡಿದೆ. ಇದು ಇಲ್ಲಿನ ಸಚಿವ ಶ್ರೀರಾಮುಲು ಹಾಗೂ ಸೋಮಶೇಖರ್, ಜನಾರ್ದನ ರೆಡ್ಡಿ ಆಪ್ತ ಅಲಿಖಾನ್ ಮುಖಾಂತರ ಆಪರೇಷನ್ ಕಮಲ ಮಾಡುತ್ತಿದ್ದಾರೆ. ಪಾಲಿಕೆಯ ಒಬ್ಬ ಸದಸ್ಯರಿಗೆ ಒಂದು ಕೋಟಿ ಆಮಿಷ ಒಡ್ಡಿದ್ದಾರೆ. ಒಂದು ಕಾರು, ಒಂದು ಸೈಟ್ ಕೊಡುವುದಾಗಿ ಆಮಿಷ ಒಡ್ಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಈ ಕುರಿತು ಬಳ್ಳಾರಿ ಗ್ರಾಮೀಣ ಶಾಸಕ ನಾಗೇಂದ್ರ ಹಾಗೂ ರಾಜ್ಯಸಭಾ ಸದಸ್ಯ ಜಂಟಿ ಪತ್ರಿಕಾಗೋಷ್ಠಿ ನಡೆಸಿ ಬಿಜೆಪಿ ಮುಖಂಡರ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಇದನ್ನೂ ಓದಿ: ಜನಾರ್ದನ ರೆಡ್ಡಿ ರೀ ಎಂಟ್ರಿ ಮಾಡದಿದ್ದರೆ ರಾಮುಲು ಏಕಾಂಗಿ ಹೋರಾಟನಾ..?

ಮಹಾನಗರ ಪಾಲಿಕೆಯ 39 ಸ್ಥಾನಗಳಿಗೆ ಏಪ್ರಿಲ್ 28 ರಂದು ಚುನಾವಣೆ ನಡೆದು, 30 ರಂದು ಮತೆಣಿಕೆಯೂ ಮುಗಿದಿತ್ತು. ನಗರದ ವ್ಯಾಪ್ತಿಯ 28 ಗ್ರಾಮೀಣ ವ್ಯಾಪ್ತಿಯ 11 ವಾರ್ಡ್ ಗಳಲ್ಲಿ ಕ್ರಮವಾಗಿ ಕಾಂಗ್ರೆಸ್ 21, ಬಿಜೆಪಿ 13 ಹಾಗೂ 5 ಜನ ಪಕ್ಷೇತರರಾಗಿ ಆಯ್ಕೆಯಾಗಿದ್ರು. ಪಕ್ಷೇತರರಲ್ಲಿ ಈಗಾಗಲೇ 3 ಜನ ಸದಸ್ಯರು ಕಾಂಗ್ರೆಸ್ ಸೇರ್ಪಡೆಯಾಗಿದ್ದು, ಇನ್ನಿಬ್ಬರು ಸೇರ್ಪಡೆಯಾಗಲಿದ್ದಾರೆ. ಇದು ಸಹಜವಾಗಿಯೇ ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರಕ್ಕೇರುವ ಎಲ್ಲಾ ದಾರಿಗಳನ್ನು ಕ್ಲಿಯರ್ ಇದೆ. ಆದ್ರೆ ಈಗ ಬಿಜೆಪಿ ಚುನಾವಣೆ ನಡೆದು ಒಂಬತ್ತು ತಿಂಗಳು ಕಾಲ ಹರಣ ಮಾಡಿ ಪಾಲಿಕೆ ಮೇಯರ್ ಚುನಾವಣೆ ನಡೆಸುತ್ತಿಲ್ಲ. ಕಾರಣ ಹೇಗಾದರೂ ಮಾಡಿ ಪಾಲಿಕೆ ಕಚೇರಿಯ ಮೇಲೆ ಬಿಜೆಪಿ ದ್ವಜ ಹಾರಿಸಬೇಕು ಎನ್ನುವ ಪ್ಲ್ಯಾನ್ ನಲ್ಲಿ ಇಲ್ಲಿನ ಬಿಜೆಪಿ ನಾಯಕರಿದ್ದಾರೆ. ಇನ್ನು ಪಕ್ಷೇತರರು ಸೇರಿದಂತೆ ಕಾಂಗ್ರೆಸ್ ಏಳು ಜನ ಪಾಲಿಕೆ ಮೆಂಬರ್ ಗಳನ್ನು ತಮ್ಮ ಮನೆಗೆ ಕರೆಸಿಕೊಂಡು ಕುದುರೆ ವ್ಯಾಪಾರ ಮಾಡಿದ್ದಾರೆ ಎನ್ನುವ ಆರೋಪ ಮಾಡಿದ್ದಾರೆ.

ಒಟ್ಟಿನಲ್ಲಿ ಗಾಲಿ ಜನಾರ್ದನ ರೆಡ್ಡಿ ಬಂದ ಬಳಿಕ, ಬಳ್ಳಾರಿ ರಾಜಕೀಯದಲ್ಲಿ ಸಂಚಲನ ಮೂಡಿದ್ದು ಮಾತ್ರ ಸತ್ಯ. ಮುಂದಿನ ಎರಡು ದಿನಗಳಲ್ಲಿ ಗಾಲಿ ಜನಾರ್ದನ ರೆಡ್ಡಿ ಪಾಲಿಕೆ ಸದಸ್ಯರ ಕುದುರೆ ವ್ಯಾಪಾರದ ವೀಡಿಯೋ ರಿಲೀಸ್ ಆಗಲಿದೆ. ಆದರೆ ಇದಕ್ಕೆ ಉತ್ತರ ಕೊಡಲು ಸಹ ಬಿಜೆಪಿ ತಯಾರಿ ನಡೆಸಿದೆ.

Share This Article
Leave a Comment

Leave a Reply

Your email address will not be published. Required fields are marked *