5 ವರ್ಷ ಸಿಎಂ ಆಗಿ ಮುಂದುವರಿಯೋ ವಿಚಾರ ಗೊತ್ತಿರೋದು ಸಿದ್ದರಾಮಯ್ಯ, ಡಿಸಿಎಂಗೆ ಮಾತ್ರ: ಪರಂ

Public TV
2 Min Read

ಬೆಂಗಳೂರು: 5 ವರ್ಷ ಸಿಎಂ ಆಗಿ ಮುಂದುವರಿಯುವ ವಿಚಾರ ಗೊತ್ತಿರುವುದು ಸಿದ್ದರಾಮಯ್ಯ (Siddaramaiah) ಹಾಗೂ ಡಿಸಿಎಂ ಡಿಕೆ ಶಿವಕುಮಾರ್‌ಗೆ (DK Shivakumar) ಮಾತ್ರ ಎಂದು ಗೃಹ ಸಚಿವ ಡಾ.ಜಿ ಪರಮೇಶ್ವರ್ (G Parameshwar) ಹೇಳಿದ್ದಾರೆ.

ಸಿಎಂ ಆಗಿ ನಾನೇ 5 ವರ್ಷ ಮುಂದುವೆಯುತ್ತೇಂಬ ಸಿದ್ದರಾಮಯ್ಯ ಹೇಳಿಕೆ ವಿಚಾರದ ಕುರಿತು ಸುದ್ದಿಗಾರರಿಗೆ ಪ್ರತಿಕ್ರಿಯಿಸಿ, ನಮಗೆ ಯಾರಿಗೂ ಗೊತ್ತಿಲ್ಲ ದೆಹಲಿಯಲ್ಲಿ ಸರ್ಕಾರ ರಚನೆ ಯಾದಾಗ ಏನೂ ತೀರ್ಮಾನ ಮಾಡಿದ್ದಾರೆ ಗೊತ್ತಿಲ್ಲ. ಅದು ಗೊತ್ತಿರೋದು ಸಿಎಂ ಹಾಗೂ ಡಿಸಿಎಂಗೆ ಮಾತ್ರ. ಅವರಿಗೆ ಮಾತ್ರ ಎಲ್ಲ ಗೊತ್ತಿರೋದು. ಆ ವಿಚಾರದಲ್ಲಿ ನಾವು ಹೇಳಿಕೆ ಕೊಡೋಕೆ ಸರಿ ಕಾಣಿಸಲ್ಲ. ಈ ಸಂದರ್ಭದಲ್ಲಿ ಪ್ರಧಾನಕಾರ್ಯದರ್ಶಿಗಳು ಬಂದು ಹೋಗಿದ್ದಾರೆ. ಬಹುಶಃ ಅವರಿಗೆ ಗೊತ್ತಿರುತ್ತೆ ಎಂದರು.

ಯಾವುದು ಸತ್ಯ ಯಾವುದು ಅಸತ್ಯ ಅಂತಾ ನಾನು ಜಡ್ಜ್ ಮಾಡೊಕ್ಕೆ ಆಗುತ್ತಾ?. ಅವರು ಹೇಳಿದ್ದಾರೆ ಏನೋ ಅರ್ಥ ಇರಬೇಕು. ನಾನು ವೈಯಕ್ತಿಕವಾಗಿ ಜಡ್ಜ್ಮೆಂಟ್ ಮಾಡೋಕ್ಕೆ ಆಗಲ್ಲ ಎಂದರು. ಇದನ್ನೂ ಓದಿ: ಇನ್ನೂ ಮೂರ್ನಾಲ್ಕು ದಿನದಲ್ಲಿ ಲೋಕಸಭಾ ಚುನಾವಣಾ ಅಭ್ಯರ್ಥಿಗಳ ಪಟ್ಟಿ ಸಿದ್ಧ: ಡಿಸಿಎಂ

ಸಿಎಂ ಹೇಳಿಕೆ ರಾಜಕೀಯ ಬಣಕ್ಕೆ ಕಾರಣವಾಗುತ್ತಾ ಎಂಬ ವಿಚಾರದ ಕುರಿತು ಮಾತನಾಡಿ, ಏನೂ ಆಗಲ್ಲ ಅದರ ಬಗ್ಗೆ ಹೆಚ್ಚು ಚರ್ಚೆ ಮಾಡೋದು ಬೇಡ ಅನ್ನೊದು ನನ್ನ ಅನಿಸಿಕೆ. ನಾನಂತೂ ಅದರ ಬಗ್ಗೆ ಯಾವುದೇ ಪ್ರತಿಕ್ರಿಯೆ ಕೊಡುವುದಕ್ಕೆ ಹೋಗಲ್ಲ ಎಂದು ಹೇಳಿದರು. ಇದನ್ನೂ ಓದಿ: ಹೈಕಮಾಂಡ್ ನೀನು ಸಿಎಂ ಆಗು ಅಂದ್ರೆ ನಾನು ಸಿದ್ಧ: ಪ್ರಿಯಾಂಕ್ ಖರ್ಗೆ

ಮಾಜಿ ಸಿಎಂ ಬಿಎಸ್ ವೈ ಸರ್ಕಾರಕ್ಕೆ ಗಡುವು ಕೊಡಲು ಅವರಿಗೆ ಹಕ್ಕಿದೆ ಸ್ವಾತಂತ್ರ‍್ಯ ಇದೆ. ಅದು ಬೇರೆ ವಿರೋಧ ಪಕ್ಷದಲ್ಲಿದ್ದಾರೆ. ಸರ್ಕಾರವನ್ನ ಎಚ್ಚರಿಕೆ ಮಾಡೋ ಕೆಲಸ ಮಾಡಲಿ. ನಾವು ಬಹಳ ಎಚ್ಚೆತ್ತುಕೊಳ್ಳುತ್ತೇವೆ. ಅದನ್ನ ನಾವು ನಿರ್ಲಕ್ಷ್ಯ ಮಾಡೋದು ಇಲ್ಲ. ಅವರು ಏನು ಹೇಳ್ತಾರೆ ಅದನ್ನ ನಾವು ಕೇಳ್ತಿವಿ. ಪಾಸಿಟಿವ್ ಕ್ರಿಟಿಸಿಸಂ ಇರಲಿ ಅನಾವಶ್ಯಕವಾಗಿ ಮಾತನಾಡೋದು ಬೇಡ. ಸರ್ಕಾರವನ್ನ ಎಚ್ಚರಿಸೋದು ವಿರೋಧ ಪಕ್ಷದ ಕೆಲಸ ಅದೇ ಅಲ್ವಾ. ಈಗ 5 ಗ್ಯಾರಂಟಿ ಕೊಟ್ಟಿದ್ದೇವೆ ಯಾವುದು ನಿಲ್ಲಿಸಿಲ್ಲ. ಸ್ವಲ್ಪ ಹಣಕಾಸು ಸಮಸ್ಯೆಯಾಗಿದೆ. ಅದು ಬಿಟ್ರೆ ಏನು ಇಲ್ಲ ಯಾವುದೇ ಯೋಜನೆ ನಿಲಿಸಿಲ್ಲ ಎಂದರು.

ಕಾಂತರಾಜು ಕಮಿಟಿ ವರದಿಗೆ ಒಕ್ಕಲಿಗರ ವಿರೋಧ ವ್ಯಕ್ತವಾಗುತ್ತಿರುವ ಕುರಿತು ಸಿಎಂ ಅವರನ್ನು ಭೇಟಿ ಮಾಡ್ತೀವಿ ಅಂತ ಸ್ವಾಮೀಜಿ ಹೇಳಿದ್ದಾರೆ. ಭೇಟಿ ಮಾಡಲಿ ಸಿಎಂ ಜೊತೆ ಚರ್ಚೆ ಆದ ಮೇಲೆ ಕಾದು ನೋಡೋಣ. ಸದಾಶಿವ ವರದಿ, ಕಾಂತರಾಜು ವರದಿ ಎಷ್ಟು ದಿನ ಕಾಯೋಕೆ ಆಗುತ್ತೆ. ಸದಾಶಿವ ಆಯೋಗ ವರದಿಗೆ ಹಣ ಖರ್ಚು ಮಾಡಿದ್ದೇವೆ. ಕಾಂತರಾಜು ಕಮಿಟಿ ವರದಿಗೆ 120 ಕೋಟಿ ಖರ್ಚು ಮಾಡಿದ್ದೇವೆ. ಇಷ್ಟೆಲ್ಲಾ ಖರ್ಚು ಮಾಡಿ ಡೇಟಾ ಕಲೆಕ್ಟ್ ಮಾಡಿ. ಪಬ್ಲಿಕ್ ಡೊಮೆನ್ ಗೆ ತರಲಿಲ್ಲ ಅಂದರೆ ಹೇಗೆ?. ಅಭಿಪ್ರಾಯ ಬರುತ್ತಿದೆ ಪರ ವಿರೋಧ ಇದೆ. ಸ್ವಾಮೀಜಿ ಅವರು ಸಿಎಂ ಅವರನ್ನ ಭೇಟಿ ಮಾಡಬೇಕು ಅಂತ ಹೇಳಿದ್ದಾರೆ. ಚರ್ಚೆ ಮಾಡಲಿ ಏನು ಫಲಿತಾಂಶ ಬರುತ್ತೆ ನೋಡೋಣ.

Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್