KRS ಡ್ಯಾಂ ಭರ್ತಿಗೆ 11 ಅಡಿಯಷ್ಟೇ ಬಾಕಿ

By
1 Min Read

ಮಂಡ್ಯ: ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆ ಹೆಚ್ಚಾಗಿರುವ ಹಿನ್ನೆಲೆ ಹಳೆಮೈಸೂರು ಭಾಗದ ಜೀವನಾಡಿಯಾಗಿರುವ ಕೆಆರ್‌ಎಸ್ ಡ್ಯಾಂ (KRS Dam) ಭರ್ತಿಗೆ ಕೇವಲ 11 ಅಡಿಗಳಷ್ಟೇ ಬಾಕಿಯಿದೆ.

ಕಳೆದ ಮೂರು ದಿನಗಳಿಂದಲೂ ಕಾವೇರಿ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿದೆ. ಸದ್ಯ ಕೆಆರ್‌ಎಸ್ ಡ್ಯಾಂಗೆ 29,368 ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, ಪರಿಣಾಮ 24 ಗಂಟೆಗಳಲ್ಲಿ ಕನ್ನಂಬಾಡಿ ಕಟ್ಟೆಯಲ್ಲಿ 4 ಟಿಎಂಸಿ ನೀರು ಶೇಖರಣೆಯಾಗಿದೆ.ಇದನ್ನೂ ಓದಿ: ಇಸ್ರೇಲ್-ಇರಾನ್ ಯುದ್ಧ ಭೀತಿ; ಭಾರತಕ್ಕೆ ಹೆಚ್ಚಿದ ಆತಂಕ

124.80 ಅಡಿಗಳ ಗರಿಷ್ಠ ಮಟ್ಟ ಹೊಂದಿರುವ ಕೆಆರ್‌ಎಸ್ ಡ್ಯಾಂ 113.25 ಅಡಿಯಷ್ಟು ಭರ್ತಿಯಾಗಿದೆ. ಸಂಪೂರ್ಣ ಭರ್ತಿಗೆ ಇನ್ನೂ 11 ಅಡಿಗಳಷ್ಟೇ ಬಾಕಿ ಇದೆ. ಇನ್ನೂ 49.452 ಟಿಎಂಸಿಯ ಗರಿಷ್ಠ ಸಾಮಾರ್ಥ್ಯ ಹೊಂದಿರುವ ಕೆಆರ್‌ಎಸ್ ಡ್ಯಾಂನಲ್ಲಿ ಸದ್ಯ 35.118 ಟಿಎಂಸಿಯಷ್ಟು ನೀರು ಶೇಖರಣೆಯಾಗಿದೆ.

ಇನ್ನೂ 14 ಟಿಎಂಸಿ ನೀರು ಬಂದರೆ ಕೆಆರ್‌ಎಸ್ ಡ್ಯಾಂ ಸಂಪೂರ್ಣ ಭರ್ತಿಯಾಗುತ್ತದೆ. ಹಳೆ ಮೈಸೂರು ಭಾಗದ ಜೀವನಾಡಿ ಕೆಆರ್‌ಎಸ್ ಡ್ಯಾಂ ಭರ್ತಿಯಾಗುತ್ತಿರುವುದು ರೈತರಲ್ಲಿ ಸಂತಸ ಮೂಡಿಸಿದೆ.ಇದನ್ನೂ ಓದಿ: ಕೆನಡಾ ಪ್ರಧಾನಿ ಮಾರ್ಕ್ ಕಾರ್ನಿ ಭೇಟಿಯಾದ ಮೋದಿ – ಹೊಸ ಹೈಕಮೀಷನರ್ ನೇಮಿಸಲು ಸಮ್ಮತಿ

 

Share This Article