ಆನ್‌ಲೈನ್‌ ಗೇಮಿಂಗ್‌ ಮಸೂದೆಗೆ ರಾಷ್ಟ್ರಪತಿ ಅಂಕಿತ

Public TV
1 Min Read

ನವದೆಹಲಿ: ಸಂಸತ್ತಿನ ಉಭಯ ಸದನಗಳಲ್ಲಿ ಅಂಗೀಕಾರವಾಗಿದ್ದ ಆನ್‌ಲೈನ್‌ ಗೇಮ್‌ಗಳನ್ನು (Online Gaming Bill) ನಿಷೇಧಿಸುವ ಮಸೂದೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ಶುಕ್ರವಾರ ಅಂಕಿತ ಹಾಕಿದ್ದಾರೆ.

ಹಣ ಕಟ್ಟಿ ಆಡಲಾಗುವ ಎಲ್ಲಾ ಆನ್‌ಲೈನ್‌ ಗೇಮ್‌ಗಳನ್ನು ಕಾನೂನು ನಿಷೇಧಿಸುತ್ತದೆ. ಆನ್‌ಲೈನ್‌ ಗೇಮ್‌ ಆಡುವುದಕ್ಕೆ ಅವಕಾಶ ಹಾಗೂ ಪ್ರೋತ್ಸಾಹ ನೀಡುವವರಿಗೆ 3 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು 1 ಕೋಟಿಯವರೆಗೆ ದಂಡ ವಿಧಿಸಲಾಗುವುದು. ಇದನ್ನೂ ಓದಿ: ಆನ್‌ಲೈನ್‌ ಗೇಮಿಂಗ್‌ ಮಸೂದೆ ಪಾಸ್‌ – ಪ್ರಚಾರ ಮಾಡಿದ್ರೂ ಜೈಲು ಶಿಕ್ಷೆ ಫಿಕ್ಸ್‌!

ಅಂತಹ ಆಟಗಳ ಕುರಿತು ಜಾಹೀರಾತು ಪ್ರಕಟಿಸಿದರೆ ಎರಡು ವರ್ಷಗಳವರೆಗೆ ಶಿಕ್ಷೆ ಮತ್ತು 50 ಲಕ್ಷ ದಂಡ ವಿಧಿಸಬಹುದಾಗಿದೆ. ಅಪರಾಧಗಳ ಪುನರಾವರ್ತನೆ ಕಂಡುಬಂದಲ್ಲಿ 3-5 ವರ್ಷ ಜೈಲು ಮತ್ತು 2 ಕೋಟಿ ವರೆಗೆ ದಂಡ ವಿಧಿಸಬಹುದಾಗಿದೆ.

ಆನ್‌ಲೈನ್‌ ಗೇಮ್‌ ಒಂದು ವ್ಯಸನವಾಗಿ ಮಾರ್ಪಟ್ಟಿದೆ. ಇದಕ್ಕೆ ಮಾರುಹೋಗುವವರ ಸಂಖ್ಯೆಯೂ ಹೆಚ್ಚುತ್ತಿದೆ. ಈ ಗೇಮಿಂಗ್‌ ಆಪ್‌ಗಳ ಮೂಲಕ ಹಣ ಅಕ್ರಮ ವರ್ಗಾವಣೆ ಆಗುತ್ತಿದೆ. ಅಲ್ಲದೇ, ಹಣಕಾಸು ವಂಚನೆ ಪ್ರಕರಣಗಳು ಹೆಚ್ಚುತ್ತಿವೆ. ಇದಕ್ಕೆ ಕಡಿವಾಣ ಹಾಕಲು ಕೇಂದ್ರ ಸರ್ಕಾರ ಈ ಮಸೂದೆ ರೂಪಿಸಿದೆ. ಇದನ್ನೂ ಓದಿ: ಗೇಮಿಂಗ್ ಆ್ಯಪ್‌ಗಳಿಗೆ ಅಕ್ರಮ ಹಣ ವರ್ಗಾವಣೆ ಆರೋಪ; `ಕೈʼ ಶಾಸಕ ವೀರೇಂದ್ರ ಪಪ್ಪಿ ಸಿಕ್ಕಿಂನಲ್ಲಿ ED ವಶಕ್ಕೆ

Share This Article