ಆನ್‌ಲೈನ್ ಮೂಲಕ 20 ಲಕ್ಷ ವಂಚನೆ; ಬೆಂಗಳೂರು ಮೂಲದ ದಂಪತಿ ಅರೆಸ್ಟ್‌

1 Min Read

ಕೋಲಾರ: ಕೋಲಾರ (Kolar) ಸೈಬರ್ ಕ್ರೈಮ್ ಪೊಲೀಸರು ಕಾರ್ಯಾಚರಣೆ‌ ನಡೆಸಿ ಖಾಸಗಿ ಶಾಲೆ ಶಿಕ್ಷಕಿಗೆ 20 ಲಕ್ಷ ವಂಚಿಸಿದ್ದ ದಂಪತಿಯನ್ನು ಬಂಧಿಸಿದ್ದಾರೆ.

ಮಾಲೂರಿನ ಖಾಸಗಿ ಶಾಲಾ ಶಿಕ್ಷಕಿಯೊಬ್ಬರಿಗೆ ವಂಚಿಸಿದ್ದ ಕಿರಾತಕ ದಂಪತಿಯನ್ನು ಕೋಲಾರ ಪೊಲೀಸರು ಬಂಧಿಸಿದ್ದಾರೆ. ನಕಲಿ Meesho Gift ಕಾರ್ಡ್‌ನ್ನು ಕಳಿಸಿ ಅದರಲ್ಲಿ 10,50,000 ರೂ. ನಗದು, 150 ಗ್ರಾಂ ಚಿನ್ನ, ಎರಡು ಐಪೋನ್ ಲಾಟರಿ ಗೆದ್ದಿರುವುದಾಗಿ ಆಮಿಷವೊಡ್ಡಿದ್ದರು. ಮೊದಲಿಗೆ ಪ್ರೊಸೆಸಿಂಗ್ ಶುಲ್ಕ ಎಂದು ಒಟ್ಟು 20 ಲಕ್ಷ ರೂ. ಆನ್‌ಲೈನ್ ಮೂಲಕ ವರ್ಗಾವಣೆ ಮಾಡಿಸಿಕೊಂಡಿದ್ದಾರೆ. ಇದನ್ನೂ ಓದಿ: ವಸತಿ ನಿಲಯದಲ್ಲಿ ಮಗುವಿಗೆ ಜನ್ಮಕೊಟ್ಟ 10ನೇ ತರಗತಿ ವಿದ್ಯಾರ್ಥಿನಿ – ವೈದ್ಯರು, ಶಿಕ್ಷಕರು ಸೇರಿ ಆರು ಜನರ ವಿರುದ್ಧ FIR

ಬೆಂಗಳೂರು ಮೂಲದ ಸೈಬ‌ರ್ ವಂಚನೆ ಜಾಲ ನಡೆಸುತ್ತಿದ್ದ ಈ ದಂಪತಿಯ ಆನ್‌ಲೈನ್ ಜಾಲದಲ್ಲಿ ಸಿಲುಕಿ ಹಲವರು ಮೋಸ ಹೋಗಿದ್ದಾರೆ ಎನ್ನಲಾಗಿದೆ. ಬೆಂಗಳೂರು ರಾಧ@ ಪಾವನ ಹಾಗೂ ಸತೀಶ್ ಬಂಧಿತ ಅರೋಪಿಗಳಾಗಿದ್ದಾರೆ. 7 ತಿಂಗಳ ಹಿಂದೆಯಷ್ಟೆ ಕೋಲಾರ ಜಿಲ್ಲೆ ಮಾಲೂರು ಮೂಲದ ಖಾಸಗಿ ಶಾಲೆ ಶಿಕ್ಷಕಿಗೆ ಆನ್‌ಲೈನ್ ಮೂಲಕ 20 ಲಕ್ಷ ರೂಪಾಯಿ ವಂಚನೆ ಮಾಡಿದ್ದರು. ಪ್ರಕರಣ ದಾಖಲಿಸಿ ತನಿಖೆ ಕೈಗೊಂಡು‌ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಪೋಸ್ಟ್ ಮೂಲಕ Meesho Online PVT Itd. ಲೆಟರ್ ಹೆಡ್ ಇರುವ ಗಿಫ್ಟ್ ಕಾರ್ಡ್‌ನ್ನ ಕಳುಹಿಸಿ ಮೋಸ ಮಾಡಿದ್ದಾರೆ. ದೇಶದ ಹಲವೆಡೆ ಸೈಬ‌ರ್ ವಂಚನೆ ನಡೆಸಿರುವ ಗುಮಾನಿ ಇದ್ದು, ಹಣವನ್ನೆಲ್ಲಾ ಐಶಾರಾಮಿ ಜೀವನಕ್ಕೆ ಖರ್ಚು ಮಾಡಿಕೊಂಡಿರುವುದು ವಿಚಾರಣೆಯಿಂದ ಬೆಳಕಿಗೆ ಬಂದಿದೆ. ಇದನ್ನೂ ಓದಿ: ಸಿಲಿಂಡರ್ ಸ್ಫೋಟ – 7 ವರ್ಷದ ಹಿಂದೆ ನಿರ್ಮಿಸಿದ್ದ ಮನೆಯ ಗೋಡೆ ಕುಸಿತ

Share This Article